Home namma chikmagalur chikamagalur ಮನರೇಗಾ ಕಾಯ್ದೆ ಹೆಸರು ಬದಲಾವಣೆ ವಿರೋಧಿಸಿ ಪ್ರತಿಭಟನೆ
chikamagalurHomeLatest Newsnamma chikmagalur

ಮನರೇಗಾ ಕಾಯ್ದೆ ಹೆಸರು ಬದಲಾವಣೆ ವಿರೋಧಿಸಿ ಪ್ರತಿಭಟನೆ

Share
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Share

ಚಿಕ್ಕಮಗಳೂರು:  ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯ ಹೆಸರು ಬದಲಾವಣೆ ವಿರೋಧಿಸಿ ನಗರದ ಗಾಂಧಿ ಪ್ರತಿಮೆ ಎದುರು ಶನಿವಾರ ಜಿಲ್ಲಾ ಕಾಂಗ್ರೆಸ್ ಕಾ ರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವೆ ಮೋಟಮ್ಮ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಒಳಸಂಚು ನಡೆ ಸಿ ಕಾಂಗ್ರೆಸ್ ಆಡಳಿತದ ಕಾಯ್ದೆಗೆ ಮರುನಾಮಕರಣ ಮಾಡುತ್ತಿದೆ. ಕಾಯ್ದೆ ಹೆಸರು ಬದಲಾವಣೆ ಸಂಬಂಧ ಕಾಂಗ್ರೆಸ್ ಪ್ರಶ್ನೆಗೆ ಬಿಜೆಪಿ ನಾಯಕರಲ್ಲಿ ಸಮರ್ಪಕವಾದ ಉತ್ತರವೇ ಇಲ್ಲದಂತಾಗಿದೆ ಎಂದು ದೂರಿದರು.

ಮನರೇಗಾ ಕಾಯ್ದೆ ಬಡವರ ಸ್ವಾಭಿಮಾನ ಹೆಚ್ಚಳ, ಕೆಲಸ ಇಲ್ಲದವರಿಗೆ ಉದ್ಯೋಗ ನೀಡಿ ಕೂಲಿ ಕಾ ರ್ಮಿಕರ ಆಶಾದಾಯಕವಾಗಿತ್ತು. ಬಿಜೆಪಿಯಿಂದಲೇ ದೇಶದ ಅಭಿವೃದ್ದಿ ಎಂದು ಸುಳ್ಳು ಮಾತುಗಳಿಂದ ಜನ ತೆಯ ದಿಕ್ಕನ್ನು ತಪ್ಪಿಸುವ ಕೆಲಸ ಭಾಜಪ ಮಾಡುತ್ತಿದೆ. ಈ ಬಗ್ಗೆ ಸರಿಯಾದ ಮಾಹಿತಿ ನೀಡಲು ಗ್ರಾಮೀಣ ಮಟ್ಟದಿಂದ ಜಾಗೃತಿ ಮೂಡಿಸಬೇಕು ಎಂದರು.

ಗಾಂಧಿಜೀ ತತ್ವವನ್ನು ಧಿಕ್ಕರಿಸಿ, ತಾತ್ಸರ ಮಾಡುವ ಬಿಜೆಪಿಗರು ಎಲ್ಲವು ತಿದ್ದುಪಡಿ ಮಾಡಲು ಹೊರಟಿ ದ್ದಾರೆ. ಇನ್ನೊಂದೆಡೆ ಪಂಚ ಗ್ಯಾರಂಟಿ ಯೋಜನೆ ಸರಿಯಲ್ಲವೆಂದು ಹೇಳಿಕೆ ನೀಡಿದೆ. ಆದರೆ ದೇಶದ ಬಹು ತೇಕ ರಾಜ್ಯಗಳಲ್ಲಿ ಕರ್ನಾಟಕ ಪಂಚ ಗ್ಯಾರಂಟಿ ಯೋಜನೆ ಬಳಸಿಕೊಂಡು, ಮೋಸದಿಂದ ಚುನಾವಣೆ ಗೆಲ್ಲುತ್ತಿದೆ ಎಂದು ಆರೋಪಿಸಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲಘಟ್ಟದಲ್ಲಿ ಜಾರಿಗೊಂಡ ಮನರೇಗಾ ಕಾಯ್ದೆ ಗ್ರಾಮೀಣ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ರೂಪಿ ಸಿರುವ ಯೋಜನೆ. ಬಡವರು, ದೀನದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸ್ವಾಭಿಮಾನದ ಬದುಕ ನ್ನು ರೂಪಿಸಲು ಗಾಂಧೀಜಿ ಹೆಸರಿನಲ್ಲಿ ಸ್ಥಾಪಿಸಿದ್ದು ಇದನ್ನು ಬದಲಿಸಲು ಹೊರಟಿರುವುದು ಸರಿಯಲ್ಲ ಎಂ ದರು.

