ಕಡೂರು: ಮೆಸ್ಕ್ ಮ್ ಇಂಜಿನಿಯರ್ ಮಂಜುನಾಥ್ ಎಸಿಬಿಯವರೆಗೆ ಕರೆಂಟ್ ಕಟ್ ಮಾಡುವ ರೀತಿ ಕಟ್ ಮಾಡಿ ಪರಾರಿಯಾದ ಘಟನೆ ನಡೆದಿದೆ.ಎ.ಇ.ಇ.ಮಂಜುನಾಥ್ ಈ ಹಿಂದೆ ಚಿಕ್ಕಮಗಳೂರಿನಲ್ಲಿ ಡ್ಯೂಟಿ ಮಾಡಬೇಕಾದರೆ ಎಸಿಬಿ ಲೋಕಯುಕ್ತರ ಬಲೆಗೆ ಸಿಕ್ಕಿ ವಿಲ,ವಿಲ ಒದ್ದಾಡಿದವ ಮತ್ತೆ ಲಂಚ ಪಡೆಯುವ ಸಲವಾಗಿ ವಿದ್ಯುತ್ ಕಂಬ ವಿತರಣೆ ಮಾಡುವವರಿಂದ ಹಣ ಪಡೆಯುವ ಪಕ್ಕಾ ಮಾಹಿತಿ ಪಡೆದ ಲೋಕಯುಕ್ತರು ಬಲೆ ಬಿಸಿದಾಗ ಬಲೆಯಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ವರದಿಯಾಗಿದೆ.
ಕತರನಾಕ್ ಮಂಜುನಾಥ್ ಎಲ್ಲಿದ್ದರೂ ಹಣ,ಹಣ ಎಂದು ಕೈ ಒಡ್ಡುವುದು ನಾಲಿಗೆ ಹಾಕಿ ನೆಕ್ಕುವ ಅಭ್ಯಾಸ ಮಾಮೂಲಿ ಯಾಗಿದೆ. ಆದರೆ ಮಂಜುನಾಥ್ ಗೆ ವಿಷಯ ತಿಳಿದು ಪರಾರಿಯಾಗಿರುವುದು ಮಾತ್ರ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಸಿದ್ದಪ್ಪ ಎಂಬ ಗುತ್ತಿಗೆದಾರ ವಿದ್ಯುತ್ ಕಂಬಗಳನ್ನು ಸರಬರಾಜು ಮಾಡಿದ್ದರು ಇದರ ಬಾಪ್ತು 32 ಲಕ್ಷ ರೂಗಳನ್ನು ಗುತ್ತಿಗೆದಾರರಿಗೆ ಕೊಡದೆ ನನಗೆ ಬರಬೇಕಾದ ಹಣ ತಲುಪಿಸು ಎಂಬ ಬೇಡಿಕದ ಇಟ್ಟ ಮಂಜುನಾಥ್ ನ ಬಗ್ಗೆ ಲೋಕಯುಕ್ತದಲ್ಲಿ ದೂರು ದಾಖಲು ಮಾಡಿ ಕಳೆದ ಹದಿನೈದು ದಿನಗಳಿಂದ ಮಂಜುನಾಥ್ ನನ್ನು ಹಿಡಿಯಲು ಶತ ಪ್ರಯತ್ನ ನಡೆಸಿದ ಲೋಕಯುಕ್ತದವರ ಕಣ್ಣ್ ತಪ್ಪಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಸದಾಕಾಲವೂ ಹಣ,ಹಣ,ಹಣ ಬಾಯಿ,ಬಾಯಿ ಬಿಡುವ ಈತ ಕಳೆದ ಐದಾರು ತಿಂಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಲೋಕಯುಕ್ತದವರ ಬಲೆಗೆ ಬಿದ್ದು ಅಮಾನತುಗೊಂಡಿದ್ದನು.ಕೈ ತೊಳೆದುಕೊಂಡು ಇನ್ನೂ ಹಸಿಯಾಗಿರುವಾಗಲೇ ಮತ್ತೆ ಲಂಚ ಪಡೆಯುವ ಇಂತಹ ಖದೀಮನಿಗೆ ಅಯಾಕಟ್ಟಿನ ಹುದ್ದೆ ಕೊಟ್ಟು ಕುಳಿತಿರುವ ಮೆಸ್ಕಾಂಗೆ ಎನೆಂದು ಕರೆಯಬೇಕು.
ಮಂಜುನಾಥ್ ನಿಂದ ಹಲವು ಗುತ್ತಿಗೆದಾರರು ನಲುಗಿ ಹೋಗಿದ್ದಾರೆ ಇನ್ನಾದರೂ ಅಯಾಕಟ್ಟಿನ ಹುದ್ದೆಯನ್ನು ನೀಡದೆ ಇರುವುದು ಒಳ್ಳೆಯದು. ಕೈಲಾಗದ ಮಂತ್ರಿ ಜಾರ್ಜ್ ನಂತವರು ಇಲಾಖೆ ನಿರ್ವಹಣೆ ಮಾಡಲಾಗದೆ ಇರುವುದು ಕೂಡ ಇಂತಹ ಲಂಚಬಾಕರಿಗೆ ರಹದಾರಿ ದೊರೆತಂಗೆ ಆಗಿದೆ.
Power cut up to ACB – Engineer gives up and escapes?
Leave a comment