Home namma chikmagalur chikamagalur ರಾಜಕಾರಣಿಗಳೆಂಬ ಹೊಸ-ಹೊಸ ವೇಷದಾರಿಗಳು
chikamagalurHomeLatest Newsnamma chikmagalur

ರಾಜಕಾರಣಿಗಳೆಂಬ ಹೊಸ-ಹೊಸ ವೇಷದಾರಿಗಳು

Share
Share

ಹೊಸ,ಹೊಸ ವೇಷದಾರಿಗಳು ! ರಾಜಕಾರಣ ಮತ್ತು ಇಲಾಖೆಗಳಿಗೆ ಅವಿನಾಭಾವ,ಆಕ್ರಮ ಸಂಬಂಧ. ಕಳೆದ ನಲವತ್ತು ವರ್ಷಗಳಿಂದ ಸಾರ್ವಜನಿಕ ಬದುಕು,ಹೋರಾಟ ಪತ್ರಕರ್ತನಾಗಿ ಕಂಡಿರುವ ಸತ್ಯಗಳು.

1980 ರ ತನಕ ರಾಜಕಾರಣ ಅಷ್ಟು ಕುಲಷಿತ ವಾಗಿರಲಿಲ್ಲ .ಅಲ್ಪ,ಸ್ವಲ್ಪ ಘನತೆ ಮತ್ತು ಗೌರವ ಉಳಿಸಿಕೊಂಡಿತ್ತು ಎಂದು ಹಿರಿಯರು ಹೇಳುತ್ತಾರೆ. 1985 ರಲ್ಲಿ ಮೌಲ್ಯದಾರಿತ ರಾಜಕಾರಣಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರ ಬಂದು ಶಾಸಕರುಗಳ ಅಣತೆಯ ಮೇರೆಗೆ ಅಧಿಕಾರಿಗಳ ವರ್ಗಾವಣೆ ಪ್ರಾರಂಭವಾದ ನಂತರ ಇಲಾಖೆಯ ಮುಖ್ಯಸ್ಥರು ಅಧಿಕಾರಕ್ಕೆ ಬರುವ ಪಕ್ಷದ ಬಾವುಟ,ಅಂಗಿ ಜೇಬು, ಹಣ,ನಶೆ,ಸಪ್ಲೈ ಮಾಡುವ ಮಟ್ಟದಲ್ಲಿ ವ್ಯವಹಾರ ಕುದುರಿಸಿ ಕೊಂಡು ಮೂರು, ನಾಲ್ಕು ವರ್ಷ ಜನರ ಜೇಬಿಗೆ ಕತ್ತರಿ ಪ್ರಯೋಗ ಮಾಡತೊಡಗಿದರು.

ಸರ್ಕಾರಗಳು ಬದಲಾದಂತೆ ಅಧಿಕಾರಿಗಳು, ನೌಕರರು ಮತ್ತು ಕಛೇರಿಗಳು ಬದಲಾಗುತ್ತವೆ.ಬದಲಾದರು ಮತ್ತೆ ಬಂದು ಕೂರುವವರು ಆದೇ ಮುಖವಾಡದವರು,ಅಲ್ಲಿಗೆ ಬರುವ ಏಜೆಂಟ್ ರು ಪಕ್ಷದವರು ವಿವಿಧ ವೇಶ ಧರಿಸಿ ಠಾಳಯಿಸುತ್ತಾರೆ.

ಕಾನೂನು, ನ್ಯಾಯ, ನೀತಿಗಿಂತ ಜನಪ್ರತಿನಿಧಿಯಾಗಿರುವವರ ಹೆಂಡತಿ,ಮಕ್ಕಳು ಹೇಳುವುದೆ ನ್ಯಾಯ ಅವರ ಮನೆಯ ನಾಯಿ ಬಾಲ ಅಲ್ಲಡಿಸಿದರೆ ಏನೋ ಆದೇಶ ಎಂದು ತಿಳಿಯುವ ಅಧಿಕಾರ ವರ್ಗದವರು ಕಾರಬಾರು ಕಾಣಬಹುದು.

ಈಗಂತೂ ಒಂದೇ ಕುಟುಂಬ ಹೆಂಡತಿ,ಮಕ್ಕಳು, ಮೊಮ್ಮಕ್ಕಳ ಆಡಳಿತ ವ್ಯವಸ್ಥೆ ಯಲ್ಲಿ ಇದ್ದೇವೆ ಎಂಬುದು ಎಲ್ಲಾ ಕಡೆ ಇದೆ. ಮತದಾರರಿಗೆ ಭಿಕ್ಷೆ ನೀಡಿದ್ದೇವೆ ಎನ್ನುತ್ತಲೇ ಬಾಚಿ,ಬಡಿದು ಕೊಳ್ಳುವ ಹೀನಾಯ ಸ್ಥಿತಿಗೆ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರ ವರ್ಗದವರು ತಲುಪಿದ್ದಾರೆ. ಯಾವುದೇ ಕಛೇರಿಗೆ ಹೋಗಲಿ ಶಾಸಕರು ಆಥವಾ ಅವರ ಮನೆಯವರಿಂದ ಹೇಳಿಸಿ ಎಂಬ ಸಿದ್ದ ಉತ್ತರ ಸಿಗುತ್ತದೆ.

