ಕಡೂರು: ಬಹಳಷ್ಟು ವರ್ಷದಿಂದ ನೆನಗುದಿಗೆ ಬಿದ್ದಿದ್ದ ಹಿಂದಿನ ಎಲ್ಲ ರಾಜಕಾರಣಿಗಳು ಮರೆತಿದ್ದ ಹಳ್ಳಿಗಾಡಿನ ಪ್ರದೇಶದ ಅಭಿವೃದ್ಧಿಯನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ತೃಪ್ತಿ ತಮಗಿದೆ ಎಂದು ಶಾಸಕ ಕೆ.ಎಸ್. ಆನಂದ್ ಹ? ವ್ಯಕ್ತಪಡಿಸಿದರು.
ಕಡೂರಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕೆಆರ್‌ಐಡಿಎಲ್‌ನ ನೂತನ ಕಛೇರಿಯ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ, ಸುಂದರವಾದ ಕಟ್ಟಡ ನಿರ್ಮಾಣ ಈ ಸಂಸ್ಥೆ ಮಾಡಿದೆ ಎಂದು ಶ್ಲಾಘಿಸಿದರು.
ಕೆಆರ್‌ಐಡಿಎಲ್ ಸಂಸ್ಥೆಗೆ ಜಾಗ ನೀಡುವಲ್ಲಿ ಇದ್ದ ಸಮಸ್ಯೆಯನ್ನು ಪರಿಹರಿಸಿ ಈ ಜಾಗ ನೀಡಿದ ಕಡೂರುಹಳ್ಳಿ ಗ್ರಾಮ ಪಂಚಾಯಿತಿಯ ಮತ್ತು ಸುತ್ತಮುತ್ತಲಿನ ಗ್ರಾಮದವರಿಗೆ ಅಭಿನಂದನೆ ಸಲ್ಲಿಸಿದರು.
ಕೆಆರ್‌ಐಡಿಎಲ್ ಸಂಸ್ಥೆ ಸುಮಾರು ೫೦ ಕೋಟಿ ರೂ.ಗಳ ಕಾಮಗಾರಿ ನಡೆಸಿದೆ. ೬ ಕೋಟಿ ಮುಜರಾಯಿ ಇಲಾಖೆಗೆ, ೬ ಕೋಟಿ ಸಮುದಾಯ ಭವನ ನಿರ್ಮಾಣಕ್ಕೆ, ೧೨ ಕೋಟಿ ಗ್ರಾಮೀಣ ರಸ್ತೆಯ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ, ರೈತ ಸಂಪರ್ಕ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಇದಲ್ಲದೆ ಜಯರಾಮ ರಮೇಶ್ ಮತ್ತು ಶ್ರೇಯಸ್ ಪಟೇಲ್ ಅವರ ವಿಶೇ? ಅನುದಾನದಿಂದ ಹಲವಾರು ವಿಶೇ? ಕಾಮಗಾರಿ ಮಾಡಲಾಗಿದೆ. ಕೆಆರ್‌ಐಡಿಎಲ್ ಸಂಸ್ಥೆ ತಮಗೆ ನೀಡಿರುವ ೨೨೦ ಕ್ಕೂ ಹೆಚ್ಚಿನ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ರಾಜಿಮಾಡಿಕೊಳ್ಳದೆ ಮಾಡಿದೆ ಎಂದರು.
ಹಿಂದಿನ ಜನಪ್ರತಿನಿಧಿಗಳು, ಸರ್ಕಾರ ಮಾಡಲಾಗದ ಕೆಲಸವನ್ನು ತಾವು ತಮ್ಮ ಸರ್ಕಾರ ಮಾಡುತ್ತಿದೆ ಎಂಬ ಹೆಮ್ಮ ತಮ್ಮದು ಎಂದ ಅವರು, ನಗದಿಯಾತ್ ಕಾವಲಿನ ಕೈಗಾರಿಕಾ ಪ್ರದೇಶದಲ್ಲಿ ಮುಂದಿನ ಮೂರು ವ?ಗಳಲ್ಲಿ ಕನಿ? ಐದು ಸಾವಿರ ಜನರಿಗೆ ಕೆಲಸ ಸಿಗಲಿದೆ, ಕ್ಷೇತ್ರದ ನೀರಿನ ಬವಣೆ ನೀಗಿಸುವ ಸಲುವಾಗಿ ಭದ್ರ ಉಪಕಣಿವೆ ಮೂರನೇ ಹಂತದ ಕಾಮಗಾರಿಯ ಕಾರ್ಯ ಭರದಿಂದ ಸಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ತಾವು ಮತ್ತು ತಮ್ಮಯ್ಯ ಅವರು ಜತೆಗೂಡಿ ಕೆಲಸ ಮಾಡುವ ಭರವಸೆ ನೀಡಿದರು.
ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ತಮ್ಮ ರಾಜಕೀಯ ಅವಧಿಯಲ್ಲಿ ಉದ್ಘಾಟಿಸಿದ ಅತ್ಯಂತ ಸುಸಜ್ಜಿತ ಮತ್ತು ಉತ್ತಮ ಗುಣಮಟ್ಟದ ಕಛೇರಿ ಇದಾಗಿದೆ. ನಿಮ್ಮ ಇಲಾಖೆಯಿಂದ ನಿರ್ಮಾಣ ಮಾಡುವ ಇತರ ಕಟ್ಟಡ, ರಸ್ತೆಯ ಕಾಮಗಾರಿಯನ್ನೂ ಇದೇ ರೀತಿ ಮಾಡುವ ಭರವಸೆ ಇದೆ. ಸರ್ಕಾರದ ಕೆಲಸ ದೇವರ ಕೆಲಸ ಎನ್ನುವುದನ್ನು ನಿಜವಾಗಿಸಲು ಶಾಸಕಾಂಗದೊಂದಿಗೆ ಕಾರ್ಯಾಂಗ ಸಹಕರಿಸಬೇಕು ಎಂದರು.
ಜಿಲ್ಲೆಗೆ ಎರಡು ಜವಳಿ ಪಾರ್ಕ್ ತರುವಲ್ಲಿ ತಾವು ಮತ್ತು ಆನಂದ್ ಯಶಸ್ವಿ ಆಗಿದ್ದೇವೆ, ಭದ್ರಾ ಉಪಕಣಿವೆ ಯೋಜನೆಯ ಉಳಿದ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ರೈತರ ಜಮೀನಿಗೆ ನೀರು ಸಿಗಲಿದೆ. ತಾವು ಮತ್ತು ಆನಂದ್ ಅವರು ಒಟ್ಟಾಗಿ ಎರಡೂ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುವುದಾಗಿ ಹೇಳಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸುವುದರೊಂದಿಗೆ ಹೊಸ ಕಾಮಗಾರಿಗಳನ್ನೂ ಮಾಡುತ್ತಾ ಐದು ಗ್ಯಾರಂಟಿಗಳನ್ನು ನೀಡಿ ಉತ್ತಮ ಕಾರ್ಯ ಮಾಡುತ್ತಿರುವ ಸರ್ಕಾರದ ಭಾಗವಾಗಿರುವುದು ನಮ್ಮ ಹೆಮ್ಮೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಗೀತಾ ಶಿವಕುಮಾರ್, ಕಡೂರು ತಹಸಿಲ್ದಾರ್ ಪೂರ್ಣಿಮಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಕೆಆರ್‌ಐಡಿಎಲ್ ಮುಖ್ಯ ಇಂಜಿನಿಯರ್ ಗೋಪಾಲ್, ಕಾರ್ಯಪಾಲಕ ಅಭಿಯಂತ ಅಶ್ವಿನಿ, ತಂಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಕೆಆರ್‌ಐಡಿಯಲ್ ಅಭಿಯಂತರ ವಿನಯ್, ಮುರುಳಿ ಹಾಗೂ ಕಡೂರಳ್ಳಿ ತಂಗಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು ಮತ್ತು ಗುತ್ತಿಗೆದಾರರಾದ ಗಿರೀಶ್ ಮತ್ತು ಸಾರ್ವಜನಿಕರು ಇದ್ದರು.
Inauguration of KRIDL’s new office
Leave a comment