ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಜಲ ಜೀವನ್ ಮಷಿನ್ ಕಾಮಗಾರಿ ಅಡಿಯಲ್ಲಿ ಗ್ರಾಮೀಣ ಪ್ರದೇಶದ ಮನೆ ಮನೆಗಳಿಗೆ ನೀರು ಒದಗಿಸಲು ಸಂಗ್ರಹಿಸಿಟ್ಟಿದ್ದ 25 ಲಕ್ಷ ಮೌಲ್ಯದ ನೀರಾವರಿ ಯೋಜನೆ ಪೈಪ್ ಗಳು ಸುಟ್ಟು ಕರಕಲಾಗಿವೆ.
ಸುಮಾರು 25 ಲಕ್ಷ ಮೌಲ್ಯದ ಕುಡಿಯೋ ನೀರಿನ ಯೋಜನೆಗೆಂದು ತಂದು ಹಾಕಿದ್ದ ನೀರಿನ ಪೈಪ್ ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಬರೋಬ್ಬರಿ 25 ಲಕ್ಷ ಮೌಲ್ಯದ ನೀರಿನ ಪೈಪ್ ಗಳು ಸಂಗ್ರಹಿಸಿಟ್ಟಿದ್ದ ಜಾಗದಲ್ಲೇ ಸುಟ್ಟು ಕರಕಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತ್ರಿಪುರ ಎಂಬ ಗ್ರಾಮದ ಕುಡಿಯೋ ನೀರಿನ ಯೋಜನೆಗೆಂದು ಪ್ರಧಾನ ಮಂತ್ರಿ ಕುಡಿಯುವ ನೀರಿನ ಸಂಪರ್ಕ ಯೋಜನೆಯಡಿ ಪೈಪ್ ಗಳನ್ನ ತಂದು ಹಾಕಿದ್ದರು. ನವೆಂಬರ್ 4ರ ಸೋಮವಾರದಿಂದ ಕೆಲಸ ಕೂಡ ಆರಂಭವಾಗಬೇಕಿತ್ತು. ಆದರೆ ಇಂದು ಕಿಡಿಗೇಡಿಗಳು ಪೈಪ್ ಗಳಿಗೆ ಬೆಂಕಿ ಹಚ್ಚಿದ ಪರಿಣಾಮ 25 ಲಕ್ಷ ಮೌಲ್ಯದ ಪೈಪ್ ಗಳು ಬೆಂಕಿಯಲ್ಲಿ ಬೆಂದು ಹೋಗಿವೆ. ಯೋಜನೆಯ ಗುತ್ತಿಗೆ ಪಡೆದಿದ್ದ ಹರೀಶ್ ಎಂಬ ಗುತ್ತಿಗೆದಾರ ಪೈಪ್ ಗಳನ್ನ ತಂದು ಹಾಕಿದ್ದರು. ಇದೀಗ ಗುತ್ತಿಗೆದಾರ ಕೆಲಸ ಆರಂಭ ಮಾಡಬೇಕು. ಆದರೆ ಲಕ್ಷಾಂತರ ಮೌಲ್ಯದ ಪೈಪ್ ಗಳು ಸುಟ್ಟು ಹೋಗಿದ್ದು ಹರೀಶ್ ಕಣ್ಣೀರಿಟ್ಟಿದ್ದಾರೆ. ಸ್ಥಳಕ್ಕೆ ಬಣಕಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರೇಣುಕಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a comment