ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದ ಸ.ನಂ. ೧೩೪ರಲ್ಲಿ ನಿಯಮಬಾಹಿರವಾಗಿ ನಡೆಸುತ್ತಿರುವ ಅನುಸೂಯಮ್ಮ ಎಂಬವರ ಮಾಲೀಖತ್ವದ ದೇವಿರಮ್ಮ ಸ್ಪೂನ್ ಕ್ರಷರ್‌ನ್ನು ಮುಂದಿನ ೧೫ದಿನಗಳ ಗಡುವಿನೊಳಗೆ ನಿಲ್ಲಿಸಿ ಕಲ್ಲು ಗಣಿಗಾರಿಕೆಯಿಂದ ಪಕ್ಕದ ಜಮೀನಿನ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸದಿದ್ದರೆ ಗಣಿಗಾರಿಕೆಯ ವಿರುದ್ಧ ಚಳುವಳಿ ರೂಪಿಸಬೇಕಾಗುತ್ತದೆ ಎಂದು ರಾಜ್ಯ ರೈತಸಂಘದ ಮಾಜಿ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಎಚ್ಚರಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದ ಸ.ನಂ. ೧೩೪ರಲ್ಲಿ ೨೦ ವರ್ಷಗಳ ಗುತ್ತಿಗೆ ಆಧಾರದ ಮೇಲೆ ೨೦ ಎಕರೆ ಪ್ರದೇಶದ ಸರ್ಕಾರಿ ಜಾಗವನ್ನು ಕಲ್ಲು ಗಣಿಗಾರಿಕೆಗೆ ನಡೆಸಲು ಪರವಾನಗಿ ಪಡೆದಿರುತ್ತಾರೆ. ಇದಲ್ಲದೆ ಇನ್ನೂ ೫ಜನ ಗುತ್ತಿಗೆ ದಾರರಿಗೆ ತಲ ೧-೦೦ ರಿಂದ ೪-೦೦ಎಕರೆ ವರೆಗೆ ಕಲ್ಲು ಗಣಿಗಾರಿಕೆಗೆ ಗುತ್ತಿಗೆ ಕೊಡಲಾಗಿದೆ.ಎಂದು ಹೇಳಿದರು.
ಈ ಪ್ರದೇಶ ಸುತ್ತ ಮರ್ಲೆ, ಮರ್ಲೆ ಹೊಸಳ್ಳಿ, ಹುಚ್ಚಮ್ಮನಹಳ್ಳಿ, ಹನುಮನಹಳ್ಳಿ, ಮಣೆನಹಳ್ಳಿ ಗ್ರಾಮಗಳು ಇದ್ದು, ಗಣಿಗಾರಿಕೆ ಮಾಡಲು ಮೆಗಾಬ್ಲಾಸ್ಟ್ ಮುಖಾಂತರ ಕಲ್ಲುಬಂಡೆ ಸಿಡಿಸುವುದರಿಂದ ಪಕ್ಕದ ಜಮೀನುಗಳಿಗೆ ಕಲ್ಲುಗಳು ಸಿಡಿದು ಅಲ್ಲಿ ಕೆಲಸ ಮಾಡುವ ರೈತರಿಗೆ ತೊಂದರೆಯಾಗುತ್ತಿದೆ ಎಂದರು ಹೇಳಿದರು.
ಅಲ್ಲದೆ ಗಣಿಧೂಳು ನೀರಿನ ಮೂಲ ಸೇರಿಕೊಂಡು ಗ್ರಾಮಾಂತರ ಪ್ರದೇಶದ ಕೆರೆ, ಕಟ್ಟೆಗಳು ಮಲೀನವಾಗುತ್ತಿವೆ. ಈ ನಿರನ್ನು ಬಳಕೆ ಮಾಡಿದ ಜನ ಜಾನುವಾರುಗಳಿಗೆ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ. ಬಂಡೆಗಳ ಸಿಡಿತದಿಂದ ಹಳ್ಳಿಗಳ ಮನೆಗಳ ಗೋಡೆ ಬಿರುಕು ಬಿಟ್ಟಿದ್ದು ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ದೂರು ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಸುರಕ್ಷಿತ ವಲಯದಲ್ಲಿ ಗಣಿಗಾರಿಕೆ ಮಾಡಬೇಕೆಂಬ ನಿಯಮ ಇದ್ದರು ಆ ನಿಯಮವನ್ನು ಪಾಲಿಸಿರುವುದಿಲ್ಲ. ಸ.ನಂ,೧೩೩ರಲ್ಲಿ ಕೆರೆ ಇದೆ ಎಂಬ ಕಂದಾಯ ಇಲಾಖೆಯ ಆಕ್ಷೇಪಣ ಪತ್ರವನ್ನು ಪರಿಗಣಿಸಿಲ್ಲ. ಅರಣ್ಯ ಇಲಾಖೆಯು ಗಣಿಗಾರಿಕೆ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದರು ನಿಯಮ ಉಲ್ಲಂಘಿಸಲಾಗಿದೆ. ಮಣಿಗಾರಿಕೆ ಪ್ರದೇಶ ಹೊಂದಿಕೊಂದ್ದು ಈಗಾಗಲೇ ಆ ಭಾಗದಲ್ಲಿ ಬೆಳೆದ ನೂರಾರು ಮರಗಳು ಗಣಿಗಾರಿಕೆಗೆ ಬಲಿಯಾಗಿವೆ ಎಂದರು.
