Home Latest News ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರ ಗ್ರಾಚ್ಯುಟಿ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
Latest NewschikamagalurHomenamma chikmagalur

ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರ ಗ್ರಾಚ್ಯುಟಿ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Share
Share

ಚಿಕ್ಕಮಗಳೂರು: ಈಗಾಗಲೇ ನಿವೃತ್ತಿಯಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರುಗಳಿಗೆ ಗ್ರಾಚ್ಯುಟಿ ಸೌಲಭ್ಯವನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಎಐಟಿಯುಸಿ ಸಂಯೋಜಿತ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಇಂದು ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು.

ಶನಿವಾರ ಬೆಳಿಗ್ಗೆ ಚಿಕ್ಕಮಗಳೂರು ನಗರದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ ನೂರಕ್ಕೂ ಹೆಚ್ಚು ನಿವೃತ್ತಿಹೊಂದಿರುವ ಅಂಗನವಾಡಿ ನೌಕರರು ತಮ್ಮ ಇಳಿ ವಯಸ್ಸಿನಲ್ಲಿ ಜೀವನ ನಿರ್ವಹಿಸಲು ಅನುಕೂಲ ವಾಗುವಂತೆ ಗ್ರಾಚ್ಯುಟಿ ಸೌಲಭ್ಯವನ್ನು ಜಾರಿಗೊಳಿಸಬೇಕೆಂದು ಆಗ್ರಹಿಸುವ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈಗಾಗಲೇ ರಾಜ್ಯ ಸರ್ಕಾರ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿಯನ್ನು ಜಾರಿಗೊಳಿಸಿದ್ದು, ೨೦೨೩ನೇ ಸಾಲಿನಿಂದ ನಿವೃತ್ತರಾದವರಿಗೆ ಮಾತ್ರ ಅನ್ವಯಿಸಿ ಆದೇಶಿಸಿದೆ. ಆದರೆ ಸೇವೆಗೆ ಸೇರಿ ೨೦೧೧- ೧೨ ರಿಂದ ನಿವೃತ್ತಿಗೊಂಡ ನೌಕರರನ್ನು ಗ್ರಾಚ್ಯುಟಿ ವ್ಯಾಪ್ತಿಗೆ ಒಳಪಡಿಸದೆ ಇರುವುದರಿಂದ ವಯೋವೃದ್ಧರ ಜೀವನಕ್ಕೆ ಸಂಕಷ್ಟ ಎದುರಾಗಿದೆ. ಆದುದರಿಂದ ರಾಜ್ಯ ಸರ್ಕಾರ ಕೂಡಲೇ ಅಂಗನವಾಡಿ ಸೇವೆಗೆ ಸೇರಿ ನಿವೃತ್ತರಾಗಿರುವ ಎಲ್ಲರಿಗೂ ಗ್ರಾಚ್ಯುಟಿಯನ್ನು ಬಿಡುಗಡೆ ಮಾಡಬೇಕೆಂದು ಕೋರಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಅಂಗನವಾಡಿ ಫೆಡರೇಷನ್ ರಾಜ್ಯಾಧ್ಯಕ್ಷ ಬಿ.ಅಮ್ಜದ್ ಜಿಲ್ಲಾಧ್ಯಕ್ಷೆ ಗ್ರೇಟ್ಟಾ ಫರ್ನಾಂಡಿಸ್ ವಿವಿಧ ತಾಲೂಕುಗಳ ಅಧ್ಯಕ್ಷರಾದ ಚಿಕ್ಕಮಗಳೂರಿನ ಶೈಲಾ ಬಸವರಾಜು, ಕಡೂರಿನ ಯು. ಆರ್. ಪಾರ್ವತಮ್ಮ, ಮೂಡಿಗೆರೆ ಶೈಲಾ ನಾರಾಯಣಗೌಡ, ತರೀಕೆರೆಯ ಸವಿತಾ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್. ಎಲ್. ರಾಧಾ ಸುಂದರೇಶ್, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಸಿ. ಧರ್ಮರಾಜು ಹಾಗೂ  ಜಿ. ರಮೇಶ್ ಇದ್ದg ಇದ್ದರು

