ಚಿಕ್ಕಮಗಳೂರು :
ನೂತನವಾಗಿ ಆರಂಭವಾಗಿರುವ ನ್ಯೂಸ್ ಕಿಂಗ್ ವೆಬ್ ಸೈಟ್ ಕಚೇರಿಯಲ್ಲಿ ಆಯುಧ ಪೂಜೆಯ ಸಂಭ್ರಮ ಕಳೆಗಟ್ಟಿತ್ತು. ಚಿಕ್ಕಮಗಳೂರಿನ ಜಯನಗರ ಬಡಾವಣೆಯ ಹಿಂದಿನ ಜಿಲ್ಲಾ ಸಮಾಚಾರ ಪತ್ರಿಕಾ ಕಚೇರಿಯಲ್ಲಿ ನ್ಯೂಸ್ ಕಿಂಗ್ ನೂತನ ಕಛೇರಿ ಹೊಸತನದಲ್ಲಿ ಆರಂಭಗೊಂಡಿದ್ದು ಪ್ರಧಾನ ಸಂಪಾದಕರಾದ ಎನ್ ರಾಜು ರವರ ನೇತೃತ್ವದಲ್ಲಿ ಸರಳವಾಗಿ ಪೂಜೆ ನೆರವೇರಿಸಲಾಯಿತು.
ನೂತನವಾಗಿ ಆರಂಭವಾಗಿರುವ ನ್ಯೂಸ್ ಕಿಂಗ್ ವೆಬ್ ಸೈಟ್ ಕಛೇರಿ ಗೆ ಗಣ್ಯರು ಸಮಾಜದ ಮುಖಂಡರು ಭೇಟಿ ನೀಡಿ ಶುಭ ಕೋರಿದರು. ವಿವಿಧ ಕ್ಷೇತ್ರಗಳ ಪ್ರಮುಖರು ನೂತನ ವೆಬ್ ಸೈಟ್ ಆರಂಭಕ್ಕೆ ಶುಭ ಕೋರಿ ಮುಂದಿನ ದಿನಗಳಲ್ಲಿ ಹಳೆ ಬೇರು ಹೊಸ ಚಿಗುರು ಜೊತೆಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಜೊತೆಗೆ ನೊಂದ ಜನರಿಗೆ ಬೆಳಕಾಗುವ ಭರವಸೆಯಂತೆ ಸಂಸ್ಥೆಯು ನಿಲ್ಲಲಿ ಎಂದು ಗಣ್ಯರು ಹಾರೈಸಿದರು. ಚಿಕ್ಕಮಗಳೂರು ಜಿಲ್ಲೆಯು ತನ್ನದೇ ಆದ ಸಮಸ್ಯೆಗಳನ್ನು ಮೂರು ಋತುಗಳಲ್ಲೂ ಒಂದೊಂದು ರೀತಿಯ ಸಮಸ್ಯೆ ಉದ್ಭವಿಸುತ್ತವೆ ಇವುಗಳ ದನಿಯಾಗುವುದರೊಂದಿಗೆ ನ್ಯೂಸ್ ಕಿಂಗ್ ಕನ್ನಡ ವೆಬ್ ಸೈಟ್ ಜಿಲ್ಲೆಯ ರೈತರು ಕಾಫಿ ಹಾಗೂ ಅಡಿಕೆ ಬೆಳೆಗಾರರ ಬಗ್ಗೆ ಬೆಳಕು ಚೆಲ್ಲಲು ವೇದಿಕೆ ಕಲ್ಪಿಸಲಿ ಎಂದು ಮುಖಂಡರು ಹೇಳಿದರು
Leave a comment