News king Kannada News Portal launch: ಮಲೆನಾಡ ಘಮ, ಬಯಲು ಸೀಮೆಯ ಹವ, ಇದರ ಮಧ್ಯೆಹರೇ ಮಲೆನಾಡ ಸೆರಗು. ಒಟ್ಟಾರೆ ಪ್ರಕೃತಿ ಸೌಂದರ್ಯದ ತಾಣ,ಬೆಟ್ಟಗುಡ್ಡಗಳ ಮಧ್ಯೆ ಮಂಜಿನ ಸಾಲುಗಳ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ಹವಮಾನ ಜಗತ್ ಪ್ರಸಿದ್ಧಿ. ಮಲೆನಾಡಿನ ಕಾಫಿಯಷ್ಟೇ, ಬಯಲುಸೀಮೆಯ ಅಡಕೆಯ ಬೆಳೆ ವಿಶ್ವಮಾರುಕಟ್ಟೆಯಲ್ಲಿ ಹೆಸರುವಾಸಿ.
ಶೃಂಗೇರಿ, ಬಾಳೆಹೊನ್ನೂರು ಪೀಠಗಳ ಜೊತೆಗೆ ದತ್ತಾತ್ರೇಯ ಬಾಬಾಬುಡನ್ ಪೀಠದ ಜೊತೆಗೆ ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನ ಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖದಂತಹ ಹಲವುತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ದಂಡು ದಾಗುಡಿಯಿಡುತ್ತಿದೆ.
ರಾಷ್ಟ್ರದಲ್ಲಿ ಪಂಜಾಬ್ ಪಂಚ ನದಿಗಳ ಬೀಡಾದರೆ, ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಪಂಚನದಿಗಳ ಉಗಮದ ತಾಣವಾಗಿದೆ. ತುಂಗಾ, ಭದ್ರ, ನೇತ್ರಾ, ವೇದಾ, ಹೇಮಾ ನದಿಗಳು ಜಿಲ್ಲೆಯಲ್ಲಿ ಹುಟ್ಟಿಹಲವು ಜಿಲ್ಲೆಗೆ ಅಷ್ಟೇ ಅಲ್ಲ ಹಲವು ರಾಜ್ಯಗಳಿಗೆ ನೀರನ್ನಷ್ಟೇ ಅಲ್ಲದೇ ಜನರಿಗೆ ದಾಹ ತಣಿಸುವ ಜೊತೆಗೆ ಬೆಳೆಗಳಿಗೆ ನೀರುಣಿಸುತ್ತಿರುವುದು ಸತ್ಯ.
1864 ರಲ್ಲಿ ಆಂಗ್ಲವರಾದ ಶ್ರೀ ಟಿ.ಅಕ್ಟೋಲ್ ಎಂಬ ಜಿಲ್ಲಾಧಿಕಾರಿಯಿಂದ ಆರಂಭವಾಗಿರುವ ಆಡಳಿತಕ್ಕೆ ಕನ್ನಡಿಗರಾದ ದಿವಂಗತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಜನಪದ ತಜ್ಞ ಹೆಚ್.ಎಲ್.ನಾಗೇಗೌಡರಂತವರು ಜಿಲ್ಲಾಧಿಕಾರಿಗಳಾದ ಧೀಮಂತ ಹೆಮ್ಮೆಯ ಸಂಗತಿ ಮರೆಯಲಾಗದು. ರಾಜಕಾರಣ ದಲ್ಲೂ ಹಲವು ದಿಗ್ಗಜರನ್ನು ಸೃಷ್ಟಿಸಿರುವ ದಾಖಲೆಗಳಿವೆ.
ರಾಷ್ಟ್ರದಲ್ಲಿ 1952 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಸೇರಿ ಲೋಕಸಭಾ ಕ್ಷೇತ್ರದಿಂದ ಹೆಚ್.ಸಿದ್ದನಂಜಪ್ಪ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿ ಲೋಕಸಭಾ ಸದಸ್ಯರಾದರೆ 1977ರಲ್ಲಿ ಜಗತ್ತು ಪ್ರಸಿದ್ಧ ರಾಜಕಾರಣಿ ಇಂದಿರಾಗಾಂಧಿಗೆ ಪುನರುಜ್ಜೀವನ ಕೊಟ್ಟ ಜಿಲ್ಲೆ ಇದರ ಜೊತೆಗೆ 1952 ರಲ್ಲಿ ತರೀಕೆರೆ ವಿಧಾನ ಸಭಾ ಕ್ಷೇತ್ರದ ಚುನಾವಣೆ ತಕರಾರಿನಿಂದಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿ ದಾಖಲೆ ಸೃಷ್ಟಿಸಿರುವುದು ದಾಖಲೆಯೇ ಸರಿ.
ಕಲೆಗಳು ಮುಖ್ಯವಾಗಿ ಜಾನಪದ ಕಲೆಗಳ ತವರೂರು 1967 ರಲ್ಲಿ ವಿಶ್ವ ಜಾನಪದ ಸಮ್ಮೇಳನ ತರೀಕೆರೆಯಲ್ಲಿ ನಡೆಸಿ “ಹೊನ್ನ ಬಿತ್ತೇವು ಹೊಲಕ್ಕೆಲ್ಲಾ” ಎಂಬ ಅಕರ ಗ್ರಂಥ ತದಿರುವುದು ವಿಶೇಷ. ಚಲನಚಿತ್ರ ರಂಗಕ್ಕೆ ಜಿಲ್ಲೆ ಕೊಟ್ಟಿರುವ ಕಾಣಿಕೆ ಬಹಳಷ್ಟು.1990ರವರೆಗೆ ಬಹುತೇಕ ಚಲನಚಿತ್ರಗಳ ಚಿತ್ರೀಕರಣ ಜಿಲ್ಲೆಯಲ್ಲಿ ನಡೆದಿವೆ ಅದರಲ್ಲೂ ಡಾ/ರಾಜ್ ಕುಮಾರ್ ಚಿತ್ರಗಳ ಚಿತ್ರೀಕರಣ ದಾಖಲೆ ಮಾಡಿವೆ. ಪತ್ರಿಕಾಕ್ಷೇತ್ರ ಮಾತ್ರ ಮೂರಕ್ಕೆ ಇಳಿದಿಲ್ಲಾ ಆರಕ್ಕೆ ಏರರೀಲ್ಲಾ ಎಂಬ ಸ್ಥಿತಿಗೆ ಮಲೆನಾಡು ಬಯಲುಸೀಮೆ ಎಂಬ ಕಾರಣವಿರಬಹುದು. ಇದರ ಮಧ್ಯೆ ನ್ಯೂಸ್ ಕಿಂಗ್ ಕನ್ನಡ.ಕಾಂ ಎಂಬ ಡಿಜಿಟಲ್ ಮಾಧ್ಯಮ ಆರಂಭಕ್ಕೆ ಹಾರೈಸಿ ಎಂಬುದಷ್ಟೆ ನಮ್ಮ ಕೋರಿಕೆ.
ಎನ್.ರಾಜು, ಪ್ರಧಾನ ಸಂಪಾದಕ
ನ್ಯೂಸ್ ಕಿಂಗ್ ಕನ್ನಡ.ಕಾಂ
Leave a comment