ಚಿಕ್ಕಮಗಳೂರು :
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನರಸಿಂಹರಾಜ ಪುರ ತಾಲೂಕಿನ ಬನ್ನೂರು ಸಮೀಪ ಜಕ್ಕಣಕ್ಕಿ ಗ್ರಾಮದಲ್ಲಿ ಹಳ್ಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಧರೆ ಕುಸಿತ ಉಂಟಾಗಿದೆ. ಇದರಿಂದ ಜಕ್ಕಣಕ್ಕಿ ಗ್ರಾಮವನ್ನು ಸಂಪರ್ಕಿಸುವ ರಸ್ತೆ ಬಂದ್ ಆಗುವ ಸಾಧ್ಯತೆ ಇದ್ದು ಮನೆ ಎಸ್ಟೇಟ್ ಗಳಿಗೆ ದಾರಿ ಇಲ್ಲದಂತಾಗುವ ಭೀತಿ ಎದುರಾಗಿದೆ.
- ವಾಯುಭಾರ ಕುಸಿತದಿಂದ ಕಳೆದ ನಾಲ್ಕೈದು ದಿನಗಳಿಂದ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿ ಧರೆ ಕುಸಿತವಾಗಿದೆ. ಎನ್.ಆರ್.ಪುರ ತಾಲೂಕಿನ ಬನ್ನೂರು ಸಮೀಪದ ಜಕ್ಕಣಕ್ಕಿ ಗ್ರಾಮದಲ್ಲಿ ಘಟನೆ ನಡೆದಿದ್ದು,
ಹಳ್ಳದಲ್ಲಿ ನಿರಂತರ ನೀರು ಹರಿದು ಹಳ್ಳದ ಪಕ್ಕ ಭಾರೀ ಪ್ರಮಾಣದಲ್ಲಿ ಧರೆ ಕುಸಿತ ಉಂಟಾಗಿದೆ. ಜಕ್ಕಣಕ್ಕಿ ಗ್ರಾಮಕ್ಕೆ ಇರುವ ರಸ್ತೆ ಸಂಪರ್ಕ ಕಟ್ ಆಗುವ ಸಾಧ್ಯತೆ ಇದ್ದು
ಸಮೀಪದ ಸೇತುವೆ ಕಟ್ ಆದರೆ 15 ಮನೆಗಳು 3 ಎಸ್ಟೇಟ್ ಗಳು ಕಾರ್ಮಿಕರ ಲೈನ್ ಮನೆಗಳಿಗೆ ದಾರಿ ಇಲ್ಲದಂತಾಗುತ್ತದೆ. ಎರಡ್ಮೂರು ವರ್ಷಗಳಿಂದ ನಿರಂತರವಾಗಿ ಕುಸಿಯುತ್ತಿರುವ ಭೂಮಿಯಿಂದಾಗಿ ಭೀತಿ ಎದುರಾಗಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ನೋ ಯೂಸ್ ಎಂಬಂತಾಗಿದೆ. ಅಧಿಕಾರಿಗಳು ಬಂದು ನೋಡುತ್ತಾರೆ ಹೊರತು ಯಾವುದೇ ಕ್ರಮ ಕೈಗೊಳ್ಳಲ್ಲ ಎಂಬ ಮಾತುಗಳು ಕೇಳಿಬಂದಿದ್ದು, ಅಧಿಕಾರಿಗಳ ವಿರುದ್ಧ ಹಳ್ಳಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave a comment