Home namma chikmagalur chikamagalur ಕಾಡಾನೆ ಸೆರೆ ಕಾರ್ಯಾಚರಣೆ ಬಂದಿದ್ದ ಜೂನಿಯರ್ ಅರ್ಜುನ ನಾಪತ್ತೆ…?
chikamagalurHomeLatest Newsnamma chikmagalur

ಕಾಡಾನೆ ಸೆರೆ ಕಾರ್ಯಾಚರಣೆ ಬಂದಿದ್ದ ಜೂನಿಯರ್ ಅರ್ಜುನ ನಾಪತ್ತೆ…?

Share
Share

ಚಿಕ್ಕಮಗಳೂರು: ಕಾಫಿನಾಡಿನ ಹುಣಸೇಹಳ್ಳಿ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಆತಂಕಕಾರಿ ಘಟನೆಯೊಂದು ನಡೆದಿದ್ದು, ಕಾರ್ಯಾಚರಣೆಗೆ ಬಂದಿದ್ದ ಸಾಕಾನೆಯೇ ನಾಪತ್ತೆಯಾಗಿ ಅಧಿಕಾರಿಗಳನ್ನು ಹೈರಾಣಾಗಿಸಿದೆ.

ಐದು ದಿನಗಳ ಹಿಂದೆ ಕಾರ್ಮಿಕನೊಬ್ಬನನ್ನು ತುಳಿದು ಸಾಯಿಸಿದ್ದ ಮದವೇರಿದ ಕಾಡಾನೆಯನ್ನು ಸೆರೆಹಿಡಿಯಲು ಕಳೆದ ಎರಡು ದಿನಗಳಿಂದ ಹುಣಸೇಹಳ್ಳಿ ಅರಣ್ಯ ಪ್ರದೇಶದಲ್ಲಿ ಏಳು ಕುಮ್ಮಿ ಆನೆಗಳ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು.

ಇಂದು ಜೂನಿಯರ್ ಅರ್ಜುನ ಆನೆಯ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿ ಕಾಡಾನೆಗಾಗಿ ಹುಡುಕಾಟ ನಡೆಸುತ್ತಿದ್ದಾಗ, ಮದವೇರಿದ್ದ ಕಾಡಾನೆಯು ಏಕಾಏಕಿ ದಾಳಿಗೆ ಮುಂದಾಗಿದೆ. ಈ ಕಾದಾಟದ ಸಂದರ್ಭದಲ್ಲಿ ಜೂನಿಯರ್ ಅರ್ಜುನ ಆನೆಯು ದಿಕ್ಕಾಪಾಲಾಗಿ ಓಡಿ ಕಾಡಿನೊಳಗೆ ನಾಪತ್ತೆಯಾಗಿತ್ತು.

ಒಂದೆಡೆ ಮದವೇರಿದ ಕಾಡಾನೆಯ ಭೀತಿ, ಮತ್ತೊಂದೆಡೆ ಕಾರ್ಯಾಚರಣೆಯ ಪ್ರಮುಖ ಆನೆಯೇ ನಾಪತ್ತೆಯಾದ ಕಾರಣ ಅರಣ್ಯಾಧಿಕಾರಿಗಳು ಮತ್ತು ಇಟಿಎಫ್‌ ಸಿಬ್ಬಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಸುಮಾರು ಒಂದು ಗಂಟೆಯ ಕಾಲ ಅರಣ್ಯದಾದ್ಯಂತ ತೀವ್ರ ಹುಡುಕಾಟ ನಡೆಸಿದ ನಂತರ ಕೊನೆಗೂ ಜೂನಿಯರ್ ಅರ್ಜುನ ಪತ್ತೆಯಾಗಿದ್ದು, ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಆನೆಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಕಟ್ಟಿ ಹಾಕಲಾಗಿದ್ದು, ಕಾಡಾನೆಯ ಉಗ್ರ ರೂಪದಿಂದಾಗಿ ಸದ್ಯಕ್ಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಸಿಬ್ಬಂದಿಗಳು ವಾಪಸ್ ಬಂದಿದ್ದಾರೆ. ಕಾಡಾನೆ ಮದವೇರಿರುವುದರಿಂದ ಕಾರ್ಯಾಚರಣೆ ಸದ್ಯಕ್ಕೆ ಸವಾಲಾಗಿ ಪರಿಣಮಿಸಿದೆ.

