Home Latest News ಕಳಸ ಭಾಗದಲ್ಲಿ 2846 ಹೆಕ್ಟೇರ್ ಪ್ರದೇಶ ಅರಣ್ಯ ಪಾಲಾಗಲು ಸಿದ್ಧತೆ
Latest NewschikamagalurHomenamma chikmagalur

ಕಳಸ ಭಾಗದಲ್ಲಿ 2846 ಹೆಕ್ಟೇರ್ ಪ್ರದೇಶ ಅರಣ್ಯ ಪಾಲಾಗಲು ಸಿದ್ಧತೆ

Share
Share
ಮೂಡಿಗೆರೆ: ಅರಣ್ಯ ಕಾಯಿದೆ ೪/೧ರಲ್ಲಿದ್ದ ಕಂದಾಯ ಭೂಮಿಯನ್ನು ಅರಣ್ಯ ಪಾಲಾಗಲು  ಇದೀಗ ೧೭/೧ ಜಾರಿ ಮಾಡಲು ಸಿದ್ಧತೆ ನಡೆದಿದೆ ಈ ಕಾಯಿದೆ ಜಾರಿಯಾದರೆ ಕಳಸ ಭಾಗದಲ್ಲಿ ೨೫೪೮ ಹೆಕ್ಟೇರ್ ಭೂಮಿ ಅರಣ್ಯ ಪಾಲಾಗಲಿದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಕಳಸ ಅರಣ್ಯ ವಲಯ ವ್ಯಾಪ್ತಿಯಲ್ಲಿ ಅರಮನ ತಲಗೂರು ೪೦ ಹೆಕ್ಟೇರ್, ಕಲ್ಮನೆ ೮೦, ಮಾಳಿಗನಾಡು ೯೨, ಬಿಳಗಲಿ ೧೬೭, ಜಾವಳಿ ಹೇಮಾವತಿ ನದಿ ಸುತ್ತಮುತ್ತ ೨೨೯, ಕೆ.ಕೆಳಗೂರು ೫೨, ಮಾವಿನಕೆರೆ ೯೬, ಶ್ರೀ ಅನ್ನಪೂರ್ಣೇಶ್ವರಿ ೩ ಬ್ಲಾಕ್‌ನಿಂದ ೫೨೬, ತಲಕೂಡು ೨ ಬ್ಲಾಕ್‌ನಿಂದ ೨೨೨, ಎಡೂರು ೨ ಬ್ಲಾಕ್‌ನಿಂದ ೮೪, ಹೆಮ್ಮಕ್ಕಿ ೬ ಬ್ಲಾಕ್‌ನಿಂದ ೧೬೬, ಇಡಕಣಿ ಬ್ಲಾಕ್ ೬ರಲ್ಲಿ ೮೭, ಕಾರ್‍ಲೆಕಳಗೂಡು ೧೬೨, ಕೂವೆ, ಕಲ್ಮನೆ ಮಾಳಿಗನಾಡು ಸೇರಿ ೨೫೧, ಮಾವಿನಕೆರೆ ಬ್ಲಾಕ್ ೪ರಲ್ಲಿ ೧೭, ತಲಗೂಡು ೧ರಿಂದ ೫ ಬ್ಲಾಕ್ ವರೆಗೆ ೫೦, ಒಟ್ಟು ೨೫೪೮ ಹೆಕ್ಟೇರ್ ಪ್ರದೇಶ ಅರಣ್ಯ ಕಾಯಿದೆ ೪/೧ರಿಂದ ೧೭/೧ಗೆ ಮಾಡಲು ಈಗಾಗಲೇ ಸರಕಾರ ಎಸ್‌ಎಫ್‌ಒ (ಸೆಟಲ್ಮೆಂಟ್ ಫಾರೆಸ್ಟ್ ಆಫಿಸರ್) ಅಧಿಕಾರಿ ನೇಮಕ ಮಾಡಿದೆ. ಒಂದು ವೇಳೆ ಈ ಎಲ್ಲಾ ಪ್ರದೇಶ ಅರಣ್ಯ ಕಾಯಿದೆ ೧೭/೧ ಆದರೆ ಈ ಗ್ರಾಮದ ಎಲ್ಲಾ ರೈತರು, ಕಾರ್ಮಿಕರು ಬೀದಿಪಾಲಾಗುತ್ತಾರೆಂದು ಹೇಳಿದರು.
ಈಗಾಗಲೇ ತಾಲೂಕಿನಲ್ಲಿ ನಿವೇಶನ ಕೊರತೆಯಿದೆ. ೨೦೧೯ರಲ್ಲಿ ಉಂಟಾದ ಪ್ರವಾಹದಿಂದ ಜಮೀನು ಕಳೆದುಕೊಂಡ ನಿರಾಶ್ರಿತರಿಗೆ ಹರಸಾಹಸ ಪಟ್ಟು ಬದಲಿ ಜಾಗ ನೀಡಲಾಗಿದೆ. ಇದೀಗ ಕಳಸ ಭಾಗದಲ್ಲಿ ೨೫೪೮ ಹೆಕ್ಟೇರ್ ಪ್ರದೇಶ ಅರಣ್ಯ ಪಾಲಾದರೆ ಸಂತ್ರಸ್ತರಿಗೆ ಬದಲಿ ಜಾಗ ಕೊಡಲು ಸರಕಾರಕ್ಕೆ ತಲೆ ನೋವಾಗಿ ಪರಿಣಮಿಸುವುದರಲ್ಲಿ ಸಂದೇಹವಿಲ್ಲ. ನಿವೇಶನ ರಹಿತರಿಗೆ ನಿವೇಶನ ಕೊಡಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ ಈ ಪ್ರಕ್ರಿಯೆ ಕೈ ಬಿಡಲು ಕ್ರಮ ವಹಿಸಬೇಕು. ಇಲ್ಲವಾದರೆ ರೈತರೊಂದಿಗೆ ಸೇರಿ ದೊಡ್ಡ ಮಟ್ಟದ ಹೋರಾಟ ರೂಪಿಸುವುದು ಅನುವಾರ್ಯವಾಗಿದೆ ಎಂದು ಹೇಳಿದರು.
Preparations underway for forest clearance of 2846 hectares in Kalasa area
Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...