ಚಿಕ್ಕಮಗಳೂರು: ಅಜ್ಜಂಪುರ ಪಟ್ಟಣ ಪಂಚಾಯತಿಗೆ ಬರಬೇಕಾದ 15 ನೇ ಹಣಕಾಸು ಆಯೋಗದ ಅನುದಾನಕ್ಕೆ ಬರೆ ಬಿದ್ದಿದೆ.
ರಾಜ್ಯದ 43 ನಗರಾಡಳಿತದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೆ ಜನಪ್ರತಿನಿಧಿಗಳು ಇಲ್ಲದೆ ಇರುವ ಕಾರಣದಿಂದ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಸೂಚನೆ ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಅಜ್ಜಂಪುರ ಗ್ರಾಮ ಪಂಚಾಯಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಿ 7 ವರ್ಷಗಳಾಗಿದೆ .
ಪಟ್ಟಣ ಪಂಚಾಯತಿಯ ವಾರ್ಡಗಳ ವಿಂಗಡನೆ ಮಾಡುವಾಗ ನಿಯಮ ಮೀರಿ ಕೇವಲ 11 ವಾರ್ಡಗಳನ್ನಾಗಿಸಿದ್ದನ್ನು ಪ್ರಶ್ನೆ ಮಾಡಿದ್ದನ್ನು ಮಾಜಿ ಗ್ರಾಮ ಪಂಚಾಯತಿ ಸದಸ್ಯ ಎಸ್.ಶಿವಾನಂದ ಕೋರ್ಟ್ ಗೆ ಹೋಗಿದ್ದು ಪ್ರಸ್ತುತ ಹದಿನೈದು ಸಾವಿರ ಮತದಾರರಿದ್ದು ಪರಿಷ್ಕರಿಸಬೇಕಾಗಿದೆ.ಇದರಿಂದಾಗಿ ಅನುದಾನಕ್ಕೂ ಕೊಕ್ಕೆ ಬಿದ್ದಿದೆ.
ಜನಪ್ರತಿನಿಧಿಗಳು ಇಲ್ಲದಿರುವುದರಿಂದ 15ನೇ ಹಣಕಾಸು ಆಯೋಗ ಯಾವುದೇ ಕಾಮಗಾರಿ ಮಾಡದಂತೆ ಸೂಚನೆ ನೀಡಿದೆ.
Hook for Ajjampura Town Panchayat grant
Leave a comment