Home namma chikmagalur chikamagalur ಸಹಕಾರಿ ಕ್ಷೇತ್ರ ಜಾತಿರಹಿತ, ಪಕ್ಷಾತೀತವಾಗಿ ಕಾರ್ಯನಿರ್ವಹಿಸಲಿ
chikamagalurHomeLatest Newsnamma chikmagalur

ಸಹಕಾರಿ ಕ್ಷೇತ್ರ ಜಾತಿರಹಿತ, ಪಕ್ಷಾತೀತವಾಗಿ ಕಾರ್ಯನಿರ್ವಹಿಸಲಿ

Share
Share

ಚಿಕ್ಕಮಗಳೂರು:  ಸಹಕಾರಿ ರಂಗದಲ್ಲಿ ಜಾತಿ, ಧರ್ಮ ಹಾಗೂ ರಾಜಕಾರಣಕ್ಕೆ ಅವಕಾ ನೀಡಬಾರದು. ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರ ಸೇವೆಯೇ ಮೂಲಮಂತ್ರ ವಾಗಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಯೂನಿಯನ್‌ನ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ಹೇಳಿ ದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇ ಲಾಖೆ ಸಹಯೋಗದಲ್ಲಿ ನಗರದಲ್ಲಿ ಗುರುವಾರ ನಡೆದ ಒಂದು ದಿನದ ರಾಜ್ಯಮಟ್ಟದ ವಿಶೇಷ ಸಹಕಾರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಜಗತ್ತಿನಲ್ಲಿ ಸಹಕಾರಿ ರಂಗವು ಬಹಳಷ್ಟು ಬದಲಾವಣೆ ಕಂಡಿದೆ. ಸಹಕಾರಿ ಕ್ಷೇತ್ರವು ಪಕ್ಷ, ಧರ್ಮಕ್ಕೆ ಸೀಮಿತಗೊಳ್ಳುವುದು ಸರಿಯಲ್ಲ. ಸಹಕಾರಿ ಕ್ಷೇತ್ರ ಪ್ರಾರಂಭದ ಕಾಲದಲ್ಲಿ ಗುಂಪುಗಾರಿಕೆ, ಜಾತಿ, ಪಕ್ಷಬೇಧದಿಂದ ಕಾರ್ಯನಿರ್ವಹಿಸುತ್ತಿದ್ದು ಇಂದಿನ ದಿನಮಾನದಲ್ಲಿ ಸೊಸೈಟಿಗಳು ರಾಜಕೀಯವಾಗಿ ಮಾ ರ್ಪಾಡುತ್ತಿದೆ ಎಂದರು.

ಇಂದಿನ ದಿನಗಳಲ್ಲಿ ಸಹಕಾರಿ ರಂಗದಲ್ಲಿ ಸಾಕಷ್ಟು ಸವಲತ್ತಿನ ಅನುಕೂಲವಿದ್ದರೂ ಬೆಳವಣಿಗೆಯಲ್ಲಿ ಹಿನ್ನೆಡೆ ಅನುಭವಿಸುತ್ತಿದೆ. ಕಾರಣ ಪಕ್ಷರಾಜಕೀಯ, ಗುಂಪುಗಾರಿಕೆ ಹೆಚ್ಚಾಗುತ್ತಿದ್ದು ಇದರಿಂದ ಜನರಿಗೆ ಸ ಮರ್ಪಕ ಸೌಲಭ್ಯ ಒದಗಿಸಲು ವಿಫಲವಾಗುತ್ತಿದೆ ಎಂದು ತಿಳಿಸಿದರು.

ರಾಜ್ಯಮಟ್ಟದ ಮೈಸೂರು ವಿಭಾಗದಿಂದ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಒಟ್ಟು ಎಂಟು ಜಿಲ್ಲೆಗಳಿಂ ದ ಸಹಕಾರಿ ಪ್ರತಿನಿಧಿಗಳು ಭಾಗವಹಿಸಿ ತರಬೇತಿ ಸೌಲಭ್ಯ ಪಡೆದುಕೊಳ್ಳುತ್ತಿದ್ದು, ಕೃಷಿ ಮತ್ತು ಕೃಷಿಯೇತರ ಸಹಕಾರಿ ಕ್ಷೇತ್ರ ಹೊರತುಪಡಿಸಿ, ಉಳಿದ ಎಲ್ಲಾ ಸಹಕಾರಿ ರಂಗಕ್ಕೂ ಶಿಕ್ಷಣ, ತರಬೇತಿ, ಪ್ರಚಾರ ಮೂಲಕ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಕಾರ್ಯಾಗಾರದಲ್ಲಿ ಸಹಕಾರಿ ಪ್ರತಿನಿಧಿಗಳು ಅನುಮಾನ, ಮಾಹಿತಿ ಕೊರತೆ ಅಥವಾ ತಿದ್ದುಪಡಿಗಳಂ ಥ ಸಂದೇಹಗಳಿದ್ದರೆ ಪರಿಣಿತ ಉಪನ್ಯಾಸಕರಿಂದ ಮಾಹಿತಿ ಪಡೆದುಕೊಳ್ಳಬೇಕು. ಜನರಿಗೆ ಅನುಕೂಲವಾ ಗುವ ಮಹತ್ತರ ಜವಾಬ್ದಾರಿ ಸಹಕಾರಿ ಸಿಬ್ಬಂದಿಗಳ ಮೇಲಿದ್ದು, ಮನಸ್ಸಿನಲ್ಲಿ ಉದ್ಬವಿಸುವ ಪ್ರಶ್ನೆಗಳಿಗೆ ಮಾ ಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯಕ್ ಮಾತನಾಡಿ ಸಮಾಜದ ಆರ್ಥಿಕ ವ್ಯವಸ್ಥೆ ನಿರ್ವಹಿಸುತ್ತಿರುವ ಸಹಕಾರಿ ಕ್ಷೇತ್ರದ ಜವಾಬ್ದಾರಿ ಬಹಳಷ್ಟಿದೆ. ಈ ಕ್ಷೇತ್ರದಲ್ಲಿ ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು. ಕಲಿತು ಮುನ್ನೆಡೆದರೆ ವಾಸ್ತವದಲ್ಲಿ ಬದುಕುತ್ತಾರೆ. ಕಲಿಯದಿದ್ದರೆ ಭ್ರಮಾಲೋಕದಲ್ಲಿ ಮುಳುಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.

