ಚಿಕ್ಕಮಗಳೂರು :
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಯಿಂದ ಹಿರೇಮಗಳೂರು ಕಣ್ಣನ್ ಕೈ ಬಿಟ್ಟಿರುವುದಕ್ಕೆ ಬಿಜೆಪಿ ಆಕ್ರೋಶ ಹೊರಹಾಕಿದೆ.
ಕನ್ನಡ ನುಡಿ ಸೇವಕ ಹಿರೇಮಗಳೂರು ಕಣ್ಣನ್ ಗೆ ಅವಮಾನಿಸಲಾಗಿದೆ ಎಂದು ಮಾಜಿ ಕ.ಸಾ.ಪ ಅಧ್ಯಕ್ಷ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ನ್ಯೂಸ್ ಕಿಂಗ್ ವೆಬ್ ಸೈಟ್ ನಲ್ಲಿ ಕಣ್ಣನ್ ರನ್ನು ರಾಜ್ಯ ಸರ್ಕಾರ ನಡೆಸಿಕೊಂಡ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು.
ಈ ಬೆನ್ನಲ್ಲೇ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಪುಟ್ಟಸ್ವಾಮಿ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಕೈ ಬಿಡುವಂತೆ ಸಚಿವರಿಗೆ ಪತ್ರ ಬರೆಯುವ ಮೂಲಕ ಕನ್ನಡ ಪೂಜಾರಿ ಖ್ಯಾತಿಯ ಹಿರೇಮಗಳೂರು ಕಣ್ಣನ್ ರಿಗೆ ಕಾಂಗ್ರೆಸ್ ಎಂಎಲ್.ಸಿ ಮಂಜುನಾಥ ಬಂಡಾರಿ ಪತ್ರ ಬರೆದಿರುವುದನ್ನು ಖಂಡಿಸಿದ್ದು, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಅಥವಾ ಬೆರಾವುದೇ ಸಮಿತಿಗೆ ನೇಮಕ ಮಾಡಿ ಎಂದು ಕೇಳುವ ಅಥವಾ ಪ್ರಭಾವ ಬೀರುವ ವ್ಯಕ್ತಿ ಕಣ್ಣನ್ ಮಾಮ ಅವರ ಜಾಯಮಾನದಲ್ಲೇ ಇಲ್ಲ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿರುವ ಬಿಜೆಪಿ ವಕ್ತಾರ ಪುಟ್ಟಸ್ವಾಮಿ ರಾಜ್ಯ ಸರ್ಕಾರದವರೇ ತಮ್ಮ ತೆವಲಿಗೆ ಆಯ್ಕೆ ಮಾಡಿ ಇದೀಗ ಅವಮಾನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕನ್ನಡ ನಾಡು ನುಡಿ ಸೇವೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿರುವ ಕಣ್ಣನ್ ನಿಜವಾದ ಕನ್ನಡ ನುಡಿ ಸೇವಕ. ಅವರನ್ನು ಸಮಿತಿಯಿಂದ ಕೈ ಬಿಡಬೇಕು ಎಂದು ಕಾಂಗ್ರೆಸ್ ನ ಮಂಜುನಾಥ್ ಭಂಡಾರಿ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಪತ್ರ ಬರೆಯುವ ಮೂಲಕ ಅವಮಾನಿಸಿರುವುದನ್ನು ಕನ್ನಡಿಗರೆಲ್ಲರೂ ಖಂಡಿಸಬೇಕಾಗಿದೆ ಎಂದು ಪುಟ್ಟಸ್ವಾಮಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ .
Leave a comment