ಚಿಕ್ಕಮಗಳೂರು : ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಸಿ.ಟಿ ರವಿ ಮನೆಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ತೆರಳುವ ವೇಳೆ ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಭಾರೀ ಹೈ ಡ್ರಾಮವೇ ನಡೆದಿದೆ. ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಘಟನೆ ತಲುಪಿದ್ದು ಕೆಆರ್ ಎಸ್ ಆಸ್ಪತ್ರೆ ಬಳಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ನಗರಸಭೆ ಪ್ರತಿಪಕ್ಷ ನಾಯಕ ಮುನೀರ್ ಅಹ್ಮದ್ ಗೆ ಕಾಲಿನಿಂದ ಒದ್ದು ಹಲ್ಲೆಗೆ ಯತ್ನಿಸಿದ್ದಾರೆ.
ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತೆ ಬಸವನಹಳ್ಳಿ ಮುಖ್ಯ ರಸ್ತೆಯ ಅರಳಿಮರದಿಂದ ಬಳಿಯಿಂದ ಸಿ.ಟಿ ರವಿ ಮನೆಯತ್ತ ಘೋಷಣೆ ಕೂಗುತ್ತಾ ತೆರಳುತ್ತಾರೆ ಈ ವೇಳೆ ಉಮೇಶ್ ಕ್ಯಾಂಟೀನ್ ಬಳಿ ಪರಸ್ಪರ ಎದುರಾಗಿ ಎರಡೂ ಕಡೆಯವರು ಘೋಷಣೆ ಕೂಗುತ್ತಾರೆ. ಪೊಲೀಸರು ಕಾರ್ಯಕರ್ತರನ್ನು ತಡೆಯಲು ತೀವ್ರ ಹರಸಾಹಸ ಪಡುತ್ತಾರೆ.
ಕೊನೆಗೆ ಕಾಂಗ್ರೆಸ್ ಕಾರ್ಯಕರ್ತರನ್ನ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ, ಸ್ಥಳಕ್ಕೆ ಆಗಮಿಸಿದ ಎಸ್ಪಿ ವಿಕ್ರಮ್ ಅಮಟೆ ಎರಡೂ ಪಕ್ಷಗಳ ಮುಖಂಡನ್ನು ಸಮಾಧಾನ ಪಡಿಸುತ್ತಾರೆ, ನಂತರ ಸಿ.ಟಿ ರವಿ ಮನೆ ಬಳಿ ಗಂಟೆಗಳ ಕಾಲ ಮೊಕ್ಕಾಂ ಹೂಡುತ್ತಾರೆ. ಸದ್ಯ ರವಿ ನಿವಾಸಕ್ಕೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಈ ನಡುವೆ ನಗರದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಪಹರೆ ಹಾಕಲಾಗಿದೆ. ಕೆಎಸ್ಆರ್ ಪಿ ತುಕುಡಿಯನ್ನು ನಿಯೋಜಿಸಲಾಗಿದೆ ಮತ್ತೆ ಪರ ವಿರೋಧ ಪ್ರತಿಭಟನೆ ಗಳು ನಡೆಯುವ ಸಾಧ್ಯತೆ ಇರುವ ಇದ್ದು ಹದ್ದಿನ ಕಣ್ಣನ್ನು ಪೊಲೀಸರು ಇಟ್ಟಿದ್ದು ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
Leave a comment