ಬಾಳೆಹೊನ್ನೂರು: ಆಲ್ದೂರು ವಲಯದ ಸಂಗಮೇಶ್ವರ ಪೇಟೆಯ ಸೆಕ್ಷನ್ ಪವರ್‌ಮ್ಯಾನ್ ಪ್ರವೀಣ ಪಾತ್ರೋಟ(25) ವಿದ್ಯುತ್ ಆಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿ ಗ್ರಾಮದ ಪ್ರವೀಣ ಅವರು, ಶುಕ್ರವಾರ ಬೆಳಿಗ್ಗೆ ಹುಣಸೇಕೊಪ್ಪ ಬಳಿ ವಿದ್ಯುತ್ ಫ್ಯೂಸ್ ಹಾಕಲು ತೆರಳಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಆಘಾತ ಆಗಿದೆ.
ಎರಡು ತಿಂಗಳ ಹಿಂದೆ ಅವರಿಗೆ ಮದುವೆ ಆಗಿತ್ತು. ಸ್ಥಳಕ್ಕೆ ಠಾಣಾಧಿಕಾರಿ ರವೀಶ್ ತೆರಳಿ, ಶವವನ್ನು ಬಾಳೆಹೊನ್ನೂರಿನ ಪ್ರಾಥಮಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಮೃತನ ಪೋಷಕರು ಬಂದ ನಂತರ ದೂರು ಪಡೆಯಲು ಪೊಲೀಸರು ನಿರ್ಧರಿಸಿದ್ದಾರೆ.
Lineman dies from electric shock
Leave a comment