ಚಿಕ್ಕಮಗಳೂರು: ಅಜ್ಜಂಪುರದ ಗುರು ಸಿದ್ದರಾಮೇಶ್ವರ ಭವನದಲ್ಲಿ ಏರ್ಪಡಿಸಲಾಗಿದ್ದ ನೊಳಂಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಡಿ.ಎಸ್ ಸುರೇಶ್‌ರವರು ಸಮಾಜದ ಬಗ್ಗೆ ಉದ್ದಟತನದ ಹೇಳಿಕೆ ನೀಡಿರುವುದನ್ನು ನೊಳಂಬ ಸಮಾಜದ ಮುಖಂಡರು, ವಕೀಲರೂ ಆದ ರವಿ ಶ್ಯಾನುಭೋಗ್ ಅವರು ಖಂಡಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಾಜಿ ಶಾಸಕ ಸುರೇಶ್‌ರವರು ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯಬೇಕು ಮತ್ತು ನೊಳಂಬ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಅವರು, ಇಲ್ಲದಿದ್ದರೆ ಜು.೨೫ ರಂದು ಸುರೇಶ್‌ರವರ ಮನೆ ಮುಂದೆ ಸಮಾಜದ ಸ್ವಾಭಿಮಾನಿ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಲಿದ್ದಾರೆಂದು ಎಚ್ಚರಿಸಿದರು.
ಮಾಜಿ ಶಾಸಕ ಎಸ್.ಎಂ. ನಾಗರಾಜ್‌ರವರನ್ನು ಓಲೈಸುವ ಸಲುವಾಗಿ ಯಾರಿಗೂ ಹೆದರಬೇಡಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಉದ್ದಟತನದ ಹೇಳಿಕೆಯನ್ನು ಕೂಡಲೇ ವಾಪಾಸ್ ಪಡೆದು ಬಹಿರಂಗವಾಗಿ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.
Protest condemning the insult
Leave a comment