ಚಿಕ್ಕಮಗಳೂರು : ಕಡೂರಿನ ಸಾದಿಕ್ ಎಂಬಾತ ಕುಖ್ಯಾತ ಖದೀಮ ಸಣ್ಣಪುಟ್ಟ ಕಳ್ಳತನ ಮಾಡುತ್ತಾ ಇಂದು ಇಂಟರ್ ನ್ಯಾಶನಲ್ ದುಬೈನಲ್ಲಿ ಭಾರಿ ಮೊಬೈಲ್ ಶೋರೂಮ್ ಮಾಲೀಕ ಆದರೂ ಈತ ಮನೆ ಕಳ್ಳತನ ಮಾಡುವ ಕಸುಬು ನಿರಂತರವಾಗಿ ನಡೆಸುತ್ತಿದ್ದು ರಾಮನಗರ ಜಿಲ್ಲೆಯ ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ಕಡೂರು, ಬೀರೂರು ಮತ್ತು ಎಮ್ಮೆದೊಡ್ಡಿ ಪ್ಲಾಂಟೇಷನ್ನಲ್ಲಿ ಬೀಟೆ ಸಾಗುವಾನಿ ಹೊನ್ನೆ ಮರಗಳನ್ನು ಕದ್ದು ಹಲವು ಸಲ ಪೊಲೀಸರ ವಶದಲ್ಲಿದ್ದವನನ್ನು ಬಿಡಿಸಲಾಗಿದೆ. ನಂತರ ಈತ ಶ್ರೀಗಂಧದ ಕಳ್ಳತಕ್ಕೆ ಇಳಿದು ಅಲ್ಲಿಂದ ಮನೆ ಕಳ್ಳನಾಗಿ ಕರ್ನಾಟಕದ ಇಪ್ಪತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 65 ಕ್ಕೂ ಹೆಚ್ಚು ಕಡೆ ಮನೆ ಕಳ್ಳತನ ಮಾಡಿದ್ದಾನೆ.
ಜೈಲಿನಲ್ಲಿ ಇದ್ದ ಮೈಸೂರಿನ ಫಯಾಜ್ ಎಂಬವವನು ಮರಕಳ್ಳತನಕ್ಕಿಂತ ಮನೆ ಕಳ್ಳತನ ಮಾಡು ಎಂದು ಸಲಹೆ ಇಂದು ಭಾರಿ ದರೋಡೆ ಮಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ಕಳ್ಳತನ ಮಾಡಲು ಪ್ರತಿ ಕೃತ್ಯಕ್ಕೆ ಹೊಸಬರಿಗೆ ಅವಕಾಶದ ಜೊತೆಗೆ ಕಾರು ಕೂಡಾ ಬದಲಾಯಿಸುವುದು ಮತ್ತು ಕೃತ್ಯ ಮಾಡಿದ ಕಡೆ ಪೊಲೀಸರು ವರ್ಗಾವಣೆ ಆಗುವತನಕ ಆತ್ತ ಸುಳಿಯುತ್ತಿರಲಿಲ್ಲಾ ಎಂಬ ಚಾಲಾಕಿ ವಿಶೇಷ ಎಂದರೆ ಈತ ಕಳ್ಳತನ ಮಾಡುತ್ತಿದಿದ್ದು ಭಾನುವಾರ ಮಾತ್ರ. ತಲೆಗೆ ಟೋಪಿ, ಕೈಗವಸು ಮಾಸ್ಕ್ ಧರಿಸಿ ಟೊಲ್ ಗೇಟ್ ತಪ್ಪಿಸಿ ಮನೆ ಹಿಂಬಾಗಿಲಿನಿಂದ ಎಂಟ್ರಿ ಕೊಟ್ಟರೆ ಮುಗಿತು ಒಟ್ಟಾರೆ ಪೊಲೀಸರಿಗೆ ಕುರುಹು ಸಿಗದಂತೆ ಮಾಸ್ಟರ್ ಪ್ಲಾನ್ ಮಾಡುತ್ತಿದ್ದನಂತೆ ಇದರ ಜೊತೆಗೆ ಕದ್ದ ಮಾಲು ಪೊಲೀಸರು ಪತ್ತೆ ಹಚ್ಚಲು ಸಾಧ್ಯವಾಗದಂತೆ ಖತರ್ ನಾಕ್ ಪ್ಲಾನ್ ಮಾಡಿ ಬಚಾವ್ ಆಗಿದ್ದಾನೆ.
ಕಳ್ಳತನ ಮಾಡಿ ಬಾಂಬೆಗೆ ಹೋಗಿ ಅಲ್ಲಿಂದ ದುಬೈ ತಲುಪಿ ವಿಲಾಸಿ ಜೀವನ ನಡೆಸುತ್ತಿದ್ದ ಈತನಿಗೆ ದುಬೈನಲ್ಲಿ ಒಬ್ಬಳು ಬೆಂಗಳೂರಿನಲ್ಲಿ ಒಬ್ಬಳು ಹೀಗೆ ಇಬ್ಬರು ಹೆಂಡಿರ ಕಳ್ಳ ಗಂಡ, ಎರಡು ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ, ಸದ್ಯ ಈತನನ್ನು ಮಾಗಡಿ ಪೊಲೀಸ್ ದಕ್ಷತೆಯಿಂದ ಬಂಧಿಸಿದ್ದಾರೆ.
ಎರಡು ತಿಂಗಳ ಹಿಂದೆ ಮಾಗಡಿ ಠಾಣ ವ್ಯಾಪ್ತಿಯಲ್ಲಿ ಒಂದು ಕೆಜಿ ಚಿನ್ನ ಕದ್ದು ಪರಾರಿಯಾಗಿದ್ದ ಈತನ ಬೆನ್ನು ಬಿದ್ದು ಈತ ಹಳ್ಳಿಯ ಪೆಟ್ಟಿಗೆ ಅಂಗಡಿ ಮುಂದೆ ಟೀ ಕುಡಿದು ಸಿಗರೇಟ್ ಸೇದಿದ ದೃಶ್ಯ ಸಿಸಿ ಟಿವಿಯಲ್ಲಿ ಸಿಕ್ಕದೆ ತಕ್ಷಣ ಕಾರ್ಯಾಚರಣೆ ನಡೆಸಿ ಶಿವಮೊಗ್ಗ ಮತ್ತು ತುಮಕೂರು ಜೈಲಿನಲ್ಲಿ ಈತನ ಇತಿಹಾಸ ಕೆದಕಿ ಅಮೇರಿಕಾ ಪೊಲೀಸರ ನೆರವು ಪಡೆದು ದುಬೈಗೆ ಹಾರಲು ಬಾಂಬೆ ವಿಮಾನ ನಿಲ್ದಾಣದಲ್ಲಿ ಬಂಧಿಸಿ ನಾಲ್ಕು ವರೆ ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. ಈತ ತೀರ್ಥಹಳ್ಳಿಯ ಕಮ್ಮರಡಿ ಗ್ರಾ.ಪಂ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಕೊಲೆ ಕೇಸ್ ನಲ್ಲೂ ಆರೋಪಿ. ಕಡೂರಿನಿಂದ ದುಬೈ ತನಕ ಸಾದಿಕ್ ನಡೆಸಿದ ಕತಾರ್ ನಾಕ್ ಕಳ್ಳತನಗಳ ಸರಮಾಲೆಗಳ ದಂಗು ಬಡಿಸುತ್ತದೆ.
Leave a comment