ಚಿಕ್ಕಮಗಳೂರು: ವಸ್ತಾರೆ ಹೋಬಳಿಯ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೆಮಕ್ಕಿ ಗ್ರಾಮಕ್ಕೆ ಸಂಪರ್ಕ ರಸ್ತೆ ಹಲವು ವ?ಗಳಿಂದ ದುರಸ್ತಿ ಕಾಣದೆ ಹದಗೆಟ್ಟಿದ್ದು, ಇದರಿಂದ ಗ್ರಾಮಸ್ಥರು ಬೇಸತ್ತು ರಸ್ತೆಯಲ್ಲಿ ಬತ್ತದ ನಾಟಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ ಮಳೆಗಾಲದಲ್ಲಿ ಓಡಾಡಲು ತೀವ್ರ ತೊಂದರೆಯಾಗುತ್ತಿದೆ, ವಿದ್ಯಾ ರ್ಥಿಗಳು ಶಾಲೆಗೆ ತೆರಳಲು, ರೋಗಿಗಳು ಆಸ್ಪತ್ರೆಗೆ ತೆರಳಲು ಹರಸಾಹಸ ಪಡಬೇಕಿದೆ ಎಂದರು.
ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಉಡಾಫೆ ಉತ್ತರ ನೀಡುತ್ತಾರೆ, ಈವರೆಗೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀ ಲಿಸಿಲ್ಲ, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಸ್ಥಳಕ್ಕೆ ಭೇಟಿ ನೀ ಡಿ ಪರಿಶೀಲಿಸಿ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮದಲ್ಲಿ ಅನೇಕ ಕುಟುಂಬಗಳಿಗೆ ನಿವೇಶನವಿಲ್ಲ, ಹೀಗಾಗಿ ಗ್ರಾಮದ ಸ್ಥಳದಲ್ಲೇ ಲೇಔಟ್ ಮಾಡಿ ನಿವೇಶನ ರಹಿತರಿಗೆ ನಿವೇಶನ ಹಂಚಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಪಿ ಡಿ ಓ ಅವರಿಗೆ ಮನವಿ ಸಲ್ಲಿಸಿದರು. ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಆದ? ಬೇಗ ಮನೆ ಕಟ್ಟಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್, ಲೋಕೇಶ್, ರಾಜು, ಸಂಕೇತ್, ಕೆಂಚಯ್ಯ, ಚಂದ್ರಯ್ಯ, ಸೋಮಶೇಖರ್, ಶಂಕರ್, ಶಿವಣ್ಣ, ನವೀನ್, ಮನು, ಸುನಿಲ್, ಮಂಜುನಾಥ್, ರಘು, ಗಿರೀಶ್, ಚಂದ್ರ ಶೇಖರ್, ಸಂದೀಪ್, ಸಿದ್ದೇಶ್, ಪರಮೇಶ್, ಲೋಕಯ್ಯ, ಅಣ್ಣಪ್ಪ, ಮಂಜುನಾಥ್, ರವಿ, ಕಮಲ್, ರಮೇ ಶ್, ಪೂರ್ಣೇಶ್, ರೆಮತ್, ಜಯಪ್ಪ, ತಿಪ್ಪೇಶ್ ಉಪಸ್ಥಿತರಿದ್ದರು.
Protest by planting rice on the road in Hunasemakki village
Leave a comment