ವನ್ಯ ಪ್ರಾಣಿಗಳಾದ ಚಿರತೆ, ಕರಡಿಗಳ ಆವಾಸ ಸ್ಥಾನ ಆಗಿದ್ದರು ಲೆಕ್ಕಿಸದೆ ಗಣಿಗಾರಿಕೆ ಮುಂದುವರಿಸಲಾಗುತ್ತಿದೆ. ಈಗಾಗಲೇ ನೂರಾರು ಅಡಿಗಳಷ್ಟು ಆಳಕ್ಕೆ ಗುಂಡಿ ತೆಗೆದು ಕಲ್ಲುಗಳನ್ನು ಎತ್ತುತ್ತಿದ್ದು ಗುಡ್ಡು ಕುಸಿಯುವ ಭೀತಿ ಉಂಟಾಗಿದೆ. ನೀರಿನ ಮೂಲಕ್ಕೆ ದಕ್ಕೆಯಾಗುವ ಆದ್ಯತೆ ಇದೆ. ಈ ಜಾಗಕ್ಕೆ ಕೇವಲ ೧೦೦ ಮೀಟರ್ ಅಂತರವಿದ್ದು, ಶ್ರದ್ಧಾ ಕೇಂದ್ರ ತಿರುಮೇಶ್ವರ ದೇವಾಲಯ ಇದ್ದರು ಅದನ್ನು ಲೆಕ್ಕಿಸದೆ ವಾಲಯದ ಸುತ್ತ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಈ ಕಾರಣದಿಂದ ನಿಯಮ ಮೀರಿ ಗಣಿಗಾರಿಕೆ ನಡೆಸುತ್ತಿರುವ ಮೇಲ್ಕಂಡವರ ವಿರುದ್ಧ ಶಾಕ್ರ ಕ್ರಮ ಕೈಗೊಂಡು ಗಣಿಗಾರಿಕೆ ಪರವಾನಗಿ ರದ್ದುಗೊಳಿಸಬೇಕಾಗಿ ಹಾಗೂ ಗಣಿಗಾರಿಕೆಯಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಮಹಾರ ಕೊಡಿಸಿಕೊಡಬೇಕಾಗಿ ಒತ್ತಾಯಿಸಿದರು.
ಮರ್ಲೆ ಹೊಸಳ್ಳಿ ಗ್ರಾಮದ ಸಂತ್ರಸ್ಥೆ ಕಲ್ಪನ ಮಾತನಾಡಿ ನಮ್ಮ ಕುಟುಂಬಕ್ಕೆ ಸೇರಿದ ೧೭ಎಕರೆ ಕೃಷಿ ಭೂಮಿ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಹೊಂದಿಕೊಂಡಂತಿದೆ.ಈ ಪ್ರದೇಶದ ಜಾಗದಲ್ಲಿ ಒಂದು ಗೋಕಟ್ಟೆ ಇದ್ದು, ಜಾನುವಾರುಗಳು ಕುಡಿಯಲು ಈ ನೀರನ್ನೆ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಜಾನುವಾರುಗಳ ಆರೋಗ್ಯ ಕೆಡುತ್ತಿದೆ ಎಂದು ಹೇಳಿದರು.