Junior Arjuna who had come to capture the forest is missing…?

Share

Leave a comment

Leave a Reply

Your email address will not be published. Required fields are marked *

Don't Miss

ನಗರಸಭೆಯಿಂದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್ ಗೆ ಬೀಗ

ನಗರಸಭೆ ನಿಗದಿಪಡಿಸಿದ ಗಾಡಿಗೆ ಕಸ ನೀಡದೆ ಚರಂಡಿಗೆ ಹಾಕುತ್ತಿದ್ದ ನಗರದ ಬೆನಕ ಬಾರ್ ಆಂಡ್ ರೆಸ್ಟೋರೆಂಟ್ ಮಳಿಗೆ ಬಾಗಿಲಿಗೆ ನಗರಸಭೆ ಅಧಿಕಾರಿ, ಸಿಬ್ಬಂದಿ ಕಸ ತಂದು ಸುರಿದು ದಂಡ ಹಾಕಿದ್ದಾರೆ. ಅಲ್ಲದೆ,...

ಮೂರು ಲಕ್ಷ ರೂ. ಮೌಲ್ಯದ ಗಾಂಜಾ ವಶ

ಚಿಕ್ಕಮಗಳೂರು, ಎನ್ ಡಿಪಿಎಸ್ ಪ್ರಕರಣದಲ್ಲಿ ಆರೋಪಿತನೋರ್ವನನ್ನು ಬಂಧಿಸಿರುವ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಆತನಿಂದ ಮೂರು ಲಕ್ಷ ರೂ. ಮೌಲ್ಯದ 5ಕೆಜಿ 850 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಎನ್ ಡಿಪಿಎಸ್...

Related Articles

ಎಂ.ಎಲ್.ಸಿ ಪ್ರಾಣೇಶ್ ಗೆ ಪ್ರಾಣ ಸಂಕಟ.! – ಗಾಯತ್ರಿ ಶಾಂತೇಗೌಡಗೆ ಅಧಿಕಾರ ಗ್ಯಾರಂಟಿನಾ ?

ಚಿಕ್ಕಮಗಳೂರು: ಚಿಕ್ಕ ಮಗಳೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್...

ಪರಿಶಿಷ್ಠ ಪಂಗಡ ಒಳ ಮೀಸಲಾತಿ ಆಯೋಗ ರಚನೆ ಆಗ್ರಹ

ಚಿಕ್ಕಮಗಳೂರು: ರಾಜ್ಯದ ಪರಿಶಿಷ್ಠ ಜಾತಿ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಿದಂತೆ ಪರಿಶಿಷ್ಠ ಪಂಗಡದ ಸಮುದಾಯಕ್ಕೂ ಒಳ ಮೀಸಲಾತಿ ಕಲ್ಪಿಸಲು...

ವಿಮಾ ಕಂಪನಿಗೆ ಪಾಲಿಸಿದಾರರ ಕಂತು ಸ್ವೀಕೃತಿಗೆ ಆದೇಶ

ಚಿಕ್ಕಮಗಳೂರು: ವಿಮಾ ಕಂತು ಪಾವತಿಯನ್ನು ಸ್ವೀಕರಿಸದೆ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಇನ್ಶೂರೆನ್ಸ್ ಕಂಪನಿಯ ವಿರುದ್ಧ...

ಸರ್ವಜ್ಞರ ತ್ರಿಪದಿಗಳು ಸಮಾಜದ ಅಂಕುಡೊಂಕು ತಿದ್ದುವ ಚಿಕಿತ್ಸಕ ಶಕ್ತಿಗಳು

ಚಿಕ್ಕಮಗಳೂರು: ಕನ್ನಡದ ಮಹಾನ್ ಸಂತ, ಕವಿ ಮತ್ತು ದಾರ್ಶನಿಕ ಸರ್ವಜ್ಞರ ತ್ರಿಪದಿಗಳು ಕೇವಲ ಸಾಹಿತ್ಯವಲ್ಲ, ಅವು...