ಚಿಕ್ಕಮಗಳೂರು :
ರಾಜ್ಯೋತ್ಸವ ಆಯ್ಕೆ ಸಮಿತಿ ವಿಷಯ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯಗೆ ಇರುಸು ಮುರಿಸಿಗೆ ಒಳಗಾಗಿದ್ದಾರೆ ಏಕೆಂದರೆ ಕಣ್ಣನ್ ಊರು ತಮ್ಮಯ್ಯರವರ ಊರುಒಂದೇ ಆಗಿರುವುದು ಮತ್ತು ಕಣ್ಣನ್ ಆತ್ಮೀಯವಲಯದಲ್ಲಿರುವುದರಿಂದ ನುಂಗಲು ಆಗದೆ ಉಗಳಲು ಆಗದಂತ ಪರಿಸ್ಥಿತಿಗೆ ಒಳಗಾಗಿದ್ದಾರೆ.
ರಾಜೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲು ಸರ್ಕಾರ ಸಮಿತಿಯನ್ನು ರಚಿಸಿದ್ದು ಕನ್ನಡ ಪೂಜಾರಿ ಎಂದು ಹೆಸರಾಗಿರುವ ಹಿರೇಮಗಳೂರು ಕಣ್ಣನ್ ರವರನ್ನು ನೇಮಕ ಮಾಡಲಾಗಿತ್ತು ಇದನ್ನು ವಿರೋಧಿಸಿ ಚಿಕ್ಕಮಗಳೂರು ಕಾಂಗ್ರೆಸ್ನ ಹಲವರು ಆಪಸ್ವರ ತೆಗಿದಿದ್ದರು.ವಿಧಾನಪರಿಷತ್ ನ ಸದಸ್ಯರಾದ ಮಂಜುನಾಥ್ ಭಂಡಾರಿ ಸರ್ಕಾರಕ್ಕೆ ಪತ್ರ ಬರೆದಿರುವುದರಿಂದ ಕಣ್ಣನ್ ರವರನ್ನು ಸಮಿತಿಯಿಂದ ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಕಣ್ಣನ್ ಬಿಜೆಪಿ ಪಕ್ಷಕ್ಕೆ ಬಲು ಹತ್ತಿರ ಅವರ ಸಿದ್ದಾಂತಕ್ಕೆ ಹೆಚ್ಚು ಒತ್ತು ಕೊಡುತ್ತಾರೆ ಎನ್ನಲಾಗಿದೆ ಆದರೆ ಸರ್ಕಾರ ನಡೆಸುವವರು ಇಂತ ಸೂಕ್ಷ್ಮ ವಿಷಯದ ಬಗ್ಗೆ ಮಾಹಿತಿ ಇಲ್ಲದೆ ನೇಮಕಮಾಡಿ ಮತ್ತೆ ತೆಗೆದು ಹಾಕುವುದು ಎಷ್ಟರಮಟ್ಟಿಗೆ ಸರಿ.ಕಣ್ಣನ್ ಲಾಭಿಮಾಡಿ ಆಯ್ಕೆ ಸಮಿತಿಗೆ ಸೇರಿದರಾ ಎನ್ನುವವರು ಇದ್ದಾರೆ.
ದೇವಾಲಯಕ್ಕೆ ಬರುವ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ನಗೆಪಟಲಿಗೆ ಈಡಾಗಿರುವುದು ಮಾತ್ರ ಸತ್ಯ.
ಕಣ್ಣನ್ ಆಯ್ಕೆ ಸಮಿತಿಯಲ್ಲಿ ಇದ್ದಿದ್ದರೆ ನಗುವಶ್ರೀಗಾದರು ಪ್ರಶಸ್ತಿ ಸಿಗುತ್ತಿತ್ತು ಎಂದು ಕುಟುಕವರ ಮಧ್ಯೆ ನಮ್ಮ “ಮಾಮ” ಗೆ ಮಾಡಿದ ಕಾಂಗ್ರೆಸ್ ನವರಿಗೆ ಕೋದಂಡರಾಮಾಚಂದ್ರ ಸ್ವಾಮಿ ಕಾಟಕೋಡುವುದು ಗ್ಯಾರಂಟಿ ಎನ್ನುತ್ತಿದ್ದಾರೆ.
Leave a comment