ನಮ್ಮ ಜಮೀನಿನಲ್ಲಿ ಲಕ್ಷಾಂತರ ರೂ ಸಾಲ ಮಾಡಿ ಕುರಿ ಸಾಕಣಿಕೆ ಮಾಡುತ್ತಿದ್ದಾರೆ. ಹಗಲು ಪಾತ್ರಿ ಎನ್ನದೆ ಬಂಡೆಗಳನ್ನು ಸಿಡಿಸುವ ಪರಿಣಾಮ ಇವರಿಗೆ ಸೇರಿದ ಸುಮಾರು ಕುರಿಗಳು ಅಸುನೀಗಿದೆ. ಗರ್ಭ ಧರಿಸಿದ ೪೦ ಕುರಿಗಳು ಪಾವನ್ನಪ್ಪಿವೆ. ಈ ಬಗ್ಗೆ ಪಶು ವೈದ್ಯಕೀಯ ಇಲಾಖೆಯ ವೈದ್ಯರು ಪರಿಶೀಲಿಸಿದ್ದು ಗಣಿಗಾರಿಕೆಯಿಂದ ಈ ಸಾವು ನೋವುಗಳು ಸಂಭವಿಸಿವೆ ಎಂದು ಅಭಿಪ್ರಾಯ ಪಟ್ಟಿರುವುದಾಗಿ ರೈತರು ತಿಳಿಸಿದ್ದಾರೆ ಎಂದರು.
ಇಷ್ಟೆಲ್ಲಾ ಅನಾವುತ ಸೃಷ್ಟಿಸುತ್ತಿರುವ ಗಣಿಗಾರಿಕೆ ಮಾಲೀಕರ ಬಳಿ ಹೋಗಿ ಹೇಳಿಕೊಂಡು ಆಗುತ್ತಿರುವ ತೊಂದರೆ ತಪ್ಪಿಸಲು ಮನವಿ ಮಾಡಿದರೆ ಅವರ ಮ್ಯಾನೇಜರ್ ಮತ್ತು ಮಾಲೀಕರಾದ ಸುದರ್ಶನ್‌ಎಂಬವರೊಂದಿಗೆ ಮಾತಿನ ಚಕಮಕಿ ನಡೆದಿರುತ್ತದೆ. ಸ್ಥಳದಲ್ಲಿ ನಾನೊಬ್ಬಳೆ ಮಹಿಳೆಯಾದುದರಿಂದ ಮನಸೊ ಇಚ್ಛೆ ಅವಾಚ್ಯ ಶಬ್ದಗಳಿಂದ ನಾಲೈದು ಜನ ನನ್ನನ್ನು ನಿಂದಿಸಿದ್ದಲ್ಲದೇ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಅಕ್ರಮವಾಗಿ ಪರವಾನಗಿ ನೀಡಿರುವ ಗಣಿಗಾರಿಕಾ ಅಧಿಕಾರಿಗಳ ವಿರುದ್ಧ ಮಾನ್ಯ ಲೋಕಾಯುಕ್ತ ರವರಿಗೆ ದೂರು ಸಲ್ಲಿಸಿದ್ದು, ಸ್ಥಳ ಪರಿಶೀಲನೆಗೆ ಗಣಿಗಾರಿಕಾ ಇಲಾಖೆಯ ಅಧಿಕಾರಿಗಳಾದ ನವೀನ್, ಹಿಂದಿನ ಹಿರಿಯ ಭೂ ವಿಜ್ಞಾನಿ, ಹಿರಿಯ ಭೂ ವಿಜ್ಞಾನಿ, ವಿಂಧ್ಯಾ, ಸರ್ಕಾರಿ ಅಡವಿ ಭೂಮಾಪಕ ದೊರೆ ರಾಜುಬಂದಿದ್ದ ಸಂದರ್ಭದಲ್ಲಿ ಮಾಲೀಕರು ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿ, ಗ್ರಾಮಸ್ಥರು ಹಾಗೂ ತನಿಖಾಧಿಕಾರಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡಿರುತ್ತಾರೆ. ನಿಯಮಬಾಹಿರಚಟುವಟಿಕೆ ನಡೆದುತ್ತಿರುವವ ಅಕ್ರಮಕೋರರ ಪರವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ಜಿಲ್ಲಾ ಗೌರವಾಧ್ಯಕ್ಷಎಂ.ಸಿ. ಬಸವರಾಜ್,ಮುಖಂಡರಾದ ಲೋಕೇಶ್,ಶಿವಕುಮಾರ್,ದೇವರಾಜ್,ಕುಮಾರಸ್ವಾಮಿ,ಉಮೇಶ್ ಇದ್ದರು.
Farmers’ union movement against illegal mining
Leave a comment