ಬೆಂಗಳೂರು: ಅಪೆಕ್ಸ್ ಅಧ್ಯಕ್ಷ ರಾದ ಬೆಳ್ಳಿ ಪ್ರಕಾಶ್ ವಿರುದ್ಧ ಕಾಂಗ್ರೆಸ್ ನವರು ಮೇ 9ರಂದು ಅವಿಶ್ವಾಸ ಮಂಡನೆ ಮಾಡುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಘಾಟಾನುಘಟಿ ಸಹಕಾರಿ ಧುರೀಣರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಲು ಪ್ರಯತ್ನಿಸಿ ವಿಫಲರಾಗಿದ್ದರು.ಹತ್ತಾರು ವರ್ಷ ಬ್ಯಾಂಕ್ ನಿರ್ದೇಶಕರಾಗಿದ್ದ ದಿವಂಗತ ಧರ್ಮೇಗೌಡ ಉಪಾಧ್ಯಕ್ಷರಾಗಿದ್ದರು.ಬೆಳ್ಳಿ ಪ್ರಕಾಶ್ ಪ್ರಥಮ ಬಾರಿಗೆ ನಿರ್ದೇಶಕರಾಗಿ ಅಧ್ಯಕ್ಷರು ಆಗಿ ದಾಖಲೆ ಬರೆದಿದ್ದಾರೆ.ಇದನ್ನು ಮರೆಮಾಚಲು ಸಾಧ್ಯವೇ ?
ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಇದ್ದರೂ ಬೆಳ್ಳಿ ಕುರ್ಚಿಗೆ ಕಂಟಕ ಇರಲಿಲ್ಲ ಆದರೆ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ರವರು ಪದೇ,ಪದೇ ಬೆಳ್ಳಿ ಪ್ರಕಾಶ್ ವಿರುದ್ಧ ದೂರು ಹೇಳಿದರು ಪ್ರಯೋಜನವಾಗಿರಲಿಲ್ಲ.ಕೇವಲ ಐದಾರು ತಿಂಗಳು ಅವಧಿಯಿರುವಾಗ ಅವಿಶ್ವಾಸ ನಿರ್ಣಯ ಎಂಬ ಗುಡ್ಡ ಅಗೆಯುವ ಪ್ರಯತ್ನದಲ್ಲಿ ಇದ್ದರೆ ಬೆಳ್ಳಿ ಪ್ರಕಾಶ್ ಹಗ್ಗ ಹಿಡಿದು ಕುಳಿತಿದ್ದಾರೆ.ಬಂದರೆ ಗುಡ್ಡ ಹೋದರೆ ಹಗ್ಗ ಎನ್ನುವಂತಾಗಿದೆ.
ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೇಡ ಎನ್ನುವ ಸಹಕಾರ ಸಚಿವ ರಾಜಣ್ಣ ಎಲ್ಲದರಲ್ಲೂ ರಾಜಕೀಯ ಇರಬೇಕು ಎನ್ನುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲವನ್ನೂ ಕಿರುಗಣ್ಣಿನಿಂದ ನೋಡುತ್ತಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ರ ಮಧ್ಯೆ ಏನು ನಡೆಯಬಹುದು ಎಂಬ ಕುತೂಹಲ ಹುಟ್ಟಿಸಿದೆ.ಸರ್ಕಾರದ ಕೈ ಇರುವುದರಿಂದ ಗುಡ್ಡ ಸಿಗಬಹುದು. ಆದರೆ ಕಳೆದ ಎರಡು ವರ್ಷಗಳಿಂದ ಸುಮ್ಮನೆ ಇದ್ದ ಸರ್ಕಾರದ ಧಿಡೀರ್ ತೀರ್ಮಾನದ ಫಲದ ಬಗ್ಗೆ ಬೆಳ್ಳಿ ತಲೆ ಕೆಡಿಸಿ ಕೊಂಡಿಲ್ಲ ಎಲ್ಲವನ್ನೂ ಎದುರಿಸಲು ತಯಾರಿ ನಡೆಸುವುದರ ಜೊತೆಗೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸರ್ಕಾರ ನೀಡಿದ ಸಹಕಾರವನ್ನು ಸ್ಮರಿಸುತ್ತಾರೆ.
ಅದರಲ್ಲೂ ಸಹಕಾರ ಸಚಿವರು ಬ್ಯಾಂಕ್ ನ ಉನ್ನತಿಗೆ ಶ್ರಮಿಸಿದವರು ಎನ್ನುವ ಬೆಳ್ಳಿ ಪ್ರಕಾಶ್ ಅಧ್ಯಕ್ಷ ಸ್ಥಾನದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.ಕಳೆದ ಎರಡು ತಿಂಗಳಿಂದ ಬ್ಯಾಂಕ್ ನಲ್ಲಿ ಪಟ್ಟಾಗಿ ಕುಳಿತುಕೊಂಡು ಕೆಲಸ ಮಾಡುವುದರ ಜೊತೆಗೆ ಸಿನಿಮಾ ನೋಡುವ ಹವ್ಯಾಸ ವನ್ನು ಮುಂದುವರೆಸಿ ಜಾಲಿ ಮುಡ್ ನಲ್ಲಿದ್ದಾರೆ.ಅಂತೂ ಅಪೆಕ್ಸ್ ಬ್ಯಾಂಕ್ ನ ಇತಿಹಾಸದಲ್ಲಿ ಅವಿಶ್ವಾಸ ಎಂಬ ಕಪ್ಪು ಚುಕ್ಕೆ ಮೆತ್ತುತ್ತಿರುವುದು ಸಹಕಾರಿಗಳಿಗೆ ಬೇಸರವಿದೆ.
No-confidence motion against apex bank chairman to be moved on May 9
Leave a comment