ಮೂಡಿಗೆರೆ: ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣ ವ್ಯಾಪ್ತಿಯ ಹಿರೇಗೆಶಿ ಎಂಬ ಗ್ರಾಮದ ಬಳಿ ಪೆಟ್ರೋಲ್ ಕಳ್ಳತನ ಮಾಡಿರುವ ಲಾರಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ಮೂಡಿಗೆರೆ ತಾಲೂಕಿನಲ್ಲಿ ಎಲ್ಲೂ ಪೈಪ್ ಕೊರೆದಿಲ್ಲ ಎಂದು ತಿಳಿದುಬಂದಿದೆ.ಆದರೆ ಲಾರಿಯಲ್ಲಿ 2 000 ಕ್ಕೂ ಹೆಚ್ಚಿನ ಪೆಟ್ರೋಲ್ ಇರುವ ಶಂಕೆ ಇದ್ದು ಲಾರಿಗೆ ಪ್ಲೇಟ್ ನಂಬರ್ ಕೂಡ ಇಲ್ಲದಿರುವುದು ಈ ಹಿಂದೆ ಸಕ್ರಿಯವಾಗಿದ್ದ ಗ್ಯಾಂಗ್ ಇರಬಹುದು ಎಂಬ ಅನುಮಾನವಿದೆ.
20 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಪೈಪ್ ಕೊರೆದು ಪೆಟ್ರೋಲ್ ಸಾಗಿಸುತ್ತಿದ್ದ ಬೇಲೂರಿನ ರಾಜಶೆಟ್ಟಿ ಎಂಬುವನ ಬಂಧನವಾಗಿತ್ತು. ಪೊಲೀಸ್ ಇಲಾಖೆಯ ಹಲವರು ಈ ಗ್ಯಾಂಗ್ ಜೊತೆಗೆ ಕೈ ಜೋಡಿಸಿದ್ದರಿಂದ ಇಲಾಖಾ ತನಿಖೆ ನಡೆದಿತ್ತು.
ಠಾಣಧಿಕಾರಿಯಾಗಿದ್ದ ಸುನೀಲ್ ಕುಮಾರ್ ಮತ್ತು ಮೂಡಿಗೆರೆ ವೃತ್ತ ನಿರೀಕ್ಷಕ ಸ್ವಾಮಿ ಎಂಬುವರ ಅಮಾನತ್ತು ಕೂಡ ಆಗಿತ್ತು ಇದರ ಜೊತೆಗೆ ಚಿಕ್ಕಮಗಳೂರು ವೃತ್ತ ನಿರೀಕ್ಷಕ ಸಿದ್ದಯ್ಯ ಎಂಬುವರ ವಿಚಾರಣೆ ಕೂಡ ನಡೆದಿತ್ತು.
ಲಾರಿ ಬಿಟ್ಟು ಪರಾರಿಯಾಗಿರುವುದನ್ನು ನೋಡಿದರೆ ಹಳೆ ಗ್ಯಾಂಗ್ ಮತ್ತೆ ಸಕ್ರಿಯವಾಗಿರಬಹುದು ಎಂಬ ಅನುಮಾನವಿದೆ ಎಂದು ಜನ ಹೇಳುತ್ತಾರೆ.
Petrol theft suspects flee
Leave a comment