ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲೆಯಲ್ಲಿ ಸಂಘಟನಾತ್ಮಕವಾಗಿ ಬಲಗೊಳ್ಳುತ್ತಿದ್ದು, ಇನ್ನೂ ಹೆಚ್ಚು ಸದೃಢಗೊಳಿಸಲು ಜಿಲ್ಲಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಡಿ. ಮಹೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರು ಒಗ್ಗಟ್ಟಾಗಿ ಹೋರಾಟ ಮಾಡಿದಲ್ಲಿ ಮಾತ್ರ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದು ಬಹುತೇಕ ರೈತರಿಗೆ ಮನವರಿಕೆಯಾಗಿದೆ. ಹೀಗಾಗಿ ತಾವೇ ಮುಂದೆ ಬಂದು ಸಂಘದ ಜವಾಬ್ದಾರಿಗಳನ್ನು ಹೊತ್ತುಕೊಳ್ಳುತ್ತಿದ್ದಾರೆ ಎಂದರು.
ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷರಾಗಿ ಎಂ.ಸಿ. ಬಸವರಾಜು, ಪ್ರಧಾನ ಕಾರ್ಯದರ್ಶಿ ಎಂ.ಬಿ. ಚಂದ್ರಶೇಖರ್, ಉಪಾಧ್ಯಕ್ಷರಾಗಿ ಶಿವಕುಮಾರ್, ಪುಟ್ಟಸ್ವಾಮಿಗೌಡ, ಕಾರ್ಯಾಧ್ಯಕ್ಷರಾಗಿ ಕಡೂರು ದಯಾನಂದ, ಎನ್.ಆರ್.ಪುರ ಬಸವರಾಜು, ಅಜ್ಜಂಪುರ ಅನಂತಪದ್ಮನಾಭ, ಭಾರತಿ ಮೂಡಿಗೆರೆ, ಕೃಷ್ಣಯ್ಯಗೌಡ ಕೊಪ್ಪ. ಛಾಯಾಪತಿ, ಖಜಾಂಚಿಯಾಗಿ ಕರ್ತಿಕೆರೆ ಲೋಕೇಶ್, ಸಂಘಟನಾ ಕಾರ್ಯದರ್ಶಿಯಾಗಿ ಎಚ್.ಡಿ. ಲೋಕೇಶ್ ಮಹಿಳಾ ಜಿಲ್ಲಾಧ್ಯಕ್ಷರನ್ನಾಗಿ ಕಡೂರು ಹಾಲಮ್ಮ ಸೇರಿದಂತೆ ಒಟ್ಟು ೨೮ ಮಂದಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಹೇಳಿದರು.
ಇದರೊಂದಿಗೆ ಮಯೂರ ಯುವ ಸೇನೆಯ ಸುಮಾರು ೬೦ ಮಂದಿ ಯುವಕರು ರೈತ ಸಂಘಟನೆಯೊಂದಿಗೆ ಸಕ್ರಿಯರಾಗಿದ್ದು ನಮ್ಮೊಂದಿಗೆ ಗುರುತಿಸಿಕೊಂಡಿದ್ದಾರೆ. ಇದರಿಂದ ರೈತ ಸಂಘಟನೆಗೆ ಬಲಬಂದಾಂತಾಗಿದೆ ಎಂದು ತಿಳಿಸಿದರು.
ದೇವನಹಳ್ಳಿ ರೈತರ ಭೂಸ್ವಾನಪ್ರಕ್ರಿಯೆಯನ್ನು ರದ್ದುಮಾಡಿದ ಸರಕಾರದ ಕ್ರಮವನ್ನು ಸ್ವಾಗತಿಸುವುದಾಗಿ ಅವರು ಹೇಳಿದರು.
ಲಕ್ಯಾ ಹೋಬಳಿಯಲ್ಲಿ ಮಳೆ ಬಾರದೆ ಬಿತ್ತಿದ್ದ ಬೀಜಗಳು ಮೊಳಕೆಯೊಡೆಯದೆ ಬೆಳೆ ನಾಶವಾಗಿದೆ ಇಂತಹ ಸಂದರ್ಭ ತೋಟಗಾರಿಕೆ, ಕೃಷಿ ಇಲಾಖೆ ಸಮೀಕ್ಷೆ ಮಾಡಿ ರೈತರಿಗೆ ಆಗಿರುವ ನಷ್ಟದ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಎಚ್.ಡಿ.ಉಮೇಶ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಯೂರ ಯುವ ಸೇನೆಯ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಸ್ವಾಗತ್, ಸಚಿನ್, ರೈತ ಸಂಘದ ಎಂ.ಬಿ. ಚಂದ್ರಶೇಖರ್, ಬಸವರಾಜು ಮತ್ತಿತರರು ಇದ್ದರು.
Office bearers appointed to district committee to strengthen farmers’ association
Leave a comment