Home namma chikmagalur ಭಾರತಾಂಭೆಯ ಮೊದಲ ಮಗಳು ಕರುನಾಡ ಭುವನೇಶ್ವರಿ
namma chikmagalurchikamagalurHomeLatest News

ಭಾರತಾಂಭೆಯ ಮೊದಲ ಮಗಳು ಕರುನಾಡ ಭುವನೇಶ್ವರಿ

Share
Share

ಚಿಕ್ಕಮಗಳೂರು: ಭಾರತಾಂಬೆಯ ಮೊದಲ ಮಗಳು ಕರುನಾಡ ಭುವನೇಶ್ವರಿ. ಆ ತಾ ಯಿಯ ಮಡಿಲಿನಲ್ಲಿ ಅಕ್ಕರೆಯಿಂದ ಸೇವೆ ಸಲ್ಲಿಸುತ್ತಿರುವ ಸಾಹಿತ್ಯ ಪರಿಷತ್ತಿನಲ್ಲಿ ಪ್ರತಿ ಹೆಣ್ಣಿಗೂ ಜಯವಾಗ ಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಮಹಿಳಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ಕನ್ನಡದ ಹಬ್ಬ ಅಥವಾ ಜಾತ್ರೆಗಳಲ್ಲಿ ಪಾಲ್ಗೊಳ್ಳಲು ಯಾವುದೇ ಆಹ್ವಾನದ ಅವಶ್ಯಕತೆಯಿಲ್ಲ. ಮುಕ್ತವಾ ಗಿ ಕನ್ನಡತಿಯರು ಪಾಲ್ಗೊಂಡರೆ ಕಾರ್ಯಕ್ರಮಕ್ಕೆ ಕಳೆಬಂದಂತೆ. ತಾವು ಮೂಲತ ಆಂಗ್ಲಭಾಷೆಯಲ್ಲಿ ವಿದ್ಯಾ ಭ್ಯಾಸ ಪೂರೈಸಿದರೂ ಅಪ್ಪಟ ಕನ್ನಡತಿ. ಇದೀಗ ಕಾರ್ಯನಿಮಿತ್ತ ಎಲ್ಲೆ ತೆರಳಿದರೂ ಕನ್ನಡ ಮಗಳೆನ್ನಲು ಬಹಳಷ್ಟು ಆತ್ಮಾಭಿಮಾನವಿದೆ ಎಂದರು.

ಮಹಿಳೆಯ ಸಾಹಿತ್ಯ ಅಥವಾ ಸ್ವಾಭಿಮಾನದ ಹೋರಾಟ ಹಿಂದಿನಿಂದಲೂ ಇದೆ. ಗಂಡನ ಆಜ್ಞೆ ಹಾ ಗೂ ಮಕ್ಕಳ ಪಾಲನೆಯ ಮುಖ್ಯ ಜವಾಬ್ದಾರಿಯೊಂದಿಗೆ ಸಾಹಿತ್ಯ, ಸಂಗೀತ, ದೇಶರಕ್ಷಣೆ ಹಾಗೂ ಸಮಾಜ ದ ವಿವಿಧ ಸ್ಥರಗಳಲ್ಲಿ ತೊಡಗಿಸಿಕೊಂಡು ಕೌಟುಂಬಿಕ ಚಿಂತನೆಗಳ ನಡುವೆಯೂ ಮುಖ್ಯವಾಹಿನಿಯಲ್ಲಿ ಬೆ ಳಕು ತೋರುತ್ತಿರುವಳು ಎಂದರು.

ಮನೆಯ ಸಂಭ್ರಮ, ಊರಿನ ಜಾತ್ರೆ, ಪರಿಷತ್ತಿನ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೆಣ್ಣಿದ್ದರೆ ಅದ ಕ್ಕೊಂದು ಕಳೆಯಿದ್ದಂತೆ. ಭವ್ಯವಾಗಿ ಶೃಂಗಾರಗೊಂಡು ಇಡೀ ಹಬ್ಬದ ಸಂಭ್ರಮವನ್ನು ಮೆರಗು ತುಂಬುವವ ಳು ಹೆಣ್ಣೆಂದರೆ ತಪ್ಪಾಗಲಾರದು. ಈ ಆಡಂಬರ, ಶೃಂಗಾರ ಹಾಗೂ ನವೀನತೆಯ ಸೌಂದರ್ಯ ಮಹಿಳೆಯ ಹೋಲುತ್ತದೆ ಎಂದರು.

ಸಾಹಿತಿ ದೀಪಾ ಹಿರೇಗುತ್ತಿ ಮಾತನಾಡಿ ಮಹಿಳೆಯ ಸೌಂದರ್ಯವನ್ನು ನೋಡಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಲಭಿಸಿಲ್ಲ. ಆಳವಾಗಿ ಅಧ್ಯಯನ ನಡೆಸಿ ರಚಿಸಿದ ಪುಸ್ತಕಗಳಿಗೆ ಪ್ರಶಸ್ತಿ ಬಂದಿದೆ. ಆ ಸಾಲಿನಲ್ಲಿ ಬಾನು ಮುಷ್ತಕ್ ಹಾಗೂ ದೀಪಾಬಾಸ್ತಿ ನಿರಾರ್ಗಳ ಸಾಧನೆಗೆ ಅಂತರಾಷ್ಟ್ರೀಯ ಬುಕರ್ ಪಶಸ್ತಿ ಗಳಿಸಿ ಮಹಿಳೆಯರಿ ಗೆ ಸ್ಪೂರ್ತಿಯಾಗಿದ್ದಾರೆ ಎಂದರು.

