ಚಿಕ್ಕಮಗಳೂರು: ಸಂಗೀತದ ಬಗ್ಗೆ ಜನರಲ್ಲಿ ಅಭಿರುಚಿ ಮೂಡಿಸಲು ಹಾಗೂ ಗಮಕ ಕಲೆಗೆ ಉತ್ತೇಜನ ನೀಡುವ ಸಲುವಾಗಿ ಇದೇ ಮೇ.೧೭ ಮತ್ತು ೧೮ ರಂದು ಕುವೆಂಪು ಕಲಾಮಂದಿರದಲ್ಲಿ ೨೫ನೇ ವರ್ಷದ ರಜತ ಮಹೋತ್ಸವ, ದಾಸ ಶ್ರೇಷ್ಠ ಪುರಂದರ ದಾಸರು, ಸದ್ಗುರು ಶ್ರೀ ತ್ಯಾಗರಾಜ ಸ್ವಾಮಿಗಳು ಹಾಗೂ ಶ್ರೀ ಕನಕದಾಸರ ಆರಾಧನಾ ಮಹೋತ್ಸವವನ್ನು ಮನೋರಂಜನಿ ಸಂಗೀತ ಮಹಾವಿದ್ಯಾಲಯ ಆಯೋಜಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮನೋರಂಜನಿ ಸಂಗೀತ ಮಹಾವಿದ್ಯಾಲಯ ಸಂಸ್ಥಾಪಕ ಬಿ.ಸಿ. ಜಯರಾಂ ಅವರು, ೧೯೯೯ ರಲ್ಲಿ ಆರಂಭವಾದ ಆರಾಧನಾ ಮಹೋತ್ಸವ ಈಗ ೨೫ನೇ ವರ್ಷದ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಅಂಗವಾಗಿ ಸಂಗೀತದ ಎಲ್ಲ ಪ್ರಾಕಾರಗಳಾದ ಶಾಸ್ತ್ರೀಯ ಸಂಗೀತ, ಗಮಕ, ಭಕ್ತಿ ಸಂಗೀತ, ದಾಸರ ಪದ ಮುಂತಾದ ವೈವಿದ್ಯಮಯ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಈ ಸಂಸ್ಥೆಯಲ್ಲಿ ತ್ಯಾಗರಾಜರ ಆರಾಧನೆ ಅಲ್ಲದೆ ಪ್ರತೀ ವರ್ಷ ಶ್ರಾವಣ ಸಂಗೀತೋತ್ಸವ, ಕೃಷ್ಣ ಜನ್ಮಾಷ್ಠಮಿ, ದೇವಿ ನವರಾತ್ರಿ, ಮಾರ್ಗಶಿರೋತ್ಸವ ಹಾಗೂ ರಾಮನವಮಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಂಗೀತ ಕಾರ್ಯಕ್ರಮ ನಡೆಸಲಾಗುತ್ತಿದೆ. ಹಲವಾರು ಸಂಗೀತ ಶಿಬಿರಗಳು, ಉಚಿತ ಪ್ರಾಣಾಯಾಮ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ಏಕ ಕಾಲದಲ್ಲಿ ಏಕ ಕಂಠದಿಂದ ೬೦ ಜನ ಒಟ್ಟಾಗಿ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳನ್ನು ಹಾಡಲು ತಯಾರಾಗಿದ್ದಾರೆ ಎಂದು ಶ್ಲಾಘಿಸಿದರು.
ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಪ್ರತೀ ವರ್ಷ ಸರ್ಕಾರ ನಡೆಸುವ ಸಂಗೀತ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಗೆ, ಸಂಸ್ಥೆಗೆ, ಪೋಷಕರಿಗೆ ಕೀರ್ತಿ ತಂದಿದ್ದಾರೆಂದು ಹೇಳಿದರು.
ಕಾರ್ಯಕ್ರಮವನ್ನು ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮನೋರಂಜನಿ ಸಂಗೀತ ಮಹಾವಿದ್ಯಾಲಯ ಟ್ರಸ್ಟ್‌ನ ಪ್ರಾಂಶುಪಾಲರಾದ ಅಪರ್ಣ ಜಯರಾಂ ವಹಿಸುವರು, ಮುಖ್ಯ ಅತಿಥಿಗಳಾಗಿ ಸಿ.ಟಿ. ರವಿ, ಡಾ. ಸಿ. ರಮೇಶ್, ಡಿ.ಎನ್. ಶ್ರೀಧರ್, ವಿದ್ವಾನ್ ಹೆಚ್.ಎಸ್. ನಾಗರಾಜ್, ಡಾ. ಸಿ.ಕೆ. ಸುಬ್ಬರಾಯ, ಸಿ.ಸುರೇಶ್, ಡಿ.ಹೆಚ್. ನರೇಂದ್ರ ಪೈ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಗೀತಾಸಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ್ಣಾ ಜಯರಾಂ, ಲೀಲಾ ಶ್ರೀನಿವಾಸ್, ಪದ್ಮಾ ಚಂದ್ರಶೇಖರ್, ಬಾಲಕೃಷ್ಣ, ಜ್ಯೋತಿರಮೇಶ್ ಉಪಸ್ಥಿತರಿz
Manoranjani Music School’s Silver Jubilee Celebration at Kalamandira
Leave a comment