ಇದೇ ವೇಳೆ ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಆರ್.ಗುರುಸ್ವಾಮಿ ಸಹಕಾರ ಕಾಯ್ದೆ ಯ ಪ್ರಮುಖ ಅಂಶಗಳು ಹಾಗೂ ಇತ್ತೀಚಿನ ತಿದ್ದುಪಡಿಗಳು ಮತ್ತು ಸಹಕಾರ ಸಂಘಗಳಿಗೆ ಅನ್ವಯಿಸುವ ತೆರಿಗೆ ಅಂಶಗಳ ಸಮಗ್ರವಾಗಿ ವಿವರಣೆ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ.ದಿವಾಕರ್ ಅಧ್ಯಕ್ಷತೆ ವಹಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಖಾರ ಯೂನಿಯನ್ ಉಪಾಧ್ಯಕ್ಷ ಸೀಗೇಹಡ್ಲು ಹರೀಶ್, ನಿರ್ದೇಶಕ ಪಿ.ಶಶಿಕುಮಾರ್, ಸಮನ್ವ ಯಾಧಿಕಾರಿ ಎಂ.ಮಲ್ಲರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶಸ್, ವ್ಯವಸ್ಥಾಪಕ ಇಂದ್ರೇಶ್ ಹಾ ಗೂ ವಿವಿಧ ಸಹಕಾರಿ ರಂಗದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Let the cooperative sector function in a caste-free and non-partisan manner.

Share

Leave a comment

Leave a Reply

Your email address will not be published. Required fields are marked *

Don't Miss

ಕೇಂದ್ರ ಬಜೆಟ್‌ ನಲ್ಲಿ ರಾಜ್ಯಕ್ಕೆ ಬಿಡಿಗಾಸು ನೀಡದೆ ಮಲತಾಯಿ ಧೋರಣೆ

ಚಿಕ್ಕಮಗಳೂರು: ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ರಾಜಕೀಯ ಲಾಭಕ್ಕೋಸ್ಕರ ಬಜೆಟ್‌ನಲ್ಲಿ ಹಣದ ಹೊಳೆಯನ್ನೇ ಹರಿಸಿರುವ ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಬಿಡಿಗಾಸನ್ನೂ ನೀಡದೆ ಮಲತಾಯಿ ಧೋರಣೆ ಅನುಸರಿಸಿದ್ದು, ರಾಜ್ಯದಿಂದ ಆರಿಸಿ...

ಅಕ್ರಮ ಮದ್ಯ ಮಾರಾಟ-ಇಬ್ಬರ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ಬಣಕಲ್ ಮತ್ತು ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಬಣಕಲ್ ಪೊಲೀಸ್ ಠಾಣಾ...

Related Articles

ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಕ್ರೀಡಾಕೂಟ-ಸಾಂಸ್ಕೃತಿಕ ಸ್ಪರ್ಧೆ

ಚಿಕ್ಕಮಗಳೂರು:  ಅತೀ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗದವರಿಗೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಫೆಬ್ರವರಿ ೨೧...

ಅನುಮಾನಗಳಿಗೆ ಎಡೆಮಾಡಿಕೊಟ್ಟ ಲಘು ವಿಮಾನ ಹಾರಾಟ

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ನಿಗೂಢವಾಗಿ ಹಾರಾಡಿದ ಲಘು ವಿಮಾನವೊಂದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ....

ಶರಣರ ವಚನಗಳು ಮನುಷ್ಯನ ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಶಕ್ತಿಗಳು

ಚಿಕ್ಕಮಗಳೂರು: ಶರಣರ ವಚನಗಳು ಕೇವಲ ರಚನೆಗಳಲ್ಲ. ಅವು ಮನುಷ್ಯನ ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಶಕ್ತಿಗಳು ಎಂದು ಸಾಣೆಹಳ್ಳಿ...

ಸಮಾಜ ಪರಿವರ್ತನೆಗೆ ಶರಣ ಚಳುವಳಿಯೇ ಪರಿಹಾರ

ಚಿಕ್ಕಮಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ತನ್ನ...