ಬದುಕಿನ ಸಂಕಷ್ಟಗಳ ನಡುವೆಯು ಹೆಣ್ಣು ಹೆಣ್ಣೀಗೆ ಸ್ಪಂದಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಮಹಿಳೆ ಸಮಸ್ಯೆಗೆ ಒಳಗಾಗುವುದಿಲ್ಲ. ಆ ನಿಟ್ಟಿನಲ್ಲಿ ಮಹಿಳಾ ಲೋಕ ಹೆಚ್ಚೆಚ್ಚು ಅರಿವು ಮೂಡಿಸಿಕೊ ಳ್ಳುವ ಜೊತೆಗೆ ಪರಸ್ಪರ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.

ಆಧುನಿಕತೆ ಜಗತ್ತಿನಲ್ಲಿ ಕೆಲವರು ಸಂವಿಧಾನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸುವ ಪ್ರವೃತ್ತಿ ಪ್ರಚಲಿತದಲ್ಲಿದೆ. ಆದರೆ ಆ ಸಂವಿಧಾನದಿಂದಲೇ ಭಾರತದಲ್ಲಿ ಮಹಿಳೆಯೊಬ್ಬರು ರಾಷ್ಟ್ರಪತಿ ಹುದ್ದೆ ಸೇರಿದ ಂತೆ ಜನಪ್ರತಿನಿಧಿಗಳಾಗಲು ಸಾಧ್ಯವಾಗಿದೆ ಎಂಬ ಅರಿವು ಟೀಕೆ ಮಾಡುವವರಿಗಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಹೆಚ್. ಕೆ.ವಿಜಯಲಕ್ಷ್ಮೀ ಪ್ರಪ್ರಥಮ ಮಹಿಳಾ ಸಮ್ಮೇಳನ ಸರ್ವರ ಸಹಕಾರದಿಂದ ಅದ್ಬುತವಾಗಿ ಮೂಡಿಬಂದಿದೆ. ಅಲ್ಲದೇ ಯುವಕವಿಯತ್ರಿಯರು, ಬರಹಗಾರ್ತಿಯರಿಗೆ ಪೂರಕವಾಗಿದ್ದು ಈ ಶೈಕ್ಷಣಿಕ ಸಾಲಿನಲ್ಲಿ ಮನಮು ಟ್ಟುವಂತ ಕಾರ್ಯಕ್ರಮ ನಡೆದಿರುವುದು ಹೆಮ್ಮೆ ತಂದಿದೆ ಎಂದರು.

ಇದೇ ವೇಳೆ ಡಾ|| ಮಂಜುಳಾ ಹುಲ್ಲಳ್ಳಿ, ಶ್ರೀಮತಿ ಸತ್ಯವತಿ ಮತ್ತು ಪ್ರತಿಭಾ ನಂದಕುಮಾರ್ ಅವರಿಗೆ ಸಾಹಿತ್ಯಸಿರಿ ಹಾಗೂ ಹನ್ನೇರಡು ಮಂದಿಗೆ ಕನ್ನಡಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಸ್ವಾಗತ ಸಮಿತಿ ಅಧ್ಯಕ್ಷೆ ರೇಖಾ ಹುಲಿಯ ಪ್ಪಗೌಡ, ಹಿರಿಯ ವೈದ್ಯ ಡಾ|| ಜೆ.ಪಿ.ಕೃಷ್ಣೇಗೌಡ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಬಿ.ಪ್ರಕಾಶ್, ಎಸ್‌ಟಿಜೆ ಕಾ ಲೇಜು ಪ್ರಾಂಶಪಾಲೆ ಜೆ.ಕೆ.ಭಾರತಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರೂಪನಾಯ್ಕ್, ಕಸಾಪ ತಾಲ್ಲೂ ಕು ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸುಮಾಪ್ರಸಾದ್ ನಿರೂಪಿಸಿದರು. ಮಾವಿನಕೆರೆ ದಯಾನಂದ್ ಸ್ವಾಗತಿಸಿದರು. ಪ್ರಭು ಮತ್ತು ತಂಡ ನಿರ್ವಹಿಸಿದರು. ಮಹಾಲಕ್ಷ್ಮೀ ನಾಗರಾಜು ವಂದಿಸಿದರು.

Karunada Bhuvaneshwari the first daughter of Bharatambha

Share

Leave a comment

Leave a Reply

Your email address will not be published. Required fields are marked *

Don't Miss

ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು. ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ...

ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಅವರು ಇಂದು ನಗರಸಭೆಯಲ್ಲಿ ಪಕ್ಷದ...

Related Articles

ಗಾಯಾಳಿಗೆ ಚಿಕಿತ್ಸೆ ನಿರಾಕರಿಸಿದರೆ 1 ಲಕ್ಷದವರೆಗೆ ದಂಡ

ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು...

ಜಿಂಕೆ ಮಾಂಸ ವಶ – ಮೂವರು ಆರೋಪಿಗಳ ಬಂಧನ

ನರಸಿಂಹರಾಜಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಆರಂಬಳ್ಳಿ ಅರಣ್ಯ ಪ್ರದೇಶದಲ್ಲಿ ಜಿಂಕೆ ಕೊಂದು...

ಕಾರ್ಪೋರೇಟ್ ಕಂಪನಿಗಳ ಆಸೆಗೆ ರೈತರು ಬಲಿಪಶು

ಚಿಕ್ಕಮಗಳೂರು:  ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ....

ಈದ್‌–ಮಿಲಾದ್ ಅಂಗವಾಗಿ ನಗರದಲ್ಲಿ ಬೃಹತ್‌ ಮೆರವಣಿಗೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ...