ಚಿಕ್ಕಮಗಳೂರು: :- ಸಮಾಜದಲ್ಲಿನ ಶೋಷಿತರು, ರೈತರು, ದಲಿತರ ಮೂಲಹಕ್ಕಿಗಾಗಿ ವೈ ಯಕ್ತಿಕ ಜೀವನವನ್ನು ಜನಸಾಮಾನ್ಯರ ಏಳಿಗೆಗೆ ಮೀಸಲಿಟ್ಟು ಚಳುವಳಿ ರೂಪಿಸಿದ ಅಪರೂಪದ ಜನನಾ ಯಕ ರಾಜೇಂದ್ರರವರು ಎಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷ, ರೈತ ಸಂಘ, ಕನ್ನಡಪರ ಸಂ ಘಟನೆಗಳು ಹಾಗೂ ಪ್ರಗತಿಪರ ಮುಖಂಡರು ಆಯೋಜಿಸಿದ್ದ ಹೆಚ್.ಟಿ.ರಾಜೇಂದ್ರ ಅವರ ‘ಬದುಕಿನ ಒಂ ದು ನೆನಪು’ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಯಾವುದೇ ವರ್ಗದ ಜನರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಕಂಡುಬಂದಲ್ಲಿ ನೇರವಾಗಿ ಖಂಡಿಸುವ ವ್ಯಕ್ತಿತ್ವದ ರೂಪ ಅವರಲ್ಲಿತ್ತು. ವೈಯಕ್ತಿಕ ಜೀವನದಲ್ಲಿ ಅನೇಕ ಸಮಸ್ಯೆಗಳಿದ್ದರೂ ಕೂಡಾ ಜನರ ನೋವು, ನಲಿವುಗಳಿಗೆ ಸ್ಪಂದಿಸುವ ಅಗಾಧವಾದ ಗುಣವನ್ನು ಹೊಂದಿದ್ದರು ಎಂದರು.
ಅಪ್ಪಟ ಜಾತ್ಯಾತೀತ ನಿಲುವುಗಳನ್ನು ರಾಜೇಂದ್ರರವರು ಹೊಂದಿದ್ದರು. ಎಲ್ಲಾ ರಾಜಕೀಯ ಪಕ್ಷದವರು ಒಮ್ಮತದಿಂದ ಒಪ್ಪುವ ಅಪರೂಪದ ರಾಜಕಾರಣಿ ಎಂದರೆ ತಪ್ಪಾಗುವುದಿಲ್ಲ. ಇವರು ಬಡವರ ಕಲ್ಯಾಣಕ್ಕಾಗಿ ರೂಪಿಸಿದ ಚಳುವಳಿಗಳಿಂದಾಗಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಹೇಳಿ ದರು.
ಶೃಂಗೇರಿಯಲ್ಲಿ ವಿಶಿಷ್ಟತೆಯಿಂದ ರಾಜಕಾರಣ ಮಾಡಿ ರಾಜೇಂದ್ರರು ಮನೆ ಮಾತಾಗಿ ದ್ದರು. ಅಂದಿನ ಗೋವಿಂದೇಗೌಡರು ಶಾಸಕರಾಗಿ, ಸಚಿವರಾಗಲು ಬಹಳಷ್ಟು ತ್ಯಾಗ, ಕೊಡುಗೆ ಅವರದು. ಜೀವನದುದ್ದಕ್ಕೂ ಜಾತ್ಯಾತೀತ ನಿಲುವು ಹಾಗೂ ಹೆಚ್.ಡಿ.ದೇವೇಗೌಡರ ಆಪ್ತರಾಗಿದ್ದ ಅವರು ಬೇರೆ ಯಾವುದೇ ಪಕ್ಷಕ್ಕೆ ತೆರಳ ದೇ ಜೆಡಿಎಸ್‌ನಿಂದಲೇ ಮುನ್ನೆಡೆದವರು ಎಂದರು.
ರಾಜೇಂದ್ರರವರು ಬೇಧಾವಿ ರಾಜಕಾರಣಿಯಾಗಿ ಬಂದವರು. ಅವರ ಕಾರ್ಯವೈಖರಿ, ವಿಚಾರಧಾರೆ, ಶೋಷಿತರ ಪರವಾದ ಅಪಾರ ಕಾಳಜಿಗಳಿಂದಲೇ ನಾವುಗಳು ನೆನೆಯುತ್ತಿದ್ದೇವೆ. ಅನ್ಯಾಯ ಕಂಡಲ್ಲಿ ಎದೆ ಗುಂದದೇ ನ್ಯಾಯ ಪರವಾದ ಹೋರಾಟಕ್ಕಾಗಿ ಸೆರೆವಾಸವನ್ನು ಅನುಭವಿಸಿದ ಮರೆಯದ ಮಾಣಿಕ್ಯ ಎಂ ದು ತಿಳಿಸಿದರು.
ಕಾಲಕ್ರಮೇಣ ರಾಜಕೀಯ ಕ್ಷೇತ್ರದಲ್ಲಿ ಬಿ.ಕೆ.ಸುಂದರೇಶ್ ಮತ್ತು ಎಂ.ಡಿ.ಗಂಗಯ್ಯ ಕಾಲಘಟ್ಟದಲ್ಲಿ ಹೆ ಜ್ಜೆ ಹಾಕಿ ಪರ್ವದ ದಿನಗಳನ್ನು ರಾಜೇಂದ್ರವರು ಕಂಡಿದ್ದರು. ನಂತರ ಜಿ.ಪಂ. ಸದಸ್ಯ, ಸ್ಥಾಯಿಸಮಿತಿ ಅಧ್ಯ ಕ್ಷರು ಸೇರಿದಂತೆ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದು ಪಕ್ಷದ ಯಾವುದೇ ಕೆಲಸದಲ್ಲಿ ಲಾಭಕ್ಕಾಗಿ ಆಸೆಪ ಡದೇ ಜನರ ಮೂಲಹಕ್ಕಿಗಾಗಿ ಸೇವೆ ಸಲ್ಲಿಸಿದ ಜನನಾಯಕರು ಎಂದರು.
ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ ಜೆಡಿಎಸ್ ಪಕ್ಷದಲ್ಲಿದ್ದರೂ ಜನಾನುರಾ ಗಿಯಾಗಿ ಬದುಕಿದವರು ರಾಜೇಂದ್ರರವರು. ವ್ಯಕ್ತಿಯ ಸಿದ್ಧಾಂತದಿಂದ ಯಾವುದೇ ಪಕ್ಷದ ಮುಖಂಡರು ಗಳು ಅಜಾತಶೃತುವನ್ನು ಪಾಲಿಸುತ್ತಿದ್ದು ಆ ಸಾಲಿನಲ್ಲಿ ರಾಜೇಂದ್ರರವರು ಸರ್ವಶ್ರೇಷ್ಟರು ಎನ್ನುಲು ಸಂದೇ ಹವಿಲ್ಲ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಸ್ಪರ್ಧೆ ಹಾಗೂ ಅಧಿಕಾರ ದಾ ಸೆಗೆ ಜನ್ಮದಿನದ ಕಟೌಟ್‌ಗಳು ಎಲ್ಲೆಡೆ ರಾರಾಜಿಸುತ್ತಿದ್ದಾರೆ. ಅಧಿಕಾರ ಕ್ಷೀಣಿಸಿದರೆ ಯಾವುದು ಇರುವುದಿಲ್ಲ. ಹೀಗಾಗಿ ಮೊದಲು ಜನ್ಮಕೊಟ್ಟ ಪಾಲಕರಿಗೆ ಶುಭಾಶಯವನ್ನು ತಿಳಿಸಬೇಕು ಎಂದು ಸಲಹೆ ಮಾಡಿದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ರಾಜೇಂದ್ರ ವ್ಯಕ್ತಿತ್ವವನ್ನು ದೂರ ದಿಂದ ಗಮನಿಸಿದ ಅನುಭವಿದೆ. ಆದರೂ ಸರಳ, ಸಜ್ಜನಿಕೆಯ ಜೀವನಶೈಲಿ ರೂಪಿಸಿಕೊಂಡವರು. ಡಾ|| ಬಿ.ಆರ್.ಅಂಬೇಡ್ಕರ್ ಸಿದ್ಧಾಂತಕ್ಕೆ ನ್ಯಾಯಬದ್ಧವಾಗಿ ನಡೆದುಕೊಂಡು ಬಡವರ ಕಲ್ಯಾಣಕ್ಕೆ ದುಡಿದಿರುವ ನಾ ಯಕರು ಎಂದು ಹೇಳಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ ಶೃಂಗೇರಿಯ ಮಲೆನಾಡು ಭಾಗದಲ್ಲಿ ರಾಜಕಾರ ಣ ಆರಂಭಿಸಿದ ರಾಜೇಂದ್ರರವರು ನಿರಂತರ ಹೋರಾಟದ ಮುಖೇನಾ ಅನ್ಯಾಯಕ್ಕೆ ಒಳಗಾದ ಜನರಿಗೆ ಹ ತ್ತಿರವಾಗಿದ್ದರು. ಇಂದಿನ ಆಧುನಿಕ ಜಗತ್ತಿನಲ್ಲಿ ರಾಜಕೀಯ ನಾಯಕರು ಇವರ ಬದುಕಿನ ಹೋರಾಟಗಳ ನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕಿದೆ ಎಂದರು.
ರೈತ ಸಂಘದ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ ಸರ್ವ ಪಕ್ಷಗಳ ಮುಖಂಡರುಗಳು ಒಪ್ಪುವ ಬುದ್ದಿ ಜೀವಿ, ರೈತಪರ ಹೋರಾಟಗಾರ ಹಾಗೂ ಸಮಾಜದ ಹಿತಚಿಂತನೆಯ ವ್ಯಕ್ತಿತ್ವ ಹೊಂದಿರುವ ಅಜಾತಶೃತು ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ರೇಖಾ ಹುಲಿಯಪ್ಪಗೌಡ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಹೆಚ್.ಎಸ್.ಮಂಜಪ್ಪ, ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್, ಜೆಡಿ ಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಸಿಪಿಐ ಜಿಲ್ಲಾ ಘಟಕದ ರಾಧಾಸುಂದ್ರೇಶ್, ಮುಖಂಡರುಗಳಾದ ಎನ್.ಡಿ.ಮಂಜುನಾಥ್, ಹುಣಸೇಮಕ್ಕಿ ಲಕ್ಷ್ಮಣ್, ರಾಮಚಂದ್ರ, ಎಂ.ಡಿ.ರಮೇಶ್, ಸುನೀಲ್, ಹೆಚ್.ಎನ್. ಕೃಷ್ಣೇಗೌಡ, ಸಂತೋಷ್ ಲಕ್ಯಾ ಮತ್ತಿತರರಿದ್ದರು.
H.T. Rajendra dedicated his life to the welfare of the common man.
Leave a comment