ಚಿಕ್ಕಮಗಳೂರು: ಕಳೆದ ಐದಾರು ತಿಂಗಳಿಂದ ಕಾಡಾನೆ ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಮತ್ತು ಕಾಫಿ ಬೆಳೆಗಾರರು ಮತ್ತು ಜನ ಸಂಕಷ್ಟಕ್ಕೆ ಸಿಲುಕಿದ್ದು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಧೋರಣೆಯನ್ನು ಜಿಲ್ಲಾ ರೈತ ಸಂಘದ ಅಧ್ಯಕ್ಷ ಡಿ.ಮಹೇಶ್ ದೂರಿದ್ದಾರೆ.
ಚಿಕ್ಕಮಗಳೂರು ಬಳಿ ಬರುವ ಕಾಡಾನೆಗಳನ್ನು ಹಿಮ್ಮೆಟ್ಟಿಸುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಇದರಿಂದ ಬೆಳೆಗಾರರಿಗೆ ಮತ್ತು ರೈತರಿಗೆ ನಷ್ಟ ಉಂಟಾಗಿದೆ ಆದರೂ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡಿಲ್ಲ ಎಂದಿರುವ ಅವರು ಇಂದು ಕೂಡ ವಸ್ತಾರೆ,ಅಲದಗುಡ್ಡೆ ಮತ್ತು ವಳಗೆರೆ ಹಳ್ಳಿ ಸುತ್ತ ಮುತ್ತ ಕಾಡಾನೆಗಳಿದ್ದು ವಿದ್ಯಾರ್ಥಿಗಳು ರೈತರು ಬೆಳೆಗಾರರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಓಡಾಡುವಂತೆ ತಿಳಿಸಿ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಅರಣ್ಯ ಅರಣ್ಯದ ಕಡೆ ಓಡಿಸುವಂತೆ ಒತ್ತಯಿಸಿದ್ದಾರೆ.
Neglect of the Forest Department is the scourge of the forest
Leave a comment