ಚಿಕ್ಕಮಗಳೂರು: ಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವಾಗ ಗುಣ ಮಟ್ಟವನ್ನು ಕಾಯ್ದುಕೊಳ್ಳುವಂತೆ ಹಾಗೂ ಕಾಮಗಾರಿಗಳು ಕಳಪೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ, ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿಯ ೨೦೨೫-೨೬ನೇ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (೨೦ ಅಂಶಗಳನ್ನೊಳಗೊಂಡಂತೆ) ಮೊದಲನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕತ್ರಿಮಾರಮ್ಮ ದೇವಸ್ಥಾನದ ಕಾಮಗಾರಿಯನ್ನು ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿ, ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಎಂದು ಹೇಳಿದ ಅವರು ಬೀಳೆಕಲ್ಲಹಳ್ಳಿ-ಉದ್ದೇಬೋರನಹಳ್ಳಿ-ಅಯ್ಯನಕೆರೆ ಮಾರ್ಗದ ಕುಸಿದ ಏರಿ ದುರಸ್ತಿಗೆ ಕೈಗೊಂಡ ಕ್ರಮದ ಬಗ್ಗೆ ಪ್ರಸ್ತಾಪವಾದಾಗ ವಿವರಣೆ ನೀಡಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಬೀಳೆಕಲ್ಲಹಳ್ಳಿ-ಉದ್ದೆಬೋರನಹಳ್ಳಿ ಅಯ್ಯನಕೆರೆಗೆ ಹೋಗುವ ರಸ್ತೆಗೆ ರೂ ೪೦೦.೦೦ ಲಕ್ಷಗಳ ಅನುದಾನ ದೊರೆತಿದ್ದು, ಸರಪಳಿ ೦.೪೫ ರಲ್ಲಿ ಮೋರಿಯ ಭಾರಿ ಮಳೆಯಿಂದ ಕುಸಿದ ಪರಿಣಾಮ ರಸ್ತೆ ಏರಿ ಪುನಃ ನಿರ್ಮಿಸಿದ್ದು, ಹಾಳಾದ ಭಾಗಕ್ಕೆ ಡಾಂಬರ್ ರಸ್ತೆ ಮಾಡಿ ಪೂರ್ಣಗೊಳಿಸಲು ಗುತ್ತಿಗರದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಅಕ್ಷರ ದಾಸೋಹದ ಬಗ್ಗೆ ಪ್ರಸ್ತಾಪಿಸಿದಾಗ ಶಾಲೆಯಲ್ಲಿ ಮಕ್ಕಳಿ ವಿತರಿಸು ಆಹಾರದ ಗುಣಮಟ್ಟದ ಪರೀಶಿಲನೆ ಮಾಡಿ ನಂತರ ಅದನ್ನು ಮಕ್ಕಳಿಗೆ ವಿತರಣೆ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಸಭೆಯಲ್ಲಿ ಭಾಗವಹಿಸಿ ಸಭೆಗೆ ಗೈರು ಆಗಿರುವ ಅಧಿಕಾರಿಗಳಿಗೆ ಕಾನೂನಿನಡಿ ಪತ್ರ ಬರೆದು ಕ್ರಮತೆಗೆದುಕೊಳ್ಳುವಂತೆ ಸೂಚಿಸಿದರು. ಕೆಲವರಿಗೆ ಇ-ಖಾತೆ ಸಮ್ಯೆಯಿದೆ,ಅದರಲ್ಲೂ ಆದಿಶಕ್ತಿನಗರದ ನಿವಾಸಿಗಳು ಸ್ವಂತ ಮನೆ ನಿರ್ಮಿಸಿಕೊಂಡಿದ್ದರು ಸಹ ಅವರಿಗೆ ಇ-ಖಾತೆ ದೊರೆತ್ತಿಲ್ಲ ಅಲ್ಲಿನ ಜನರು ಬಡರವರಿದ್ದು, ಅವರಿಗೆ ತೊಂದರೆಯಾಗದಂತೆ ಇನ್ನು ಒಂದು ತಿಂಗಳಲ್ಲಿ ಜಂಟಿ ಸರ್ವೆ ಮಾಡಿ ಆ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಹೇಳಿದರು.
ತಾಲ್ಲೂಕಿನಲ್ಲಿ ವೈದ್ಯರ ಕೊರತೆಯಿಂದ ಜನರಿಗೆ ತೊಂದರೆಯಾಗುತ್ತಿದ್ದು, ವೈದ್ಯರು ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ತಿಳಿಸಿದರು
ಆಲ್ದೂರು ಮುಂತಾದ ಕಡೆಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಪದೇ ಪದೇ ಈ ಸಮಸ್ಯೆ ಎದುರಾಗಲು ಕಾರಣ ಹಾಗೂ ಅದಕ್ಕೆ ಶೀಘ್ರವಾಗಿ ಪರಿಹಾರ ನೀಡಿ ಜನರಿಗೆ ತೊಂದರೆಯಾಗುವುದನ್ನು ತಪ್ಪಸಿ ಅದರ ಜೊತೆಗೆ ಆನೆಗಳ ಹಾವಳಿಯಿಂದ ಬೆಳೆ ನಷ್ಟಗೊಂಡ ರೈತರಿಗೆ ಪರಿಹಾರ ಒದಗಿಸಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿ ಎಸ್.ಎಸ್.ಎಲ್,ಸಿ ಪರೀಕ್ಷೆಯಲ್ಲಿ ರಾಜ್ಯದ ಫಲಿತಾಂಶ ಶೇಕಡಾ ೬೬.೧೪, ಚಿಕ್ಕಮಗಳೂರು ಜಿಲ್ಲೆಯ ಫಲಿತಾಂಶ ೭೫.೩೬, ಚಿಕ್ಕಮಗಳೂರು ತಾಲ್ಲೂಕು ಫಲಿತಾಂಶ ಶೇಕಡಾ ೭೭.೩೯, ಸರ್ಕಾರಿ ಶಾಲೆಯ ಒಟ್ಟು ಫಲಿತಾಂಶ ೭೨.೪೨, ಅನುದಾನಿತ ಫಲಿತಾಂಶ ಶೇಕಡಾ ೬೮.೧೮, ಅನುದಾನ ರಹಿತಾ ಫಲಿತಾಂಶ ಶೇಕಡಾ ೯೨.೬೩ ಯಾಗಿದ್ದು, ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ ಎಂದು ಹೇಳಿದರು. ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಎಸ್.ಎಲ್ ಬೋಜೇಗೌಡ, ತಹಶಿಲ್ದಾರ್ ರೇಷ್ಮಾ ಶೆಟ್ಟಿ, ಕಡೂರು ತಾಲ್ಲೂಕು ತಹಶಿಲ್ದಾರ್ ಪೂರ್ಣಿಮಾ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Maintain quality standards while carrying out work.
Leave a comment