ಚಿಕ್ಕಮಗಳೂರು ಜಿಲ್ಲೆಯ ರಾಜಕಾರಣ ಚಿತ್ರ ವಿಚಿತ್ರವಾದರೆ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ರಾಜಕಾರಣ ಮಜಾ ತರುತ್ತದೆ.
ಜಿಲ್ಲೆಯಲ್ಲಿ ಐದು ವಿಧಾನ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ರಾರಾಜಿಸುತ್ತಿದ್ದಾರೆ ಆದರೆ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಹೆಚ್.ಡಿ.ತಮ್ಮಯ್ಯನವರಿಗೆ ಜನತಾದಳದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮತ್ತು ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಪೈಪೋಟಿ ಎನ್ನುವುದಕ್ಕಿಂತ ಸಾಥ್ ಕೊಡುತ್ತಿದ್ದಾರ ಎಂಬ ಗೊಂದಲ,ಅನುಮಾನ,ಜನರನ್ನು ಕಾಡುವುದಿರಲಿ ಕಾಂಗ್ರೆಸ್ ನವರಿಗೆ ಕಾಡುತ್ತಿರುವುದು ಮಾತ್ರ ಸತ್ಯ.
ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅನಿವಾರ್ಯವಾಗಿ ಜೊತೆಗೆ ಸೇರಲೇ ಬೇಕು.ಆದರೆ ತಬ್ಬಿ ಒಬ್ಬರನ್ನೊಬ್ಬರು ಕೊಂಡಾಡುವುದು ನೋಡಿ ಆಶ್ಚರ್ಯ, ಅನುಮಾನ ಪಡುವುದಿಲ್ಲ ಏಕೆಂದರೆ ತಮ್ಮಯ್ಯ ಮೊದಲು ಬೋಜೇಗೌಡರ ಬಳಿ ಪಳಗಿ ನಂತರ ಸಿ.ಟಿ.ರವಿ ಹತ್ತಿರ ಪಟ್ಟುಗಳನ್ನು ಕಲಿತು ಈಗ ಶಾಸಕರಾಗಿ ಮಧ್ಯೆ ಕುಳಿತರೆ ಅಕ್ಕಪಕ್ಕದಲ್ಲಿ ವಿಧಾನ ಪರಿಷತ್ ಸದಸ್ಯರು ರಾರಾಜಿಸುತ್ತಿರುವುದು ಸಾಮಾನ್ಯವಾಗಿದೆ.
ರಾಜಕೀಯದಲ್ಲಿ ಬರೀ ದ್ವೇಷ ತುಂಬಿರುವ ಸಮಯದಲ್ಲಿ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ” ಕಲ್ಯಾಣ ಕಾರ್ಯಗಳನ್ನು ” ಜಾರಿಗೆ ತರಲು ಕೈ,ಕೈಹಿಡಿದು ಸಾಗುತ್ತಿರುವುದನ್ನು ನೋಡಿದರೆ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಕೈ,ಕೈ ಹಿಸುಕಿಕೊಳ್ಳುತ್ತಾ ಪೆಚ್ಚು ಮೋರೆ ಹಾಕಿಕೊಂಡು ಥೂ ನಿಮ್ಮಗಳಿಗೆ ನಾವು ಬಡಿದಾಡಿದವಲ್ಲಾ ಎನ್ನುತ್ತಿರುವುದು ಮಾತ್ರ ಸತ್ಯ.
ಲಾಸ್ಟ ಫಂಚ್:: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸಿ.ಟಿ.ರವಿ ಸೋಲಿಸಲು ಬೋಜೇಗೌಡ ತಮ್ಮಯ್ಯಗೆ ಸಾಥ್ ನೀಡಿ ಹಾಲಿನ ಅಭಿಷೇಕ ಮಾಡಿಸಿಕೊಂಡ ಹಾಲು ಅರುವ ಮುನ್ನವೇ ಬೋಜೇಗೌಡರನ್ನು ಗೆಲ್ಲಿಸುವ ಮೂರು ದಿನ ಮುಂಚೆ ವಿಧಾನ ಪರಿಷತ್ ಸದಸ್ಯರಾಗಿ ಮೂರು ಜನರು ಕೈ,ಕೈ ಹಿಡಿದು ಕ್ಷೇತ್ರ ಸುತ್ತುವುದನ್ನು ನೋಡಿ ಗಾಬರಿ ಯಾಗಿದ್ದಾರೆ.
Leave a comment