Home Political News ಯಾರನ್ನು ತೆಗೆದು ಸಿ.ಎಂ ಮಾಡ್ತೀರ : ಸತೀಶ್ ಜಾರಕಿಹೊಳಿ ಪ್ರಶ್ನೆ
Political NewsState News

ಯಾರನ್ನು ತೆಗೆದು ಸಿ.ಎಂ ಮಾಡ್ತೀರ : ಸತೀಶ್ ಜಾರಕಿಹೊಳಿ ಪ್ರಶ್ನೆ

Share
Share

ಚಿಕ್ಕಮಗಳೂರು :

ರಾಜ್ಯದಲ್ಲಿ ದಲಿತ ಸಿಎಂ ಚರ್ಚೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವೇದಿಕೆ ಮೇಲೆ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಘೋಷಣೆ ಕೂಡ ಕೂಗಿದ್ದಾರೆ. ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ.‌ ಆದರೆ, ಆದರೆ, ಅದೇ ಸತೀಶ್ ಜಾರಕಿಹೊಳಿಯಾರನ್ನ ತೆಗೆದು ದಲಿತ ಸಿಎಂ ಮಾಡ್ತೀರಾ ಹೇಳಿ. ನೀವೇ ಹೇಳಿಯಾರನ್ನ ತೆಗೆದು ಯಾರನ್ನ ಸಿಎಂ ಮಾಡ್ಬೇಕು ಹೇಳಿ ಎಂದು ಮಾಧ್ಯಮವನ್ನೇ ಪ್ರಶ್ನಿಸಿದ್ದಾರೆ. ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಯಾರನ್ನ ತೆಗೆಯೋದು ಹೇಳಿ, ತೆಗೆದ ಮೇಲೆ ಹೇಳ್ತೀನಿ ಯಾರನ್ನ ಮಾಡೋದು ಅಂತ ಮಾಧ್ಯಮದ ಪ್ರಶ್ನೆಗೆ ಮರುಪ್ರಶ್ನೆ ಹಾಕಿದ್ದಾರೆ. ದಸರಾ ಮುಗಿದ ಮೇಲೆ ಸಿಎಂ ಬದಲಾವಣೆ ಎಂಬ ವದಂತಿಗೆ ಮಾಡೋರು ಯಾರು. ನಿಮಗೆ ಹೇಳಿದ್ದು ಯಾರು ಪ್ರಶ್ನಿಸಿದ್ದಾರೆ. ‌ಇನ್ನು, ಮೈಸೂರಿನಲ್ಲಿ ಅಹಿಂದ ನಾಯಕರ ಸಭೆ ಸಂಬಂಧ ದಸರಾ ಉತ್ಸವಕ್ಕೆ ಹೋಗೀರ್ತಿವಿ. ಅಲ್ಲಿ ಸಹಜವಾಗಿ ಎಲ್ಲರೂ ಸೇರುತ್ತಾರೆ. ಅದಕ್ಕೆ ವಿಶೇಷ ಅರ್ಥಬೇಡ ಎಂದು ಸಮಾಜಾಹಿಷಿ ನೀಡಿದ್ದಾರೆ.ಬೆಂಗಳೂರಿನಲ್ಲಿ ಇಂದು ಆಯೋಜನೆಗೊಂಡಿರೋ ಶಾಸಕರ ಸಭೆ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ ಎಂದ ಅವರು, ಸರ್ಕಾರ ಬೀಳುತ್ತೆ ಎಂಬ ಚರ್ಚೆಗೆ ಸರ್ಕಾರ ರಚನೆಯಾದ 6 ತಿಂಗಳಿಂದಲೂ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿದ್ದಾರೆ. 18 ತಿಂಗಳಿಂದ ಸರ್ಕಾರ ಬೀಳ್ತಾನೆ ಇದೆ ವಿಪಕ್ಷಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ. ಸರ್ಕಾರ ಬೀಳಲ್ಲ. ಐದು ವರ್ಷ ಗಟ್ಟಿ ಇರ್ತೀವಿ ಎಂದು ವಿಪಕ್ಷಗಳಿಗೆ ತಿವಿದಿದ್ದಾರೆ.ಜಾತಿ ಜನಗಣತಿ ಕ್ಯಾಬಿನೆಟ್ ಗೆ ಬರಬೇಕು, ಅಲ್ಲಿ ಚರ್ಚೆ ಆಗಬೇಕು ಅದರಲ್ಲಿ ಏನಿದ್ಯೋ ಏನೋ ಗೊತ್ತಿಲ್ಲ. ಚರ್ಚೆಯಾಗಲಿ ಆಮೇಲೆ ನೊಡೋಣ ಎಂದಿದ್ದಾರೆ. ಮುಡಾ ಹಗರಣ ಹರಿಯಾಣ-ಕಾಶ್ಮೀರದ ಫಲಿತಾಂಶದ ಮೇಲೆ ಪರಿಣಾಮ ಚರ್ಚೆಗೆ ಪ್ರತಿಕ್ರಿಯೇ ನೀಡಿದ ಅವರು, ಎಲ್ಲಿಯಾ ಮುಡಾ, ಎಲ್ಲಿಯಾ ಜಾರಕಿಹೊಳಿ, ಎಲ್ಲಿಯಾ ಕೋಳಿವಾಡ. ಮುಡಾ ಹರಿಯಾಣದಲ್ಲಿ ಯಾವ ಪರಿಣಾಮ ಬೀರುತ್ತೆ. ಅಲ್ಲಿಯಾ ಜನರಿಗೆ ಕನ್ನಡವೂ ಬರಲ್ಲ.‌ ಮುಡಾ ನಮ್ಮ ರಾಜ್ಯಕ್ಕೆ ಸೀಮಿತವಾದ ವಿಚಾರ. ಇಡೀ ದೇಶಕ್ಕೆ ಸಂಬಂಧಪಟ್ಟ ವಿಚಾರ ಅಲ್ಲ ಎಂದಿದ್ದಾರೆ. ಆದರೆ, ಇಷ್ಟೊಂದು ಚರ್ಚೆ-ವಾದ-ವಿವಾದದ ಮಧ್ಯೆಯೂ ಏನೂ ಆಗಿಲ್ಲ ಎಂದು ಎಲ್ಲದನ್ನೂ ಬ್ಯಾಲೆನ್ಸ್ ಮಾಡ್ತಿರೋ ಜಾರಕಿಹೊಳಿಯವರು ಕಾಂಗ್ರೆಸ್ ಪಡಸಾಲೆಯ ಗುಟ್ಟನ್ನ ಬಿಟ್ಟುಕೊಡದಂತೆ ಕಾಪಾಡುತ್ತಿದ್ದಾರೆಂಬ ಅನುಮಾನ ಬಲವಾಗಿದೆ…

