ಚಿಕ್ಕಮಗಳೂರು :
ಜಿಲ್ಲೆಯಲ್ಲಿ ಮಳೆಯ ಅವಾಂತರಗಳು ಹೆಚ್ಚುತ್ತಿವೆ. ಅದರಲ್ಲೂ ವಾಹನ ಅಪಘಾತಗಳು ತೀವ್ರವಾಗುತ್ತಿದ್ದು ಮೂಡಿಗೆರೆ ತಾಲೂಕಿನಲ್ಲಿ ಎರಡು ಪ್ರತ್ಯೇಕ ಆಕ್ಸಿಡೆಂಟ್ ಗಳಲ್ಲಿ 13 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಡಿಗೆರೆ ತಾಲೂಕಿನಲ್ಲಿ ಇಂದು ಎರಡು ಅಪಘಾತಗಳು ಸಂಭವಿಸಿವೆ. ಒಂದೆಡೆ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಒಂದು ಪಲ್ಟಿ ಹೊಡೆದಿದ್ದು, ಜೀಪಿನಲ್ಲಿದ್ದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಬಣಕಲ್ ಸಮೀಪದ ಕೋಗಿಲೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಜೀಪ್ ನಲ್ಲಿದ್ದವರು ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದು. ಮತ್ತೊಂದೆಡೆ
ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಟಿ.ಟಿ ವಾಹನ ಪಲ್ಟಿ ಆಗಿದೆ. ಮಳೆ ಹಿನ್ನೆಲೆಯಲ್ಲಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ ಪಲ್ಟಿಯಾಗಿದೆ. ಈ ಘಟನೆ ಮೂಡಿಗೆರೆ ತಾಲೂಕಿನ ಸಂಪಿಗೆಖಾನ್ ಬಳಿ ನಡೆದಿದ್ದು
ಬೆಂಗಳೂರಿನಿಂದ ಹೊರನಾಡಿಗೆ ಬಂದಿದ್ದ ಟಿಟಿ ವಾಹನ
ಅನ್ನಪೂರ್ಣೇಶ್ವರಿ ದರ್ಶನ ಮುಗಿಸಿ ವಾಪಸ್ ಹೊರಟಾಗ ಅವಘಡ ಸಂಭವಿಸಿವೆ. ಟಿ.ಟಿಯಲ್ಲಿದ್ದ 15 ಜನ ಪ್ರಯಾಣಿಕರಲ್ಲಿ 9 ಜನರಿಗೆ ಗಾಯಗಳಾಗಿದ್ದು ಕಳಸ ಮೂಡಿಗೆರೆ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಮಳೆ ಹಾಗೂ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Leave a comment