ಮನರೇಗಾ ಕಾಯ್ದೆಯಲ್ಲಿ ದೇಶದ ಸುಮಾರು ೩೮ ಕೋಟಿ ಜನಸಂಖ್ಯೆ ಅರ್ಜಿ ಕಾರ್ಡ್ ಹೊಂದಿದ್ದು ಕೋಟ್ಯಾಂತರ ಜನ ಈ ಕಾಯ್ದೆಯಿಂದ ಉದ್ಯೋಗ ಪಡೆದುಕೊಂಡಿದ್ದಾರೆ. ಹಳ್ಳಿ ಜನರ ಬದುಕಾಗಿದ್ಧ ಮನ ರೇಗ ಯೋಜನೆ ಬದಲಿಸುವ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣರಿಗೆ ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಆರೋಪಿಸಿದರು.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿಪಡಿಸುವ ಉದ್ದೇಶದಿಂದ ತಂದಿದ್ದ ಮನರೇಗಾ ಕಾಯ್ದೆಯ ಬದಲಿಗೆ ಹೊಸ ಮಸೂದೆ ಜಾರಿಗೊಳಿಸಲು ಕೇಂದ್ರ ಬಿಜೆ ಪಿ ಸರ್ಕಾರ ಮುಂದಾಗಿದ್ದು ದುರಂತ. ಈ ಮಸೂದೆಯು ಮನರೇಗಾ ಕಾಯ್ದೆ ಮತ್ತು ಅದರಲ್ಲಿದ್ದ ಉದ್ಯೋ ಗದ ಶಾಸನಬದ್ಧ ಖಾತ್ರಿಯನ್ನು ತೆಗೆದು ಹಾಕುವುದು ಹಾಗೂ ಅದರ ಬದಲಿಗೆ ಗ್ರಾಮೀಣ ಬಡ ಕುಟುಂಬ ಗಳಿಗೆ ಉದ್ಯೋಗದ ಭರವಸೆ ಇಲ್ಲವಾಗಿಸುತ್ತದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ ಕೇಂದ್ರ ಸರ್ಕಾರ ಸದಾ ಉಳ್ಳವರ ಪರ ವೇ ಕೆಲಸ ಮಾಡುತ್ತದೆ. ಈ ಹಾದಿಯಲ್ಲೇ ಇದೀಗ ಮನರೇಗಾ ಯೋಜನೆಯನ್ನು ಬದಲಿಸುತ್ತಿದೆ. ವಿಬಿ- ಜಿ ರಾಮ್ ಜಿ ಎಂದು ಹೆಸರು ಬದಲಿಸಿ ಅದರಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ. ಈ ಬದಲಾ ವಣೆಗಳು ಮನರೇಗಾ ಕೂಲಿಕಾರರ ಹೊಟ್ಟೆ ಮೇಲೆ ಬರೆ ಎಳೆದಂತಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಕೈಬಿಟ್ಟು ಹೊಸ ಕಾಯ್ದೆ ಜಾರಿಗೊಳಿಸಿರು ವುದು ಸರಿಯಲ್ಲ. ಶ್ರೀಮಂತರಿಗೆ ಅನುಕೂಲವಾಗುವಂಥ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿ ರುವುದು ಕಾರ್ಮಿಕರು, ಕೃಷಿ ಕಾರ್ಮಿಕರು ಹಾಗೂ ರೈತರ ಜೀವನಕ್ಕೆ ಮಾರಕವಾಗುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಶಾಸಕರಾದ ಹೆಚ್.ಡಿ.ತಮ್ಮಯ್ಯ, ಜಿ.ಹೆಚ್.ಶ್ರೀನಿವಾಸ್, ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್, ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್ ಕುಮಾರ್, ರೇಖಾಹುಲಿಯಪ್ಪಗೌಡ, ಸಿಡಿಎ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ತಾಲ್ಲೂಕು ಗ್ಯಾರಂಟಿ ಅಧ್ಯಕ್ಷ ಎಂ.ಮಲ್ಲೇಶ್, ನಗರಸಭೆ ನಾಮಿನಿ ಸದಸ್ಯರಾದ ಕೀರ್ತಿಶೇಟ್, ಪ್ರಕಾಶ್ ರೈ, ಜಿ.ಪಂ. ಮಾಜಿ ಸದಸ್ಯ ಕೆ.ವಿ. ಮಂಜುನಾಥ್, ಮುಖಂಡರುಗಳಾದ ತನೋಜ್ ನಾಯ್ಡು, ಹಿರೇಮಗಳೂರು ರಾಮಚಂದ್ರ, ಲಕ್ಷ್ಮಣ್, ಲಾಕೇಶ್ ಮತ್ತಿತರರು ಹಾಜರಿದ್ದರು.

