ಚಿಕ್ಕಮಗಳೂರು : ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಸತತವಾಗಿ ಎರಡು ಬಾರಿ ವಿಧಾನ ಪರಿಷತ್ ಗೆ ಅಯ್ಕೆಯಾಗುವುದರ ಮೂಲಕ ದಾಖಲೆ ಬರೆದ ಪ್ರಾಣೇಶ್ ಏನು ಕೆಲಸ ಮಾಡಲಿಲ್ಲ ಎಂಬ ದಾಖಲೆ ಬಿಟ್ಟು ಹೋಗುವುದು ಖಚಿತ.ಸರ್ಕಾರಿ ಕಾರ್ಯಕ್ರಮ ಮತ್ತು ಪಕ್ಷದ ಸಭೆಗಳಲ್ಲಿ ಭಾಗವಹಿಸಿದ್ದು ಬಿಟ್ಟರೆ ಸ್ಥಳೀಯ ಸಂಸ್ಥೆಗಳಿಗಾಗಲಿ ಜಿಲ್ಲೆಗಾಗಲಿ ನಯಾಪೈಸೆಯಷ್ಟು ಉಪಯೋಗವಿಲ್ಲ ಎಂದು ಬಿಜೆಪಿಯವರು ಗೊಣಗುವುದು ಗುಟ್ಟಾಗಿ ಉಳಿದಿಲ್ಲ.
ಪ್ರಾಣೇಶ್ ಕಟ್ಟರ್ ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ, ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದಾಗ ಇದ್ದಷ್ಟು ಹೆಸರು ಈಗಾ ಇಲ್ಲ.
ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಕುರುವು ಉಳಿಯುವಂತಹ ಕಾಮಗಾರಿ ಕೇಳಲೇ ಬೇಡಿ,ಶಾಸಕರಿಗೆ ದೊರೆಯುವಷ್ಟು ಅನುದಾನ ಸಿಗುವುದಿಲ್ಲ ನಿಜ ಆದರೆ ಬಂದಿರುವ ಅನುದಾನದಲ್ಲಿ ಆಗಿರುವ ಕೆಲಸ ಬ್ಯಾಟರಿ ಹಾಕಿ ಹುಡಕಬೇಕು.ಪ್ರಾರಂಭದಲ್ಲಿ ಗ್ರಾಮ ಪಂಚಾಯತಿಗಳಿಗೆ ಕಂಪ್ಯೂಟರ್ ಎಂಬ ಸುದ್ದಿ ಬಿಟ್ಟರೆ ಬೇರೆಲ್ಲಾ ಶೂನ್ಯ.
ಈಗ ಬೇರೆ ಉಪಸಭಾಪತಿ ಗೂಟದ ಕಾರು ಕಛೇರಿ ಸಿಬ್ಬಂದಿ ಜೊತೆಗೆ ಚುನಾವಣೆಯ ತಕರಾರು ಬಗ್ಗೆ ಕೋರ್ಟ್ ಹೀಗೆ ಸಾಗುತ್ತಿದೆ .ಕೋರ್ಟ್ನಲ್ಲಿ ಪ್ರಾಣೇಶ್ ಸ್ಥಾನ ರದ್ದಾಗುತ್ತದೆ ಎಂದು ಕಾದುಕುಳಿತು ಪಟಾಕಿ ಹೊಡೆದವರಿಗೆ ಚಳ್ಳೇಹಣ್ಣು ತಿನ್ನಿಸುತ್ತಾ ತಮ್ಮ ಅವಧಿ ಮುಗಿಯುವ ಮುನ್ನವೇ ಅಲ್ಪಸ್ವಲ್ಪ ಕೆಲಸ ಮಾಡಲಿ ಎಂಬುದಷ್ಟೇ ಆಶಯ.
Leave a comment