ಚಿಕ್ಕಮಗಳೂರು : ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಯುವಕನೊರ್ವ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿದ್ದಾನೆ,
ಹೆಂಡ್ತಿ ಜೊತೆಯಲ್ಲಿನ ಜಗಳದಿಂದ ಮನನೊಂದು ಈತ ಆತ್ಮಹತ್ಯೆ ಯತ್ನ ಮಾಡಿದ್ದಾನೆ.
ಹಾಸನದಿಂದ ಬಂದು ಕಾಫಿನಾಡಲ್ಲಿ ಆತ್ಮಹತ್ಯೆಗೆ ಯತ್ನ ಮಾಡಿದ್ದು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಏಕಲವ್ಯ ವಸತಿ ಶಾಲೆ ಬಳಿ ಘಟನೆ ನಡೆದಿದೆ,
ಮನು ಎಂಬಾತನೇ ಹಾಸನದಿಂದ ಬಂದು ಚಾರ್ಮಾಡಿ ಘಾಟಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ
ಘಟನೆ ತಿಳಿದ ಸ್ನೇಹಿತರು ಕೂಡಲೇ 112 ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ, ಕೂಡಲೇ ಸ್ಥಳಕ್ಕೆ ಬೇಡಿ ನೀಡಿದ ಪೊಲೀಸರು ಆತನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ
ತಕ್ಷಣ ಪೊಲೀಸರು ಅಲರ್ಟ್ ಆಗಿದ್ದರಿಂದ ಸಾವಿನಿಂದ ಮನು ಪಾರಾಗಿದ್ದಾನೆ,
ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ತೀವ್ರ ರಕ್ತ ಸುರಿಯುತ್ತಿದ್ದಾಗ ಕೂಡಲೇ ಬಣಕಲ್ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪೊಲೀಸರು ಕೊಡಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ಆತನನ್ನು ರವಾನೆ ಮಾಡಿದ್ದಾರೆ, ಕುತ್ತಿಗೆಗೆ ಹೊಲಿಗೆ ಹಾಕಿಸಿ ಅವನ ಹೆಂಡತಿಗೆ ಕರೆ ಮಾಡಿ ಕರೆಸಿದ ಪೊಲೀಸರು
ಗಂಡ-ಹೆಂಡತಿಗೆ ಬುದ್ಧಿ ಹೇಳಿ ಹಾಸನಕ್ಕೆ ವಾಪಸ್ ಕಳುಹಿಸಿ ಕೊಟ್ಟಿದ್ದಾರೆ, ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Leave a comment