ಚಿಕ್ಕಮಗಳೂರು: ಪೆಟ್ರೋನೆಟ್ ಕಂಪನಿಯ ಪೈಪ್ ಲೈನ್ ನಿಂದ ಪೆಟ್ರೋಲ್ ಕದ್ದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನ ವಶಕ್ಕೆ ಪಡೆಯಲಾಗಿದೆ.
ಮಂಗಳೂರಿಂದ ಬೆಂಗಳೂರಿಗೆ ಹಾದು ಹೋಗಿದ್ದ ಪೆಟ್ರೋಲಿಯಂ ಪೈಪ್ ಲೈನ್ ನಿಂದ ಗೋಣಿಬೀಡು ಠಾಣಾ ವ್ಯಾಪ್ತಿಯ ಹಿರೇಶಿಗರ ಗ್ರಾಮದ ಬಳಿ ಅಂದಾಜು ೨ ಲಕ್ಷ ಮೌಲ್ಯದ ೨೦೦೦ ಲೀಟರ್ ನಷ್ಟು ಇಂಧನ ಕಳ್ಳತನವಾಗಿರುವ ಬಗ್ಗೆ ಪೆಟ್ರೋನೆಟ್ ಎಮ್‌ಎಚ್‌ಬಿ ಲಿಮಿಟೆಡ್ ಮ್ಯಾನೇಜರ್ ರವೀಂದ್ರ ದೂರ ನೀಡಿದ್ದರು.
ಆರೋಪಿಗಳನ್ನು ಶೀಘ್ರ ಪತ್ತೆಮಾಡಿ ಬಂಧಿಸಲು ಗೋಣಿಬೀಡು ಪೊಲೀಸ್ ಠಾಣೆ, ಪ್ರತಾಪ್ ಪಿಎಸ್‌ಐ (ತನಿಖೆ) ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಹಿರೇಶಿಗಿರ ಗ್ರಾಮದ ವಿಜಯಕುಮಾರ್ ಹಾಗೂ ಹರ್ಷ ನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರು, ಜೀಪು, ಟಿಪ್ಪರ್ ಸೇರಿದಂತೆ ಎಂಟು ವಾಹನಗಳನ್ನು ವಶಕ್ಕೆ ಪಡೆದಿದ್ದು , ದಿನೇಶ್ ಶೆಟ್ಟಿ, ಕಿರಣ್ ಮತ್ತು ಸಹಚರರು ತಲೆಮರೆಸಿಕೊಂಡಿದ್ದಾರೆ.
ಕೃತ್ಯ ನಡೆದ ೨೪ ಗಂಟೆಗಳ ಒಳಗಾಗಿ ಆರೋಪಿಗಳನ್ನು ಪತ್ತೆ ಹಚ್ಚಿದ ಅಧಿಕಾರಿ ಸಿಬ್ಬಂದಿ ಕಾರ್ಯವೈಖರಿಯನ್ನು ಪೊಲೀಸ್ ಅಧೀಕ್ಷಕ ವಿಕ್ರಂ ಅಮಟೆ ಶ್ಲಾಘಿಸಿದ್ದಾರೆ
Petrol theft case – two arrested
Leave a comment