ಚಿಕ್ಕಮಗಳೂರು : ಎಂತೆಂಥವರೋ ಜೈಲಿಗೆ ಹೋಗಿದ್ದಾರೆ ನಾನು ಹೋಗೋಕೆ ರೆಡಿ, ನನ್ನ ಮಕ್ಕಳಿಗೆ ಮದುವೆನೂ ಮಾಡಿದ್ದೀನಿ ಬೇರೆನೂ ಕೆಲಸ ಇಲ್ಲ ಜೈಲಲ್ಲಿ ಹೋಗಿ ಇರ್ತೀನಿ
ಹೀಗೆ ಪಂಚಾಯ್ತಿ ರಸ್ತೆಗೆ ಟ್ರಂಚ್ ಹೊಡೆದು ಪಕ್ಕದ ತೋಟದ ಕಡೆಯಿಂದ ಹೋಗುವಂತೆ ಜಾಗ ಬಿಡದೆ ರೋಶಾವೇಷ ತೋರಿಸುತ್ತಿರುವವನು ಸತೀಶ , ಮೂಡಿಗೆರೆ ತಾಲೂಕಿನ ಸತೀಶ
ಪಂಚಾಯಿತಿ ರಸ್ತೆಗೆ ಟ್ರಂಚ್ ತೆಗೆದು ಹಾರಾಡುತ್ತಿರುವ ಹಳ್ಳಿಗನ ರೌಡಿಸಂ ಇದು, ನಾನು ಟ್ರಂಚ್ ತೆಗ್ದೆ ತಗಿತೀನಿ, ಅದೇಗ್ ಓಡಾಡ್ತೀಯೋ ಓಡಾಡು ನೋಡೋಣ, ಅದ್ಯಾರನ್ನ ಕರ್ಕೊಂಡ್ ಬರ್ತಿರೋ ಬಾ,, ನಾನು ನೋಡ್ತೀನಿ. ನಿನ್ ಹೆಣ ಕಡ್ದೆ ಹಾಕ್ತೀನಿ ನೋಡು ಮತ್ತೆ ಇದು ಸತೀಶನ ಆವಾಜ್ ದಾಟಿ,,,
ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದಲ್ಲಿ ಈ ರಸ್ತೆ ನನಗೆ ಸೇರಿದ್ದು, ನಾನು ಏನ್ ಬೇಕಾದ್ರು ಮಾಡಿಕೊಳ್ತೀನಿ, ನನ್ ಗಂಡು ಮಕ್ಳುದು ಮದ್ವೆ ಆಗಿದೆ ನಿನ್ನ ಮಕ್ಕಳು ಸಣ್ಣವು ಕಡ್ದು ಜೈಲಿಗೆ ಹೋಗಿ ಕೂರ್ತೀನಿ ಎಂತೆಂಥವರೋ ಜೈಲಿಗೆ ಹೋಗಿದ್ದಾರೆ ಎಂದು ಪುಂಕಾನುಪುಂಕವಾಗಿ ಪಂಚಾಯಿತಿ ರಸ್ತೆಗೆ ಟ್ರಂಚ್ ತೆಗೆದು ಸತೀಶ್ ಎಗರಾಡುತ್ತಿದ್ದಾನೆ, ಇವನು ಇಷ್ಟೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದು ಅದೇ ಗ್ರಾಮದ ಪ್ರವೀಣ್ ಎಂಬುವರಿಗೆ ಓಡಾಡಲು ಜಾಗವಿಲ್ಲದೆ ತೋಟದ ಮಾರ್ಗದಲ್ಲಿ ಓಡಾಟ ಮಾಡುವಂತೆ ಮಾಡಿದ್ದಾನೆ. ಈ ಘಟನೆ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a comment