ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿರ್ಲಕ್ಷಿತ ಹಾಗೂ ಸಮಗ್ರ ಪೋಷಕಾಂಶ ನಿರ್ವಹಣೆಯ ಕೊರತೆಯಿರುವ ತೆಂಗಿನ ತೋಟಗಳಲ್ಲಿ ಅಣಬೆ ರೋಗದ ಲಕ್ಷಣ ಹಾಗೂ ನಿರ್ವಹಣೆ ಯನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಮರದ ಕೆಳ ಭಾಗದ ಗರಿಗಳು ಮೊದಲು ಹಳದಿ ಬಣ್ಣಕ್ಕೆ ತಿರುಗಿ ನಂತರ ಒಣಗಿ ಮರದ ಕಾಯಿಗಳ ಗಾತ್ರ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ. ಇಳುವರಿ ಕುಂಠಿತವಾಗುತ್ತದೆ. ಕೊನೆಯ ಹಂತದಲ್ಲಿ ಮರದ ಬುಡದಲ್ಲಿ ಚಿಕ್ಕಚಿಕ್ಕ ಅಣಬೆಯಾಕಾರದ ಶಿಲೀಂಧ್ರದ ಬೆಳವಣಿಗೆ ಕಂಡು ಬರುತ್ತವೆ.
ನಿರ್ವಹಣೆ: ಅಣಬೆ ರೋಗಕ್ಕೆ ತುತ್ತಾದ ಗಿಡಗಳನ್ನು ತೆಗೆದು ಸುಡಬೇಕು. ತೋಟಗಳಲ್ಲಿ ಬಸಿಗಾಲುವೆ ನಿರ್ಮಾಣ ಮಾಡಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ಹನಿ ನೀರಾವರಿ ಪದ್ಧತಿ ಅಳವಡಿಸಬೇಕು. ಸಮಗ್ರ ಪೋಷಕಾಂಶ ನಿರ್ವಹಣೆಯ ಜೊತೆಗೆ ತೆಂಗಿನ ಮರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೇವಿನ ಹಿಂಡಿಯನ್ನು (ವರ್ಷಕ್ಕೆ ಪ್ರತಿ ಗಿಡಕ್ಕೆ 5 ಕೆ.ಜಿ.) ಮತ್ತು 50 ಗ್ರಾಂ ಟ್ರೈಡೆಮಾರ್ಫ್ ಅನ್ನು 10 ಕೆ.ಜಿ ಕೊಟ್ಟಿಗೆ ಗೊಬ್ಬರದ ಜೊತೆಗೆ ವರ್ಷಕ್ಕೆ 2 ಬಾರಿ ಮಿಶ್ರಣ ಮಾಡಿಕೊಡಬೇಕು. ಅಣಬೆ ರೋಗಕ್ಕೆ ತುತ್ತಾದ ಮರಗಳಿಗೆ 5ಮಿ.ಲೀ ಟ್ರೈಡೆಮಾರ್ಫ್ ಅಥವಾ 3 ಮಿ.ಲೀ ಹೆಕ್ಸಾಕೋನಜೋಲ್ ಅನ್ನು 100 ಎಂ.ಎಲ್ ನೀರಿನಲ್ಲಿ ಬೆರೆಸಿ 3 ತಿಂಗಳಿಗೊಮ್ಮೆ ಬೇರಿನ ಮೂಲಕ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Management of fungal disease in coconut
Leave a comment