ಚಿಕ್ಕಮಗಳೂರು : ಕಡೂರು ತಾಲ್ಲೂಕಿನ ಯಗಟಿಯ ನಾಗರಾಜಪ್ಪನವರಿಗೆ ಪ್ರಸ್ತುತ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆಯುವುದರ ಮೂಲಕ ವೀರಗಾಸೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ನಾಗರಾಜಪ್ಪ ವೀರಗಾಸೆ ಯ ವಿವಿಧ ಪ್ರಕಾರಗಳಲ್ಲಿ ಪರಣಿತಿ ಪಡೆದವರು.ವೀರಗಾಸೆಯ ಚಾಮಳಾ,ಕರಡೆ,ದೋಣು ವಾದ್ಯದಲ್ಲಿ ನುರಿತವರು ಸೇರಿದ ಜನ ತಲೆತೂಗುವಂತೆ ನುಡಿಸುವ ಕಲೆಯನ್ನು ಸಿದ್ದಿಸಿಕೊಂಡಿದ್ದಾರೆ.
ಕಳೆದ ನಲವತ್ತು ವರ್ಷಗಳಿಂದ ಎಲೆಮರೆಯ ಕಾಯಿಯಂತೆ ಗ್ರಾಮೀಣ ಭಾಗದ ತೇರು,ಜಾತ್ರೆ, ಉತ್ಸವ ಮತ್ತು ದೇವರ ಕಾರ್ಯಕ್ರಮಗಳಲ್ಲಿ ಕೈ ಚಳಕ ತೋರಿಸುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ. ಇಂತಹ ಕಲೆಗಳು ಉಳಿಯಬೇಕು, ಬೆಳೆಯಬೇಕು ಎಂದರೆ ಯುವಕರು ಪಾಲ್ಗೊಳ್ಳ ಬೇಕು ಎನ್ನತ್ತಾರೆ. ಇಂತಹ ಉತ್ಸಾಹಿಯನ್ನು ಜಾನಪದ ಅಕಾಡೆಮಿ ಪ್ರಶಸ್ತಿಗೆ ಅಯ್ಕೆ ಮಾಡಿರುವುದು ಶ್ಲಾಘನೀಯ.
ನಾಗರಾಜಪ್ಪಗೆ ಪ್ರಶಸ್ತಿ ಪ್ರಕಟವಾದ ತಕ್ಷಣ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷರಾದ ಜಗದೀಶ್ವರಚಾರ್ ನೇತೃತ್ವದಲ್ಲಿ ಗಿರಿಯಮ್ಮದೇವಿ ಕೋಲಾಟ ಸಂಘ ಮತ್ತು ಗ್ರಾಮಸ್ಥರು ಸೇರಿ ಗೌರವಿಸಿ ಸನ್ಮಾನ ಮಾಡಿರುವುದು ಕಲಾವಿದರಿಗೆ ಸತ್ಕರಿಸುವ ಸಂಸ್ಕೃತಿ ತೋರಿಸಿದ್ದಾರೆ. ನಾಗರಾಜಪ್ಪ ಇನ್ನಷ್ಟು ಮತ್ತಷ್ಟು ಪ್ರಶಸ್ತಿಗೆ ಭಾಜನರಾಗಲಿ ನಾಗರಾಜಪ್ಪ ಇತರ ಕಲಾವಿದರಿಗೂ ಮಾರ್ಗದರ್ಶನ ನೀಡಲಿ.
Leave a comment