Share

Leave a comment

Leave a Reply

Your email address will not be published. Required fields are marked *

Don't Miss

ಜಿಲ್ಲೆಯಲ್ಲಿ ಮಳೆಯ ಆರ್ಭಟ – ಕಾಫಿಬೆಳೆ ನಾಶ – ರಸ್ತೆ ಹುಡುಕಾಡುವ ಕಾಟ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡ ಬಿಡದೆ ಮಳೆ ಸುರಿಯುತ್ತಿದೆ ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಮಳೆಯ ಆರ್ಭಟದಿಂದ ಕಾಫಿ ಕೊಳೆಯಲು ಆರಂಭವಾಗಿದೆ ಎಂದು ಕಾಫಿ ಬೆಳೆಗಾರರ...

12ನೇ ಶತಮಾನದಲ್ಲೇ ಕನ್ನಡಕ್ಕೆ ವಚನಾಕಾರಿಂದ ಬಹಳ ದೊಡ್ಡ ಕೊಡುಗೆ

ಚಿಕ್ಕಮಗಳೂರು: ವಚನಾಕಾರರು ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆಯನ್ನು ೧೨ನೇ ಶತಮಾನದಲ್ಲೇ ನೀಡಿದ್ದಾರೆ. ಜಗಜ್ಯೋತಿ ಬಸವಣ್ಣನವರು ಕೊಟ್ಟ ಸಾಂಸ್ಕೃತಿಕ ಚಳುವಳಿ ಬದುಕಿನ ಅನುಭವಗಳು ಅನುಭಾವವಾಗಿ ಜನರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಇಡೀ ಜಗತ್ತಿಗೆ ನೈತಿಕ...

Related Articles

127 K.G ಚಿನ್ನದ ಕಳ್ಳಿ ರನ್ಯಾರಾವ್ ಗೆ 102 ಕೋಟಿ ದಂಡ

ಚಿಕ್ಕಮಗಳೂರು: ಚಿಕ್ಕಮಗಳೂರು ಮೂಲದ ಚಿತ್ರನಟಿ ರನ್ಯಾ ರಾವ್ ವಿದೇಶದಿಂದ 127ಕೆ,ಜಿ,ಚಿನ್ನ ಕದ್ದು ತಂದು ಕಂದಾಯ ಗುಪ್ತಚರ...

ಮಾರುಕಟ್ಟೆಯಲ್ಲಿ ಟೊಮೆಟೊ ಧಾರಣೆ ದಿಢೀರ್‌ ಕುಸಿತ

ಬೆಂಗಳೂರು: ಮಳೆ, ಮೋಡ ಕವಿದ ವಾತಾವರಣ ಮತ್ತು ರೋಗಬಾಧೆಯಿಂದ ಗುಣಮಟ್ಟ ಕಳೆದು ಕೊಳ್ಳುತ್ತಿರುವ ಟೊಮೆಟೊ ಧಾರಣೆ...

ಕೇಂದ್ರ ಸರ್ಕಾರದ ಅನುದಾನ ಹಾಗೂ ತೆರಿಗೆ ಪಾಲು ಕುರಿತು ನಮ್ಮ ಸರ್ಕಾರ ‘ಶ್ವೇತಪತ್ರ’ ಪತ್ರ

ವಿಧಾನಸಭೆ:  ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಹಾಗೂ ತೆರಿಗೆ ಪಾಲು...

ಮಟ್ಟು ಔಟ್- ಶಿವಕುಮಾರ್ ಇನ್- ಆರತಿ ಸ್ಟ್ರಾಂಗ್- ಜಕ್ಕಣ್ಣ ಒಕೆ

ಬೆಂಗಳೂರು: ವಿಧಾನ ಪರಿಷತ್ ಗೆ ನಾಲ್ವರನ್ನು ನೇಮಕ ಮಾಡಿ ಎರಡು ತಿಂಗಳ ಹಿಂದೆ ರಾಜ್ಯಪಾಲರ ಬಳಿ...