Protest demanding gratuity benefits for retired Anganwadi workers

Share

Leave a comment

Leave a Reply

Your email address will not be published. Required fields are marked *

Don't Miss

ಧಾರಾಕಾರ ಮಳೆ ನಡುವೆ ಗಿರಿಪ್ರದೇಶಕ್ಕೆ ಪ್ರವಾಸಿಗರ ಧಾಂಗುಡಿ

ಚಿಕ್ಕಮಗಳೂರು: ನಗರ ಸಮೀಪದ ಗಿರಿಪ್ರದೇಶದಲ್ಲಿ ಧಾರಾಕಾರ ಮಳೆಸುರಿಯುತ್ತಿದ್ದು, ಇದರ ನಡುವೆಯೇ ಗಿರಿಭಾಗಕ್ಕೆ ಭಾರೀ ಪ್ರವಾಸಿಗರ ದಂಡು ಭೇಟಿಕೊಟ್ಟಿದೆ. ಕಾರು, ಬೈಕ್, ಟಿಟಿ ಸೇರಿದಂತೆ ೧೮೫೦ ವಾಹನಗಳು ಗಿರಿಭಾಗಕ್ಕೆ ಪ್ರವಾಸಿಗರನ್ನು ಕರೆದೊಯ್ದಿದೆ. ಭಾರೀ...

ಮೈಮೆಲೆ ಬಿಸಿನೀರು ಬಿದ್ದು ಹೆಣ್ಣುಮಗುವಿಗೆ ಗಾಯ

ಚಿಕ್ಕಮಗಳೂರು: ಜಿಲ್ಲಾಮಕ್ಕಳ ಘಟಕದ ದತ್ತು ಸಂಸ್ಥೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಒಂದು ವರ್ಷ ಮೂರು ತಿಂಗಳ ಹೆಣ್ಣುಮಗುವಿಗೆ ಸುಟ್ಟಗಾಯವಾಗಿದ್ದು ಇದರಿಂದ ಹೆಣ್ಣುಮಗು ನರಳುವಂತಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಗಾಂಧಿನಗರದಲ್ಲಿರುವ ದತ್ತು...

Related Articles

ವಸೂಲಿವೀರ ಅದಕ್ಷ ಡಿ.ಡಿ.ಪಿ.ಐ ಪುಟ್ಟರಾಜುಗೆ ಕಡ್ಡಾಯ ರಜೆ

ಚಿಕ್ಕಮಗಳೂರು; ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾರ್ವಜನಿಕ ಶಿಕ್ಷಣ ಅಧಿಕಾರಿ ಪುಟ್ಟರಾಜು ಕಡ್ಡಾಯ ರಜೆ ಮೇಲೆ...

ನಯನ ಮೋಟಮ್ಮ ಕ್ಷೇತ್ರ ದರ್ಶನಕ್ಕೆ ಬಾರಮ್ಮ

ಮೂಡಿಗೆರೆ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡಬಿಡದೆ ಮಳೆ ಬರುತ್ತಿದ್ದು ಅನಾಹುತದ ಸಂಭವಿಸಿ ಹಲವರು ಪ್ರಾಣ...

ಜು.28ಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳ

ಚಿಕ್ಕಮಗಳೂರು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ವಸಾಹತು ಹಿಂಭಾಗ, ಜಿಲ್ಲಾ ಪಂಚಾಯಿತಿ ಹತ್ತಿರ, ಜ್ಯೋತಿನಗರ, ಚಿಕ್ಕಮಗಳೂರು)...

ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಕುದುರೆಮುಖ, ಮುಳ್ಳಯ್ಯನ...