ಚಿಕ್ಕಮಗಳೂರು: ಚಿಕ್ಕ ಮಗಳೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಪ್ರಾಣೇಶ್ ಅಯ್ಕೆಯಾಗಿದ್ದು ಕೇವಲ ಆರು ಮತಗಳ ಅಂತರದಿಂದ ಇದನ್ನು ಪ್ರಶ್ನೆ ಮಾಡಿ ಎದುರಾಳಿ ಪರಾಜಿತ ಅಭ್ಯರ್ಥಿ ಗಾಯತ್ರಿಶಾಂತೇಗೌಡ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು ಕಳೆದ ನಾಲ್ಕಾರು ವರ್ಷಗಳಿಂದ ಕೋರ್ಟ್ ಸುತ್ತಿ ಸುಸ್ತಾದವರಿಗೆ ಸದ್ಯ ಅಂತಿಮ ಹಂತಕ್ಕೆ ಬಂದು ನಿಂತಂತೆ ಕಾಣುತ್ತಿದೆ.
ಹೈಕೋರ್ಟ್ ನಲ್ಲಿ ಗುಪ್ತವಾಗಿ ಮತಗಳ ಮರು ಎಣಿಕೆ ಮಾಡಲು ಆದೇಶವಾಗಿದ್ದು ಕಳೆದ ವರ್ಷ ಮತಗಳ ಎಣಿಕೆ ಕಾರ್ಯ ಮುಗಿಸಿ ಕೋರ್ಟ್ ಗೆ ವರದಿ ಕೂಡ ಕೊಡಲಾಗಿತ್ತು. ಸೋತ ಅಭ್ಯರ್ಥಿ ಪರ ಕೆಲವು ಸಲ ಪಟಾಕಿ ಸಿಡಿಸಿ ಜಯಕಾರ ಕೂಡ ಕೂಗಿ ವಿಜಯೋತ್ಸವದ ರೀತಿ ಕುಣಿದು ಕುಪ್ಪಳಿಸಿದ್ದರು.ಆದರೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣಿ ನಡೆಯುತಿತ್ತು.
ಪ್ರಾಣೇಶ ಕಡೆ ವಕೀಲರು ಬರೀ ಕೋರ್ಟ್ ನಲ್ಲಿ ದಿನಾಂಕ ತೆಗೆದುಕೊಂಡು ದಿನಗಳನ್ನು ದೂಡುತ್ತಿದ್ದರು ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ದಿನಾಂಕ ತೆಗೆದುಕೊಳ್ಳಲು ವಕೀಲರು ಮುಂದಾದರು ಎನ್ನಲಾಗಿದ್ದು ಇದರಿಂದ ನ್ಯಾಯಾಧೀಶರು ಬರೀ ದಿನಾಂಕ ತೆಗೆದುಕೊಂಡರೆ ಹೇಗೆ ವಿಚಾರಣೆಗೆ ಮುಂದಾಗಿ ಎಂದು ಗರಮ್ ಅಗಿ ಗದರಿದ್ದಲ್ಲದೆ ಫೆಬ್ರವರಿ 24 ರಂದು ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದು ಇಲ್ಲವಾದಲ್ಲಿ ಪ್ರಾಣೇಶ್ ಪಡಿಯುತ್ತಿರುವ ಪಡೆದಿರುವ ವೇತನ ಮತ್ತು ಸೌಲಭ್ಯ ನಿಲ್ಲಿಸ ಬೇಕಾಗುತ್ತದೆ ಎಂದಿರುವ ಬಗ್ಗೆ ವರದಿಯಾಗಿದೆ.
ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲಿ ಪ್ರಾಣೇಶ್ ಗೆ ಸಂಕಷ್ಟ ಎನ್ನುವಂತಾದರೆ ಗಾಯತ್ರಿ ಶಾಂತೇಗೌಡರವರು ನಿಟ್ಟುಸಿರು ಬಿಡುವುದರ ಜೊತೆಗೆ ಪಟಾಕಿ ಸ್ಟಾಕ್ ಮಾಡುವುದರಿಂದ ಹಿಡಿದು ಮಂತ್ರಿಗಿರಿಗೆ ಯಾವ ರೀತಿಯ ಪಟ್ಟುಹಿಡಿಯ ಬೇಕು ಎಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ ಎಂಬ ಗುಸು,ಗುಸು ಸುದ್ದಿಗಳು ಹರಡಿವೆ
MLC Pranesh is in critical condition.
Leave a comment