Protest against change in name of MNREGA Act

Share

Leave a comment

Leave a Reply

Your email address will not be published. Required fields are marked *

Don't Miss

ಕೃಷಿಕರ ಬದುಕಿಗೆ ಉತ್ತೇಜನ ನೀಡಲು ಹಲವಾರು ಜನಪರ ಯೋಜನೆ

ಚಿಕ್ಕಮಗಳೂರು-ಸರ್ಕಾರ ಕೃಷಿಕರ ಬದುಕನ್ನು ಹಸನಾಗಿಸಬೇಕೆಂಬ ಉದ್ದೇಶದೊಂದಿಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ನೆರವಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು. ಅವರು ಇಂದು ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ...

ಜಿಲ್ಲಾ ರೈತ ಸಂಘದಿಂದ ಪ್ರತಿಭಟನಾ ಜಿಲ್ಲಾ ಸಮಾವೇಶ

ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ವಾಸಿಸುವ ರೈತರು ಎದುರಿಸುತ್ತಿರುವ ಕಾಡಾನೆ ದಾಳಿ ಮತ್ತು ಬಗರ್‌ಹುಕುಂ ಸಮಸ್ಯೆಗಳು ತೀವ್ರ ಕಳವಳ. ಈ ವನ್ಯಮೃಗಗಳಿಂದ ಮೃತಪಟ್ಟ ರೈತ ಕುಟುಂ ಬಕ್ಕೆ ಸರ್ಕಾರ ೫೦ ಲಕ್ಷ ರೂ....

Related Articles

ಮಾನಸಿಕ-ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

ಚಿಕ್ಕಮಗಳೂರು:  ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್....

ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗಬೇಕಾದರೆ ನಮ್ಮ ಚಿಂತನೆಗಳು ಬದಲಾಗಬೇಕು

ಚಿಕ್ಕಮಗಳೂರು: ಅಸಮಾನತೆ, ಅಸ್ಪೃಶ್ಯತೆ, ಜಾತೀಯತೆ ದೂರವಾಗಿ ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗಬೇಕಾದರೆ ನಮ್ಮ ಚಿಂತನೆಗಳು ಬದಲಾಗಬೇಕು, ಬಸವಾದಿ...

ಹಣಕ್ಕಾಗಿ ಮದುವೆ ಮನೆಯಲ್ಲಿ ಮಂಗಳಮುಖಿಯರ ರಂಪಾಟ

ಚಿಕ್ಕಮಗಳೂರು:  ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮದುವೆ ಮನೆಯೊಂದಕ್ಕೆ ನುಗ್ಗಿದ ಮಂಗಳಮುಖಿಯರು ಹಣಕ್ಕಾಗಿ ರಂಪಾಟ ನಡೆಸಿ, ಮದುವೆಯ ಸಂಭ್ರಮವನ್ನೇ...

ಶಿವಶರಣರ ಆಶಯದಂತೆ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಸವಣ್ಣ ಸೇರಿದಂತೆ...