ಬೆಂಗಳೂರು: ವಿಧಾನ ಪರಿಷತ್ ಗೆ ನಾಲ್ವರನ್ನು ನೇಮಕ ಮಾಡಿ ಎರಡು ತಿಂಗಳ ಹಿಂದೆ ರಾಜ್ಯಪಾಲರ ಬಳಿ ಹೋಗಿದ್ದ ಪಟ್ಟಿಯಲ್ಲಿ ಆರತಿ ಕೃಷ್ಣ ಮತ್ತು ರಮೇಶ್ ಬಾಬು ಉಳಿದರೆ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮತ್ತು ಡಿ.ಜಿ.ಸಾಗರ್ ಪಟ್ಟಿಯಿಂದ ಔಟ್ ಆಗಿದ್ದಾರೆ. ಇವರ ಬದಲು ಪತ್ರಕರ್ತ ಮೈಸೂರು ಮೂಲದ ಶಿವಕುಮಾರ್ ಮತ್ತು ಹುಬ್ಬಳ್ಳಿ ಧಾರವಾಡ ಮೂಲದ ಜಕ್ಕಣ್ಣನವರ ಹೆಸರು ಅಂತಿಮ ಗೊಳಿಸಲಾಗಿದೆ.
ಆರತಿ ಕೃಷ್ಣಗೆ ಫೈಟ್ ಕೊಟ್ಟವರು ಬಿ.ಎಲ್.ಶಂಕರ್ ಜಿಲ್ಲೆಯ ರಾಜಕಾರಣದಲ್ಲಿ ಶಂಕರ್ ಕೈ ತೂರಿಸದಿದ್ದರೆ ಮುಗಿಯುವುದಿಲ್ಲ ಎಂಬ ಜಾಮಾನ ಮುಗಿದಂತೆ ಕಾಣಿಸುತ್ತಿದೆ. ಆರತಿ ಕೃಷ್ಣ ಆಯ್ಕೆ ಹಿಂದೆ ಶ್ಯಾಮ್ ಪಿತ್ರೋಡರವರ ಕೈ ಕೆಲಸ ಮಾಡಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಶಿವಕುಮಾರ್ ಏನೂ ಮಾಡಲಾಗಿಲ್ಲ.
ಆರತಿ ಕೃಷ್ಣ ರಾಷ್ಟ್ರ ಮಟ್ಟದಲ್ಲಿ ಬಲಿಷ್ಠ ರಾಗಿರುವುದು ಶಂಕರ್ ಮನೆ ಸೇರಬಹುದು. ಇಲ್ಲ ಎಂದರೆ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿ ಧರ್ಮಸ್ಥಳದವರನ್ನು ಮೆಚ್ಚಿಸಲು ಭಾಷಣ ಮಾಡಬಹುದು. ಇಂತಹ ಡಬಲ್ ಸ್ಟ್ಯಾಂಡರ್ಡ್ ರಾಜಕೀಯ ಮುಖವಾಡಗಳು ಇನ್ನೂ ಮುಂದೆ ನಿಂತ ನೀರಾಗಿ ಪಾಚಿ ಕಟ್ಟಬಹುದು. ಕೆಪಿಸಿಸಿ ಮಾಧ್ಯಮದ ಅಧ್ಯಕ್ಷರು ತಮ್ಮ ತಾಕತ್ತು ತೋರಿಸುವ ಜೊತೆಗೆ ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಖ್ಯಾತ ಪತ್ರಕರ್ತ ಭಾಷಣಕಾರರಾದ ದಿನೇಶ್ ಅಮೀನ್ ಮಟ್ಟು ಮಟ್ಟಾ ಆಗಿದ್ದು ಹೇಗೆ. ಸಿದ್ದರಾಮಯ್ಯ 2013 ರಲ್ಲಿ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಠೇಂಕಾರ ಮನುಷ್ಯನ ಹೆಸರು ಮೊದಲ ಪಟ್ಟಿಯಲ್ಲಿ ಒಕೆ ಈಗಿನ ಪಟ್ಟಿಯಲ್ಲಿ ಫಿಲ್ಟರ್ ಆಗಿದ್ದು ಏಕೆ? ಪತ್ರಕರ್ತರಿಗೆ ಸ್ಪಂದಿಸುವ ಗುಣಗಳಿಲ್ಲದ ಈತ ಜನಸಾಮಾನ್ಯರಿಗೆ ಹೇಗೆ ಸ್ಪಂದಿಸಲು ಸಾಧ್ಯ ಎಂಬ ಯಕ್ಷ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಇವರ ಬದಲಿಗೆ ಮೈಸೂರು ಮೂಲದ ಶಿವಕುಮಾರ್ ಎಂಬ ಪತ್ರಕರ್ತ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಡಿ.ಜಿ.ಸಾಗರ್ ದಲಿತ ಸಂಘಟನೆಯ ಮುಖಂಡ ಖರ್ಗೆ ಕುಟುಂಬಕ್ಕೆ ಕಂಟಕವಾಗಬಾರದು ಎಂಬ ಹಿನ್ನೆಲೆಯಲ್ಲಿ ಮೊದಲ ಪಟ್ಟಿಯಲ್ಲಿ ಹೆಸರು ಸೇರಿತ್ತು ಆದರೆ ಬದಲಾದ ಪರಿಸ್ಥಿತಿಯಲ್ಲಿ ಹುಬ್ಬಳ್ಳಿ ಧಾರವಾಡ ಮೂಲದ ಕಾಂಗ್ರೆಸ್ ಮುಖಂಡ ಜಕ್ಕಣ್ಣ ಎಂಟ್ರಿ ಕೊಟ್ಟಿದ್ದಾರೆ. ಅಂತೂ ಇಂತೂ ಕೊನೆಗೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾಗಲು ಗ್ರೀನ್ ಸಿಗ್ನಲ್ ಕೊಟ್ಟಿದೆ
Mattu out- Shivakumar in- Aarti strong- Jakkanna OK
Leave a comment