ಚಿಕ್ಕಮಗಳೂರು : ವಿಧಾನ ಪರಿಷತ್ ನಲ್ಲಿ ಸಿ.ಟಿ.ರವಿ v/s ಲಕ್ಷ್ಮೀ ಹೆಬ್ಬಾಳ್ಕರ್ ಕಿತ್ತಾಟದಲ್ಲಿ ಗೆದ್ದವರು ಯಾರು? ಸೋತವರು ಯಾರು ? ಎಂಬ ಚರ್ಚೆ ಶುರುವಾಗಿದೆ. ಹಿರಿಯರು ಹೇಳುವಂತೆ ಮಾತು ಮನೆ ಕೆಡಿಸಿತು ಎಂಬುದು ಮಾತ್ರ ಸತ್ಯ. ರಾಜಕಾರಣದಲ್ಲಿ ಕ್ವಾರೆ, ಲ್ಯಾಂಡ್ ಡೀಲಿಂಗ್ ಬಾರ್ ಕುಳಗಳಾಗವವರು, ಫೈನಾನ್ಸಿಯರ್ ಗಳೇ ಜನಪ್ರತಿನಿಧಿಗಳಾತ್ತಿರೊದ್ರಿಂದ ವ್ಯಾವಹಾರಿಕ ಮಾತುಗಳು ಲೀಲಾಜಾಲವಾಗಿ ಬರುತ್ತಿವೆ .ಪದ ಬಳಕೆಗೆ ಸದನಗಳು ವೇದಿಕೆ ಆಗುತ್ತಿರೊದು ದುರಂತ.
ಸಿ.ಟಿ.ರವಿ ತಳಮಟ್ಟದಿಂದ ಬೆಳೆದು ಕಡಿಮೆ ಅವಧಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪಕ್ಷದ ಪದಾಧಿಕಾರಿ ಆಗಿದ್ದವರು ಬಳಸುವ ಭಾಷೆ ಬಗ್ಗೆ ಬಿಜೆಪಿಗರಿಗೆ ಖುಷಿ ಕೊಡಬಹುದು ಆದರೆ ಇದರಿಂದ ಸಾಮೂಹಿಕವಾಗಿ ಜಾತಿಗಳನ್ನು ಎದರು ಹಾಕಿಕೊಳ್ಳ ಬೇಕಾಗುತ್ತದೆ. ನೆನಪು ಕ್ಷಣಿಕ ನಿಜ ಆದರೆ ಕೆಲವರು ಅದನ್ನು ಕೆರೆದು ಗಾಯ ಮಾಡಿಕೊಳ್ಳುವವರಿದ್ದಾರೆ ಎಂಬ ಅರಿವು ಇಟ್ಟುಕೊಳ್ಳಬೇಕು. ಸತತ ಗೆಲುವಿನ ಹಾದಿಯಲ್ಲಿದ್ದ ಸಿ.ಟಿ.ಆರ್ ಚುನಾವಣೆಗೆ ಮೊದಲು ಮಾತನಾಡಿದ್ದು ಅವರ ಸೋಲಿಗೆ ಕಾರಣವಾಯಿತು.
1)ಸಿದ್ದ್ರಾಮುಲ್ ಖಾನ್
2) ದೇವೇಗೌಡರು ಮುಸ್ಲಿಂ ಜನಾಂಗ ಸೇರಲಿ
3) ಬಿಜೆಪಿ ಟಿಕೆಟ್ ಯಾವುದೇ ಅಡುಗೆಯ ಮನೆಯಲ್ಲಿ ತೀರ್ಮಾನವಾಗಲ್ಲ ಎಂದು ಯಡಿಯೂರಪ್ಪರನ್ನು ಪರೋಕ್ಷವಾಗಿ ಟೀಕಿಸಿದ್ದು
ಈಗ ವೀರಶೈವ ಲಿಂಗಯಿತ ಹೆಣ್ಣು ಮಗಳಿಗೆ ಬಳಸಿದ ಭಾಷೆ ರವಿ ಮತ್ತೆ, ಮತ್ತೆ ರಾಜಕೀಯ ದಂಡ ತೆರಬೇಕಾಗುತ್ತದೆ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಾಗಿಲ್ಲ.
ರವಿ ಘಟನೆಯಿಂದ ಬಿಜೆಪಿ ಒಗ್ಗಟ್ಟು ಪ್ರದರ್ಶನ ಮಾಡಿದೆ ನಿಜ ಇದೇ ಒಗ್ಗಟ್ಟು ಮುಂದೆ ಇರುತ್ತದೆ ಎಂಬುದಕ್ಕೆ ಗ್ಯಾರಂಟಿ ಇದೆಯೇ. ರಾಜಕಾರಣದ ನಿಂತ ನೀರಲ್ಲ ನಿಜ ಆದರೆ ಮತ್ತೆ, ಮತ್ತೆ ಮುಗ್ಗರಿಸಿ ಬೀಳುತ್ತಿದ್ದರೆ ಎದ್ದು ನಿಲ್ಲುವುದು ಕಷ್ಟ. ರವಿ ಇನ್ನೂ ಹಲವು ವರ್ಷಗಳು ಸ್ಥಾನಮಾನದಲ್ಲಿ ಇರಬಹುದು ನಿಜ ಆದರೆ ಪಕ್ಷ ಅಧಿಕಾರಕ್ಕೆ ಬರಲು ಇದೇ ವಿಷಯ ಅಡ್ಡಲಾಗಬಹುದು.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ವೀರಶೈವರು ರವಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ ಅದನ್ನು ಕಳೆದುಕೊಂಡರೆ ಅಚ್ಚರಿ ಇಲ್ಲ. ಈಗಿನ ರಾಜಕಾರಣದಲ್ಲಿ ಯಾವ ಪಕ್ಷದವರು ಇತಿ ಮಿತಿಯಲ್ಲಿ ಇಲ್ಲ. ಎರಡು ದಿನ ಟಿ.ವಿ ಮತ್ತು ಮಾಧ್ಯಮಗಳಲ್ಲಿ ಸುದ್ದಿಯಾಗಿ ಸಾಧಿಸಿದ್ದೇನು ಎಂಬುದನ್ನು ಮನನಮಾಡಿಕೊಳ್ಳಲಿ. ಈ ನಡುವೆ ಪೊಲೀಸರು ರವಿ ಬಂಧನ ಪ್ರಕರಣದಲ್ಲಿ ನಡೆದುಕೊಂಡ ರೀತಿ ಬಗ್ಗೆ ಮಾತ್ರ ವ್ಯಾಪಕ ಟೀಕೆಗಳು ವ್ಯಕವಾಗುತ್ತಿವೆ.
Leave a comment