ಚಿಕ್ಕಮಗಳೂರು: ಆರೋಗ್ಯವನ್ನು ಪ್ರತಿಯೊಬ್ಬ ಮನುಷ್ಯನ ಜೋಪಾನದಿಂದ ಕಾಪಾಡಿ ಕೊಳ್ಳಬೇಕು. ದೈನಂದಿನ ಕಾಯಕದ ಜೊತೆಗೆ ಶರೀರದ ಏರುಪೇರನ್ನು ನಿಯಂತ್ರಿಸಲು ತಪಾಸಣೆಗೆ ಒಳಗಾ ಗುವುದು ಅತಿಮುಖ್ಯ ಎಂದು ಎಂಪಿಎಂಸಿ ಮಾರ್ಕೆಟ್ ತರಕಾರಿ ವರ್ತಕರ ಸಂಘದ ಅಧ್ಯಕ್ಷ ಎಂ.ಎಸ್. ನಾಗರಾಜ್ ಹೇಳಿದರು.
ನಗರದ ಎಂಪಿಎಂಸಿ ಆವರಣದಲ್ಲಿ ಮಂಗಳವಾರ ಚಿಕ್ಕಮಗಳೂರು ಎಪಿಎಂಸಿ ಮಾರ್ಕೆಟ್ ತರಕಾ ರಿ ವರ್ತಕರ ಸಂಘ ಹಾಗೂ ಜೀವಿತಾ ಫೌಂಡೇಷನ್ ವತಿಯಿಂದ ಹಮಾಲಿ ಕಾರ್ಮಿಕರಿಗೆ ಆಯೋಜಿಸಿದ್ಧ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಮಾಲಿ ವೃತ್ತಿಬಾಂಧವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸಂಬಂಧ ಉಚಿತ ತಪಾಸಣೆ ನಡೆಸ ಲಾಗುತ್ತಿದೆ. ಪ್ರತಿನಿತ್ಯವು ಕೆಲಸಕ್ಕೆ ಮಾತ್ರ ಸೀಮಿತರಾಗದೇ, ದೇಹದ ಸ್ಥಿತಿಗತಿ ನಿಯಂತ್ರಣಕ್ಕೆ ತಪಾಸಣೆ ಮಾ ಡಿಸಬೇಕು. ದಿಡೀರನೇ ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಎಚ್ಚೆತ್ತುಕೊಂಡು ಆರಂಭದಲ್ಲೇ ಮುಂಜಾಗ್ರತೆ ವಹಿಸಬೇಕು ಎಂದರು.
ಪ್ರಸ್ತುತ ಹಮಾಲಿ ಕಾರ್ಮಿಕರು ಸೂರ್ಯದಯದ ಮುನ್ನವೇ ತರಕಾರಿ ವ್ಯಾಪಾರದಲ್ಲಿ ತೊಡಗಿಸಿಕೊ ಳ್ಳುತ್ತಾರೆ. ವಿವಿಧ ತಾಲ್ಲೂಕು, ಜಿಲ್ಲೆಗಳಿಂದ ತರಕಾರಿ ಸಾಗಿಸುವುದೇ ದೈನಂದಿನ ಕಾಯಕ. ಈ ನಡುವೆ ಸ್ವಲ್ಪ ಸಮಯ ಆರೋಗ್ಯದ ಕಡೆ ಚಿಂತಿಸಬೇಕು. ಮನೆ ಯಜಮಾನನ್ನು ನಂಬಿ ಕುಟುಂಬವೇ ಜೀವಿಸುತ್ತಿದ್ದು ಇದ ಕ್ಕೆ ಪೂರಕವಾಗಿ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಹೇಳಿದರು.
ಎಂಪಿಎಂಸಿ ಮಾರ್ಕೆಟ್ನಲ್ಲಿ ನೂರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಕೆಲಸದ ಹೊತ್ತಿನಲ್ಲೇ ಆ ರೋಗ್ಯದ ಕಡೆ ಗಮನಹರಿಸುತ್ತಿಲ್ಲ. ಹೀಗಾಗಿ ಎಂಪಿಎಂಸಿ ಆವರಣದಲ್ಲೇ ತಪಾಸಣೆ ಕೇಂದ್ರ ತೆರೆದು ಸ್ಥಳೀ ಯವಾಗಿ ಬಿಪಿ, ಮಧುಮೇಹ, ಇಸಿಜಿ ಸೇರಿದಂತೆ ಇನ್ನಿತರೆ ತಪಾಸಣೆಯನ್ನು ಉಚಿತವಾಗಿ ಆಯೋಜಿಸಿ ಸಂಘವು ಸಹಕರಿಸುತ್ತಿದೆ ಎಂದರು.
