ಚಿಕ್ಕಮಗಳೂರು: ಜೆಡಿಎಸ್ ಪಕ್ಷದಿಂದ ಧರ್ಮಸ್ಥಳಕ್ಕೆ ನೂರಾರು ಕಾರ್ಯಕರ್ತರು ಭಾನುವಾರ ನಗರದಿಂದ ಸತ್ಯಯಾತ್ರೆ ಆರಂಭಿಸಿದರು.
ಕಡೂರು, ತರೀಕರೆ ಹಾಗೂ ಚಿಕ್ಕಮಗಳೂರು ತಾಲೂಕಿನಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಕೇಸರಿ ಶಲ್ಯ ಧರಿಸಿ ನಗದ ಜೆಡಿಎಸ್ ಕಚೇರಿ ಮುಂದೆ ಸಮಾವೇಶಗೊಂಡು ಅಲ್ಲಿಂದ ಯಾತ್ರೆ ಆರಂಭಿಸಿದರು.
ಯಾತ್ರೆಗೂ ಮುನ್ನ ಜೆಡಿಎಸ್ ಮುಖಂಡ, ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ನಮ್ಮೆಲ್ಲರ ಆರಾಧ್ಯ ದೈವ ಶ್ರೀಮಂಜುನಾಥ, ಶ್ರೀಅಣ್ಣಪ್ಪಸ್ವಾಮಿ ಹಾಗೂ ಅಲ್ಲಿನ ಖಾವಂದರ ಬಗ್ಗೆ ಅಪಾರ ನಂಬಿಕೆ ಇದೆ. ಖಾವಂದರು ಸಮಾಜ ಸೇವೆಯಲ್ಲಿ ತಮ್ಮನ್ನುತಾವು ತೊಡಗಿಸಿಕೊಂಡು ಸರಕಾರ ಮಾಡದ ಕೆಲಸವನ್ನು ಮಾಡುತ್ತಿದ್ದಾರೆ.
ಅವರನ್ನು ದೈವ ಸ್ವರೂಪದಲ್ಲಿ ನಾವು ನೋಡುತ್ತಿದ್ದೇವೆ. ಇಂತಹವರಿಗೆ , ಧರ್ಮಸ್ಥಳಕ್ಕೆ ಅಪಚಾರ ನಡೆಯುತ್ತಿರುವುದನ್ನುನಾವು ಸಹಿಸುವುದಿಲ್ಲ. ಈ ಸಂದರ್ಭ ಆಖವಂದರ ಮತ್ತು ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಅವರಿಗೆ ನೈತಿಕ ಬೆಂಬಲ ನೀಡುವ ಉದ್ದೇಶದಿಂದ ಧರ್ಮಸ್ಥಳಕ್ಕೆ ಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ನಗರಸಭೆ ಸದಸ್ಯ ಎ.ಸಿ.ಕುಮಾರೇಗೌಡ ಮಾತನಾಡಿ, ಚಿಕ್ಕಮಗಳೂರಿನಿಂದ ಧರ್ಮಸ್ಥಳಕ್ಕೆ ಧರ್ಮಯಾತ್ರೆ ಹೊರಟಿದ್ದೇವೆ. ಅಲ್ಲಿ ಆಗಿರುವ ವಿಚಾರಗಳಿಗೆ ನ್ಯಾಯ ದೊರೆಯುವ ಸಮಯ ಸನ್ನಿಹಿತವಾಗುತ್ತಿದೆ. ಧರ್ಮಸ್ಥಳಕ್ಕೆ ಚ್ಯುತಿ ಬರುವ ಕೆಲಸ ಆಗಬಾರದು. ಹೀಗಾಗಿ ನೂರಾರು ಮಂದಿ ಇಂದು ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದ್ದೇವೆ ಎಂದರು.
ನಗರಸಭೆ ಅಧ್ಯಕ್ಷೆ ಶೀಲಾದಿನೇಶ್, ಸದಸ್ಯ ದಿನೇಶ್, ಮುಖಂಡರಾದ ನಿತೇಶ್ ಬೋಜೇಗೌಡ, ಸೋನಾಲ್‌ಧರ್ಮೇಗೌಡ, , ಸಿ.ಕೆ ಮೂರ್ತಿ, ಆನಂದನಾಯ್ಕ, ಶಿವಾನಂದ , ಚೇತನ್, ಮಂಜು ಮತ್ತಿತರರಿದ್ದರು.
JDS party’s Satya Yatra to Dharmasthala
Leave a comment