ಕಂದಾಯ, ಪೋಲಿಸ್, ಗ್ರಾಮೀಣ ಅಭಿವೃದ್ಧಿ ಇಲಾಖೆಗಳು ಸಾಮಾನ್ಯರಿಗೆ ನ್ಯಾಯ ನೀಡುವ ಬದಲು ಸಂಕಷ್ಟಕ್ಕೆ ತಳ್ಳಿ ಎರಡು ಕೈಯಿಂದ ಹೆಚ್ಚು ಕಡಿಮೆಯಾದರೆ ಬಾಯಿಯಲ್ಲಿ ನೆಕ್ಕಿ ಕೊಳ್ಳಲು ಸದಾ ವಂಚು ನಡೆಸುತ್ತಿದ್ದಾರೆ.

ಒಂದು ಸ್ಥಾನಕ್ಕೆ ಬಂದು ಕೂರಲು ರೇಟ್ ಫಿಕ್ಸ್ ಜೊತೆಗೆ ಪ್ರತಿವರ್ಷ ರಿನೀವಲ್ ಮಾಡಿಕೊಂಡರೆ ಸ್ಥಾನ ಗಟ್ಟಿ ಇಲ್ಲದಿದ್ದರೆ ಗಂಟು ಮೂಟೆ ಕಟ್ಟಬೇಕು. ಜನಪ್ರತಿನಿಧಿಗಳು ಜನರ ಸೇವೆ ಬಿಟ್ಟು ಜಾಗ ಕಬಳಿಸುವದು,ಗಣಿಗಾರಿಕೆ ಮಾಡುವುದು,ರಿಯಲ್ ಎಸ್ಟೇಟ್, ಎಣ್ಣಿ ಅಂಗಡಿ ತೆರೆಯುವುದು,ಟ್ರಾನ್ಸ್ ಫಾರ್ ದಂಧೆ ನಡೆಸುವದೇ ಕಾಯಕವಾಗಿದೆ ಇದಕ್ಕೆ ಬೇಕಾದ ಏರ್ಪಾಡು ಮಾಡುವ ನಿತ್ಯ ಸುಮಂಗಲಿ ತರಹ ಬೇಕು ಬೇಡಗಳನ್ನು ಪೊರೈಕೆ ಮಾಡುವ ದಂಧೆಕೋರರಾಗಿರುವಾಗ ಆಡಳಿತ ವ್ಯವಸ್ಥೆ ಸರಿಪಡಿಸಲು ಆಗದಂತಹ ದುಸ್ಥಿತಿಯಲ್ಲಿ ಇರುವಾಗ ದಾರಿ ಹುಡುಕಿ ಕೊಳ್ಳುವ ಜವಾಬ್ದಾರಿ ಬೇಕಾಗಿದೆ.

New political impersonators

Share

Leave a comment

Leave a Reply

Your email address will not be published. Required fields are marked *

Don't Miss

ಕೃಷಿಕರ ಬದುಕಿಗೆ ಉತ್ತೇಜನ ನೀಡಲು ಹಲವಾರು ಜನಪರ ಯೋಜನೆ

ಚಿಕ್ಕಮಗಳೂರು-ಸರ್ಕಾರ ಕೃಷಿಕರ ಬದುಕನ್ನು ಹಸನಾಗಿಸಬೇಕೆಂಬ ಉದ್ದೇಶದೊಂದಿಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ನೆರವಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು. ಅವರು ಇಂದು ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ...

ಜಿಲ್ಲಾ ರೈತ ಸಂಘದಿಂದ ಪ್ರತಿಭಟನಾ ಜಿಲ್ಲಾ ಸಮಾವೇಶ

ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ವಾಸಿಸುವ ರೈತರು ಎದುರಿಸುತ್ತಿರುವ ಕಾಡಾನೆ ದಾಳಿ ಮತ್ತು ಬಗರ್‌ಹುಕುಂ ಸಮಸ್ಯೆಗಳು ತೀವ್ರ ಕಳವಳ. ಈ ವನ್ಯಮೃಗಗಳಿಂದ ಮೃತಪಟ್ಟ ರೈತ ಕುಟುಂ ಬಕ್ಕೆ ಸರ್ಕಾರ ೫೦ ಲಕ್ಷ ರೂ....

Related Articles

ಮಾನಸಿಕ-ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

ಚಿಕ್ಕಮಗಳೂರು:  ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್....

ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗಬೇಕಾದರೆ ನಮ್ಮ ಚಿಂತನೆಗಳು ಬದಲಾಗಬೇಕು

ಚಿಕ್ಕಮಗಳೂರು: ಅಸಮಾನತೆ, ಅಸ್ಪೃಶ್ಯತೆ, ಜಾತೀಯತೆ ದೂರವಾಗಿ ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗಬೇಕಾದರೆ ನಮ್ಮ ಚಿಂತನೆಗಳು ಬದಲಾಗಬೇಕು, ಬಸವಾದಿ...

ಹಣಕ್ಕಾಗಿ ಮದುವೆ ಮನೆಯಲ್ಲಿ ಮಂಗಳಮುಖಿಯರ ರಂಪಾಟ

ಚಿಕ್ಕಮಗಳೂರು:  ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮದುವೆ ಮನೆಯೊಂದಕ್ಕೆ ನುಗ್ಗಿದ ಮಂಗಳಮುಖಿಯರು ಹಣಕ್ಕಾಗಿ ರಂಪಾಟ ನಡೆಸಿ, ಮದುವೆಯ ಸಂಭ್ರಮವನ್ನೇ...

ಶಿವಶರಣರ ಆಶಯದಂತೆ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಸವಣ್ಣ ಸೇರಿದಂತೆ...