ಚಿಕ್ಕಮಗಳೂರು: ಅರಣ್ಯ ಇಲಾಖೆಯ ಸಖರಾಯ ಪಟ್ಟಣದ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು ಮೂವತ್ತೈದು ವರ್ಷದ ಶರತ್ ಎಂಬ ಗಾರ್ಡ್ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾನೆ.ಸಖರಾಯ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾರ್ಡ್ ಶರತ್ ಸದಾಕಾಲವೂ ಕುಡಿದಿರುತ್ತಿದ್ದ ಎಂದು ತಿಳಿದು ಬಂದಿದೆ. ಅತಿಯಾಗಿ ಕುಡಿದು ತನ್ನ ರೂಮ್ ಗೆ ಹೋಗುವುದು ಬಿಟ್ಟು ಬೇರೆ ಮನೆಯ ಮೆಟ್ಟಿಲು ಹತ್ತಿ ಹೋದಾಗ ಕಳ್ಳ ಎಂದು ಭಾವಿಸಿ ಜನ ದೂರು ನೀಡಿದಾಗ ಪೊಲೀಸರು ಶರತ್ ನನ್ನು ಠಾಣೆಗೆ ಕರೆದುಕೊಂಡು ಬಂದು ಬುದ್ದಿ ಹೇಳಿ ಕಳಿಸಿದ್ದರಂತೆ.
ಅತಿಯಾದ ಕುಡಿತದ ದಾಸನಾಗಿದ್ದ ಶರತ್ ಕಾಣೆಯಾಗಿದ್ದು ಅವರ ತಂದೆ ದೂರು ನೀಡಿದ್ದು ಪೊಲೀಸರು ಹುಡುಕುತ್ತಿದ್ದಾರೆ.ಸಖರಾಯ ಪಟ್ಟಣ ಸಮೀಪದ ಕಾವಲ್ ಬಳಿ ಅವನು ಧರಿಸಿದ್ದ ಜರ್ಕಿನ್ ಸಿಕ್ಕಿದೆ ಎಂದು ತಿಳಿದು ಬಂದಿದೆ.
Forest guard Sharath goes missing
Leave a comment