ಜೀವಿತಾ ಪೌಂಡೇಷನ್ ಅಧ್ಯಕ್ಷ ಪ್ರಕಾಶ್ ಮಾತನಾಡಿ ಸಂಸ್ಥೆ ಈಗಾಗಲೇ ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರಿನಲ್ಲಿ ಅನೇಕ ಸಾಮಾಜಿಕ ಕಾರ್ಯ ಕೈಗೊಂಡಿದೆ. ವಿಶೇಷವಾಗಿ ಪೌರ ಕಾರ್ಮಿಕರು, ಹಿರಿಯ ರು ಮತ್ತು ವಿಕಲಚೇತನರಿಗೆ ಶಿಬಿರ ಆಯೋಜಿಸುವುದೇ ಮೂಲ ಉದ್ದೇಶವಾಗಿದೆ ಎಂದರು.
ವಯೋವೃದ್ದರಿಗೆ ಸಂಸ್ಥೆ ಕಡೆಯಿಂದ ಊಟದ ವ್ಯವಸ್ಥೆ, ಆರೋಗ್ಯ ತಪಾಸಣೆ, ಹಿರಿಯರ ಸೇವೆ ಮತ್ತು ವೀಲ್ಚೇರ್ ವ್ಯವಸ್ಥೆ ಮಾಡಲಾಗಿದೆ. ಇದೀಗ ಹಮಾಲಿ ಕಾರ್ಮಿಕರಿಗೆ ಶಿಬಿರ ನಡೆಸಲಾಗಿದ್ದು ಕೆಲಸದ ಜಂ ಜಾಟದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಪಿಎಂಸಿ ಆವರಣದಲ್ಲೇ ತಪಾಸಣೆ ನಡೆಸಲಾಗುತ್ತಿದೆ ಎಂ ದರು.
ಕಾರ್ಮಿಕ ಇಲಾಖೆ ಆಯುಕ್ತ ಪ್ರಭಾಕರ್ ಮಾತನಾಡಿ ಕೇಂದ್ರ ಹಾಗೂ ರಾಜ್ಯಸರ್ಕಾರ ಕಾರ್ಮಿಕರಿಗೆ ಅನೇಕ ಸವಲತ್ತನ್ನು ಒದಗಿಸುತ್ತಿದೆ. ಮದುವೆ, ಹೆರಿಗೆ ಭತ್ಯೆ, ತುರ್ತು ಅನಾಹುತ ಸಂಭವಿಸಿದ್ದಲ್ಲಿ ಸಹಾಯ ಧನ ಕಲ್ಪಿಸಲಾಗಿದೆ. ಈ ಸೌಕರ್ಯ ಪಡೆದುಕೊಳ್ಳಲು ಮೊದಲು ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿ ಕೊಂಡು ಸರ್ಕಾರದ ಸವಲತ್ತು ಪಡೆದುಕೊಳ್ಳಬೇಕು ಎಂದರು.
ಇದೇ ವೇಳೆ ತಪಾಸಣೆಯಲ್ಲಿ ೧೪೦ ಮಂದಿ ಭಾಗವಹಿಸಿ ಸದುಪಯೋಗಪಡಿಸಿಕೊಂಡರು. ಕಾರ್ಯ ಕ್ರಮದಲ್ಲಿ ಎಪಿಎಂಸಿ ಮಾಜಿ ಸದಸ್ಯ ಭದ್ರೇಗೌಡ, ವರ್ತಕರ ಸಂಘದ ಕಾರ್ಯದರ್ಶಿ ಪ್ರವೀಣ್, ಉಪಾಧ್ಯಕ್ಷ ರಾದ ಡಿ.ಟಿ.ಹರೀಶ್, ಟಿ.ಎಸ್.ರಘು, ವೈದ್ಯರಾದ ಡಾ|| ಋದ್ವಿಕ್, ಡಾ|| ಸಹನಾ ಉಪಸ್ಥಿತರಿದ್ದರು.
Health check-up camp for porter workers at MPMC premises
Leave a comment