ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿ ಸರ್ವೇ ನಂಬರ್ 4 ರಲ್ಲಿ ಶಿವಕುಮಾರ್ ಎಂಬ ರೈತ ಈಗಾಗಲೇ 1ಎಕರೆ 20 ಗುಂಟೆ ಜಮೀನಿನಲ್ಲಿ ತೋಟ ಬೆಳೆದಿದ್ದು ಇಂದು ಅರಣ್ಯ ಇಲಾಖೆಯವರು ತೆರವು ಗೊಳಿಸಲು ಹೋದಾಗ ರೈತರು ತೀವ್ರವಾಗಿ ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರದ ದ್ವಂದ್ವ ನೀತಿಯಿಂದ ಅಧಿಕಾರಿಗಳ ಉಪಟಳ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಬಾವಿಕೆರೆಯಲ್ಲಿ ರಸ್ತೆಗೆ ಕಾರು ಬೈಕ್ ಅಡ್ಡಲಾಗಿ ನಿಲ್ಲಿಸಿ ರಸ್ತೆ ತಡೆ ನಡೆಸಿದರು.3 ಎಕರೆ ಜಮೀನ ಒಳಗಡೆ ಇದ್ದರೆ ತೆರವು ಮಾಡುವಂತಿಲ್ಲ ಎಂಬ ನಿಯಮವನ್ನು ಗಾಳಿಗೆ ತೂರಿ ಇಂದು ತೋಟ ತೆರವುಗೊಳಿಸಲು ಬಂದ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ವೇ ನಂಬರ್ 4 ರಲ್ಲಿ 383 ಎಕರೆ ಜಮೀನಿನಲ್ಲಿ ಸಣ್ಣಪುಟ್ಟ ರೈತರು ಅರ್ಧ ಎಕರೆ ಒಂದು ಎಕರೆ ,ಎರಡು ಎಕರೆ ತೋಟ ಬೆಳೆದಿದ್ದು ಅಡಿಕೆ ಚೇಣಿ ಮಾಡಲು ಕೂಡ ಯಾರು ಮುಂದೆ ಬರುತ್ತಿಲ್ಲ ಎಂದು ಬಾವಿಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಬು86 ತಿಳಿಸಿದ್ದಲ್ಲದೆ ಇದು ರೈತರ ಸಾವು ಬದುಕಿನ ಪ್ರಶ್ನೆ ಎನ್ನುತ್ತಾರೆ. ರೈತರು ಡಿ.ಎಫ್.ಒ ಅಶಿಸ್.ಅರ್.ಎಫ್.ಒ ರಾಘವೇಂದ್ರ ಮತ್ತು ತರೀಕೆರೆ ಎ.ಸಿ ಕಾಂತರಾಜ್, ಮೇಲೆ ಕೆಂಡ ಕಾರುತ್ತಿದ್ದಾರೆ.
ಅರಣ್ಯ ಇಲಾಖೆಯವರ ಲೆಕ್ಕಾಚಾರದಂತೆ ಹೋದರೆ ತರೀಕೆರೆ ತಾಲ್ಲೂಕು ತೆರವುಗೊಳಿಸ ಬೇಕಾಗುತ್ತದೆ. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಬು86 ಜಯಸ್ವಾಮಿ,ಸೀತರಾಮ್,ಕುಮಾರ್ ಮತ್ತು ಶಿವು ಸೇರಿದಂತೆ ಮಹಿಳೆಯರು ಸೇರಿದಂತೆ ನೂರಾರು ಜನ ಪ್ರತಿಭಟನೆ ನಡೆಸಿದ್ದಾರೆ.
Farmers protest against the forest department
Leave a comment