Home ಅಗಲಿದ ಸಮಾಜವಾದಿ ಚಿಂತಕ ಎಚ್.ಟಿ.ರಾಜೇಂದ್ರ ಅಂತ್ಯ ಸಂಸ್ಕಾರ
HomechikamagalurLatest Newsnamma chikmagalur

ಅಗಲಿದ ಸಮಾಜವಾದಿ ಚಿಂತಕ ಎಚ್.ಟಿ.ರಾಜೇಂದ್ರ ಅಂತ್ಯ ಸಂಸ್ಕಾರ

Share
Share

ನರಸಿಂಹರಾಜಪುರ: ತಾಲ್ಲೂಕಿನ ಪ್ರಗತಿಪರ, ಸಮಾಜವಾದಿ ಚಿಂತಕ ಎಚ್.ಟಿ.ರಾಜೇಂದ್ರ (70) ಅವರ ಅಂತ್ಯ ಸಂಸ್ಕಾರ ಸೋಮವಾರ ಸಂಜೆ  ತೋಟದಲ್ಲಿ ನಡೆಯಿತು.

ಪ್ರಸ್ತುತ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಜೆಡಿಎಸ್ ರಾಜ್ಯಘಟಕದ ಉಪಾಧ್ಯಕ್ಷರೂ ಆಗಿದ್ದ ಎಚ್.ಟಿ.ರಾಜೇಂದ್ರ ಅವರು ಭಾನುವಾರ ರಾತ್ರಿ ತಾಲ್ಲೂಕಿನ ಮಡಬೂರು ಗ್ರಾಮದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಇದ್ದಾರೆ. ಮಡಬೂರಿನಿಂದ ಎಚ್.ಟಿ.ರಾಜೇಂದ್ರ ಅವರ ಪಾರ್ಥಿವ ಶರೀರವನ್ನು ಪಟ್ಟಣಕ್ಕೆ ತಂದು ಮೆರವಣಿಗೆಯ ನಡೆಸಲಾಯಿತು.

ಹರಿದು ಬಂದ ಜನಸಾಗರ: ಎಚ್.ಟಿ.ರಾಜೇಂದ್ರ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮದಿಂದ ಪಟ್ಟಣದ ಶಾರದ ವಿದ್ಯಾಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ರಸ್ತೆ ಉದ್ದಕ್ಕೂ ಜನರು ಮೃತರ ನಿಧನಕ್ಕೆ ಕಂಬನಿ ಮಿಡಿದು ಅಂತಿಮ ನಮನ ಸಲ್ಲಿಸಿದರು.

ಎಚ್.ಟಿ.ರಾಜೇಂದ್ರ ಅವರ ನಿಧನದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟು ಮುಚ್ಚಿ ಗೌರವ ಸಲ್ಲಿಸಿದರು. ಮೆರವಣಿಗೆ ವೇಳೆ ಪಟ್ಟಣದ ಶಾಲೆ, ಆಸ್ಪತ್ರೆ, ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಅಂತಿಮ ನಮನ ಸಲ್ಲಿಸಿದರು. ಶಾರದ ವಿದ್ಯಾಮಂದಿರ ಶಾಲೆಯ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಅಂತಿಮ ದರ್ಶನ ಪಡೆದರು.

ಶಾಸಕ ಟಿ.ಡಿ.ರಾಜೇಗೌಡ, ವಿಧಾನಪರಿಷತ್ ಸದಸ್ಯರಾದ ಬೋಜೇಗೌಡ, ಸಿ.ಟಿ.ರವಿ, ಭದ್ರಾ ಕಾಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್, ಮಾಜಿ ಶಾಸಕ ಡಿ.ಎನ್.ಜೀವರಾಜ್, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಸೇರಿ ಹಲವು ಗಣ್ಯರು ಮೃತರ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.

Funeral of late socialist thinker H.T. Rajendra

 

Share

Leave a comment

Leave a Reply

Your email address will not be published. Required fields are marked *

Don't Miss

ಗಿರಿ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ

ಚಿಕ್ಕಮಗಳೂರು: : ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರು ಮತ್ತು ಸ್ಥಳೀಯ ಜನತೆಯ ಹಿತದೃಷ್ಟಿಯಿಂದ ಗಿರಿ ಪ್ರದೇಶದ ಕೆಲವು ಪ್ರವಾಸೋದ್ಯಮ ಸ್ಥಳಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ...

ದೇವನಹಳ್ಳಿ 1,777 ಎಕರೆ ಭೂ ಸ್ವಾಧೀನ ನೋಟಿಫಿಕೇಶನ್ ರದ್ದು

ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸುತ್ತಮುತ್ತಲಿನ ಒಟ್ಟ 13 ಹಳ್ಳಿಗಳ 1,777 ಎಕರೆ ಭೂ ಸ್ವಾಧೀನ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ. ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ  ನೇತೃತ್ವದಲ್ಲಿ ನಡೆದ ರೈತರು,...

Related Articles

ರೈತ ಸಂಘಟನೆ ದಾರಿ ಬಿಟ್ಟಿತು ? ಎಲ್ಲಿಗೆ ಪಯಣ ಯಾವುದೋ ದಾರಿ !

ಮಾಸದಿರಲಿ ಬದಲಾಯಿಸದಿರಲಿ ರೈತರ ಹೆಗಲ ಮೇಲೇರಿರುವ ಶಾಲಿನ ಹಸಿರು ಬಣ್ಣ. ದೇಶಕ್ಕೆ ಅನ್ನ ಕೊಡುವ ರೈತ...

ದೇಶಭಕ್ತಿಯ ಪ್ರತೀಕ ಮಹಾರಾಣಾ ಪ್ರತಾಪ್‌ಸಿಂಗ್

ಚಿಕ್ಕಮಗಳೂರು:  ಪರಾಕ್ರಮ-ಆದರ್ಶ ದೇಶಭಕ್ತಿಯ ಪ್ರತೀಕ ಮಹಾರಾಣಾ ಪ್ರತಾಪಸಿಂಗ್ ಎಂದು ಕರ್ನಾಟಕ ರಜಪೂತ ಮಹಾಸಭಾ ನಿರ್ದೇಶಕ ಬೆಂಗಳೂರಿನ...

ದತ್ತು ಸಂಸ್ಥೆಯ ಸಿಬ್ಬಂದಿ ಆಯಾ ಅಮಾನತು

ಚಿಕ್ಕಮಗಳೂರು: ನಗರದ ದತ್ತು ಸಂಸ್ಥೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಒಂದು ವರ್ಷ ಮೂರು ತಿಂಗಳ ಹೆಣ್ಣುಮಗು ಸುಟ್ಟ...

ವೈದ್ಯ ಇಲ್ಲದ ಕಳಸ ತಾಲೂಕು ಆಸ್ಪತ್ರೆ

ಚಿಕ್ಕಮಗಳೂರು: ಕಳಸ ತಾಲೂಕು ಆಸ್ಪತ್ರೆಯಲ್ಲಿ ಓರ್ವ ವೈದ್ಯರೂ ಇಲ್ಲದೆ ಜನರು ಚಿಕಿತ್ಸೆಗೆ ಪರದಾಡುವಂತಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು...