ಚಿಕ್ಕಮಗಳೂರು: ಶಿವಮೊಗ್ಗ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆ ಹಾಗು ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಅಡಿಕೆ ಬೆಳೆಗಾರರ ಮ್ಯಾಮ್ಕೋಸ್ ಆಡಳಿತ ಮಂಡಳಿಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ 19 ಜನರು ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳಿಂದ ಸಹಕಾರ ಭಾರತೀಯವರು ಆಡಳಿತದ ಚುಕ್ಕಾಣಿ ಹಿಡಿದಿದ್ದು ಹಿಂದಿಗಿಂತ ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ.
ಮ್ಯಾಮ್ಕೋಸ್ ನಲ್ಲಿ ಅರ್ಹ ಮತದಾರರು 11,511. ಮತ್ತು ನ್ಯಾಯಾಲಯದ ಮೂಲಕ 6,644 ಮತ ಚಲಾಯಿಸುವ ಹಕ್ಕು ಪಡೆದು ಒಟ್ಟು 18,155 ಮತದಾರರಲ್ಲಿ 12,180 ಮತದಾನ ಮಾಡಿದ್ದು ಸಹಕಾರ ಭಾರತಿಯ 19 ಜನರು ನಿರೀಕ್ಷೆ ಮೀರಿ ಗೆಲುವು ಸಾಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಚ್ಚೊಡಿ ಶ್ರೀನಿವಾಸ್, ಸುರೇಶ್ಚಂದ್ರ,ಕೊಪ್ಪದಿಂದ ಸಹನ ಮತ್ತು ನರೇಂದ್ರ ಕಳಸದಿಂದ ಪ್ರಸನ್ನ ಹೆಬ್ಬಾರ್ ಹಾಗು ತರೀಕೆರೆಯಿಂದ ಟಿ.ಎಲ್.ರಮೇಶ್ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ನವರು ಮ್ಯಾಮ್ಕೋಸ್ ಬಗ್ಗೆ ಅಷ್ಟು ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ ಆದರೆ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಅವರ ಹಿಂಬಾಲಕರು ಮತದಾರರ ಮೇಲೆ ಪ್ರಭಾವ ಬೀರಲು ತಂತ್ರ ಕುತಂತ್ರ ನಡೆಸಿದರು ಕೂಡ ಸಹಕಾರ ಭಾರತಿಗೆ ಗೆಲುವು
ಸಿಕ್ಕಿರುವುದು ಕಾಂಗ್ರೆಸ್ ಗೆ ಮುಖ ಭಂಗವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
Mamcos Sahakari Bharati wins
Leave a comment