ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡ ನುಡಿ,ಸಾಹಿತ್ಯ, ಕನ್ನಡದ ಆಸ್ಮಿತೆಗಾಗಿ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ರಗಳೆ ನೋಡಿದರೆ ಅಧ್ಯಕ್ಷ ಮಹೇಶ್ ಜೋಷಿ ಕಸದ ತೊಟ್ಟಿ ಮಾಡುವಂತೆ ಕಾಣುತ್ತಿದೆ.ಜೋಷಿ ಅಧ್ಯಕ್ಷರಾದಗಿನಿಂದ ದಿನಕ್ಕೊಂದು ರಗಳೆ_ರಂಪಾಟ ನಡೆಯುತ್ತಿವೆ.ಇವರ ವಿರುದ್ಧ ಹಲವು ಸಾಹಿತಿಗಳು ಮತ್ತು ಸಂಘಟಕರು ತಿರುಗಿ ಬಿದ್ದಿದ್ದರಿಂದ ಸಾಹಿತ್ಯ ಪರಿಷತ್ ನ ಘನತೆ,ಗೌರವಕ್ಕೆ ಧಕ್ಕೆಯಾಗುತ್ತಿದೆ.
ಸರ್ಕಾರದ ಹಣದಲ್ಲಿ ಸಮ್ಮೇಳನಗಳು ಜಾತ್ರೆ,ಸಂತೆಯಂತಾಗಿ ಬೇಕಾಬಿಟ್ಟಿಯಾಗಿ ನಡೆಯುತ್ತಿವೆ.ತಮಗೆ ಬೇಕಾದವರಿಗೆ ಕಲರ್,ಕಲರ್ ಪ್ರಶಸ್ತಿಯ ಜೊತೆಗೆ ಹೊಸ,ಹೊಸ ಒಕ್ಕಣೆಯ ಬಿರುದುಗಳನ್ನು ನೀಡಲು ನಡೆಯುತ್ತಿವೆ ಎನ್ನಿಸುತ್ತಿದೆ ಜೊತೆಗೆ ವಸೂಲಿಕೋರರ ಆಡ್ಡ ಆಗಿವೆ ಎಂದು ಹಲವರು ನೊಂದು ನುಡಿಯುತ್ತಿದ್ದಾರೆ.
ಮಹೇಶ್ ಜೋಷಿ ಮೇಲೆ ಇಷ್ಟೊಂದು ಆಕ್ರೋಶ ಏಕೆ ? ಅವರ ನಂಬಿಕಸ್ಥ ಗೌರವ ಕಾರ್ಯದರ್ಶಿಗಳಾದ ಪದ್ಮಾ ಮತ್ತು ನಾಗರಾಜ ಶೆಟ್ಟಿ ರಾಜೀನಾಮೆ ನೀಡಿದ್ದು ಏಕೆ ? ಇದಕ್ಕೆ ಉತ್ತರಿಸುವ ಜವಾಬ್ದಾರಿ ಯಾರದ್ದು ?.
ಮಂಡ್ಯ ಸಮ್ಮೇಳನದ ಕಿತ್ತಾಟ ಖರ್ಚು ವೆಚ್ಚ ನೀಡದಿರುವುದು ಏಕೆ ? ಅಲ್ಲಿಂದ ಶುರುವಾದ ಕಿತ್ತಾಟ ಇಂದು ಬೀದಿಗೆ ಬಂದು ನಿಂತಿದೆ.ಈ ಬಗ್ಗೆ ಮಂಡ್ಯ ಮತ್ತು ಶಿವಮೊಗ್ಗದಲ್ಲಿ ಜೋಷಿ ವಿರುದ್ದ ಪ್ರತಿಭಟನೆ ಸಹ ನಡೆದಿದೆ.
ಬಳ್ಳಾರಿ ಜಿಲ್ಲೆಯ ಸೊಂಡೂರಿನಲ್ಲಿ ಸಾಹಿತ್ಯ ಪರಿಷತ್ತಿನ ಸಾಮಾನ್ಯ ಸಭೆ ನಡೆಸಲು ದಿನಾಂಕ ನಿಗದಿಯಾದ ಮೇಲೆ ಸಹಕಾರ ಇಲಾಖೆ ತಡೆದಿದೆ.ತಾರತುರಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಅಯ್ಕೆ ಮಾಡಲಾಗಿದೆ.ಬೆರಳೆಣಿಕೆಯಷ್ಟು ಜನರಿಗೆ ನಾನು ಬಗ್ಗುವುದಿಲ್ಲ ಎಂದು ಹೇಳಿರುವ ಜೋಷಿ ನಾನು ನಡೆದಿದ್ದೇ ದಾರಿ ಎಂದು ಹುಂಕರಿಸುವುದು ನೋಡಿದರೆ ರಂಪಾಟ ಇನ್ನೂ ಹೆಚ್ಚಾಗುವಂತೆ ಕಾಣುತ್ತಿದೆ.
ಇಷ್ಟೆಲ್ಲಾ ಕಿತ್ತಾಟದ ಮಧ್ಯೆ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುವ ಸಮ್ಮೇಳನ ಯಶಸ್ವಿಯಾಗುತ್ತಾದ ಇಲ್ಲ ಜೋಷಿ ಯಶಸ್ವಿ ಮಾಡುತ್ತಾರಾ. ಜೋಷಿ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಬಾನು ಮುಷ್ತಾಕ್ ಅಯ್ಕೆ ಯಿಂದ ಸರ್ಕಾರ ಮತ್ತು ಬೀದಿಗಿಳಿದಿರುವವರು ಸುಮ್ಮನಾಗಬಹುದು ಎಂಬ ಲೆಕ್ಕಾಚಾರಕ್ಕೆ ಬಂದತೆ ಕಾಣುತ್ತಿದೆ.ಆದರೆ ಇಂತಹ ವಾತಾವರಣದಲ್ಲಿ ಬಾನು ಮುಷ್ತಕ್ ಅಭಿಪ್ರಾಯ ಬಹಳ ಮುಖ್ಯವಾಗುತ್ತದೆ.ಈಗಾಗಲೇ ಮುಷ್ತಾಕ್ ಕೂಡ ಯೋಚಿಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.ಜೋಷಿ ಅಧ್ಯಕ್ಷರಾಗಿ ಸಮ್ಮೇಳನ ನಡೆಸುವುದು ಕಷ್ಟ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಇಂತಹ ವಾತಾವರಣ ಸೃಷ್ಟಿಯಾಗಲು ಜೋಷಿಯ ಸ್ವಯಂ ಕೃಪ ತೀರ್ಮಾನಗಳೇ ಕಾರಣ.ಸಾಹಿತ್ಯ ಪರಿಷತ್ ಇಂತಹ ವಾತಾವರಣದಲ್ಲಿ ಮುಂದುವರೆಯುವುದು ಯಾರಿಗೂ ಒಳ್ಳೆಯದಲ್ಲ ಇದರಲ್ಲಿ ಜೋಷಿಯವರ ಜವಾಬ್ದಾರಿ ಹೆಚ್ಚಿದೆ .
Kannada Sahitya Parishad has been thrown out of the street by Mahesh Joshi.
Leave a comment