ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿರುವ ಘಟನೆ ಮೂಡಿಗೆರೆ ತಾಲೂಕಿನ ದೇವನಗೂಲ್ ಗ್ರಾಮದ ಬಳಿ ನಡೆದಿದೆ.
ಬಸ್ಸಿನಲ್ಲಿದ್ದ ೨೫ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಕಾಫಿನಾಡಿನಲ್ಲಿ ನಿರಂತರ ಮಳೆಯಿಂದ ಮಲೆನಾಡಿನ ಸೌಂದರ್ಯ ಇಮ್ಮಡಿಕೊಂಡಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ಜಿಲ್ಲೆಯ ನಾನಾ ಭಾಗಗಳಿಗೆ ಭೇಟಿ ನೀಡುತ್ತಿದ್ದಾರೆ.
ಕಳಸ ತಾಲೂಕಿನ ಕುದುರೆಮುಖದ ನೇತ್ರಾವತಿ ಪೀಕ್ ಗೆ ಚಾರಣಕ್ಕೆ ಬರುತ್ತಿದ್ದ ಬೆಂಗಳೂರು ಮೂಲದ ಖಾಸಗಿ ಬಸ್ ಮಳೆ-ಮಂಜುವಿನ ಕಾರಣದಿಂದಾಗಿ ತಿರುವಿನಲ್ಲಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಕೂಡಲೇ ಸ್ಥಳೀಯರು ಬಸ್ಸಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ೨೫ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರಗೊಂಡಿದೆ. ಬಸ್ಸಿನಲ್ಲಿದ್ದವರು ಬೆಂಗಳೂರಿನ ಎಂ.ಎನ್.ಸಿ. ಕಂಪನಿಯಲ್ಲಿ ಕೆಲಸ ಮಾಡುವ ಯುವಕ-ಯುವತಿಯರು. ವಾರಂತ್ಯದ ಹಿನ್ನೆಲೆಯಲ್ಲಿ ಚಾರಣಕ್ಕಾಗಿ ಬರುವಾಗ ಈ ದುರ್ಘಟನೆ ಸಂಭವಿಸದೆ.
ಗಾಯಾಳುಗಳನ್ನು ಸಮಾಜ ಸೇವಕ ಆರೀಫ್, ಕೊಟ್ಟಿಗೆಹಾರ ಸಂಜಯ್, ಅತ್ತಿಗೆರೆ ಅಭಿ, ವಿನಯ್, ಜಲಿಲ್,ವರುಣ್ ಸೇರಿದಂತೆ ಸ್ಥಳಿಯ ಯುವಕರು ಬಣಕಲ್ ಕೃಷ್ಣ ಆಸ್ಪತ್ರೆಗೆ ಹಾಗೂ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Private bus overturns after driver loses control – 25 people injured
Leave a comment