ಚಿಕ್ಕಮಗಳೂರು: ದೇಶದಲ್ಲಿ ರೈತ ವಿರೋಧಿ ಕಾಯ್ದೆಗಳು ಜಾರಿಗೊಂಡಲ್ಲಿ ಸಣ್ಣಪು ಟ್ಟ ಕೃಷಿಕರು ಬಹುರಾಷ್ಟ್ರೀಯ ಕಂಪನಿಗಳ ಅಡಿಯಾಳಾಗುತ್ತೇವೆ. ವಿದೇಶಿ ವಸ್ತುಗಳ ಆಮದಿನಿಂದ ಸ್ಥಳೀ ಯ ಹೈನುಗಾರಿಕೆ ವೃತ್ತಿ ನಶಿಸಿ, ಕಾರ್ಪೋರೇಟ್ ಕಂಪನಿಗಳ ಬಲಿಪಶುಗಳಾಗುತ್ತೇವೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ಗೆ ಎಚ್ಚರಿಸಿದರು.
ತಾಲ್ಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಸ್ಥಾಪಿತಗೊಂಡ ಲಕ್ಯಾ ಹೋಬಳಿ ಮಟ್ಟದ ರೈತ ಸಂಘ ಉದ್ಗಾಟನಾ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭೂ ಸುಧಾರಣೆ ಕಾಯ್ದೆಯನ್ನು ಸರ್ಕಾರ ತೆಗೆದುಹಾಕಿರುವ ಪರಿಣಾಮ ನೂರಾರು ಎಕರೆ ಪ್ರದೇಶವ ನ್ನು ಬಲಾಡ್ಯರು, ವಿದೇಶಿ ಕಂಪನಿಗಳು ರೈತರಿಗೆ ಹಣದಾಸೆ ಹಾಗೂ ಉದ್ಯೋಗದ ಆಸೆ ತೋರಿಸಿ ಖರೀ ದಿಸುತ್ತಿದೆ. ಇದರಿಂದ ಭವಿಷ್ಯದಲ್ಲಿ ರೈತರ ಮಕ್ಕಳಿಗೆ ಕಂಪನಿಗಳು ನಾಮಕಾವಸ್ಥೆಗೆ ಗುಮಾಸ್ತನ ಕೆಲಸ ನೀಡಿ ಕಣ್ಣೋರೆಸುವ ತಂತ್ರ ಮಾಡುತ್ತಿವೆ ಎಂದು ದೂರಿದರು.
ವಿದೇಶಿಗರು ಉತ್ಪಾದಿಸಿದಂಥ ಡೈರಿ ಪದಾರ್ಥಗಳನ್ನು ಭಾರತದಲ್ಲಿ ಆಮದು ಮಾಡಿಕೊಳ್ಳಲು ಒತ್ತಡ ಹೇರುತ್ತಿವೆ. ಮುಂದೊಂದು ದಿನ ತರಕಾರಿ ಬೆಳೆ ಸೇರಿದಂತೆ ಪ್ರತಿಯೊಂದು ವಸ್ತುಗಳು ಆಮದಾದರೆ ಸ್ಥಳೀ ಯರ ಬೆಳೆಗಳಿಗೆ ಆಪತ್ತು ಕಟ್ಟಿಟ್ಟಬುತ್ತಿಯಂತೆ. ಹೀಗಾಗಿ ಒಗ್ಗಟ್ಟಿನಿಂದ ಚಳುವಳಿ ರೂಪಿಸಿ ರೈತ ವಿರೋಧಿ ಕಾಯ್ದೆ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
ಹಿಂದೆ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಯಿಂದ ದೇಶಾದ್ಯಂತ ರೈತರು ದೆಹಲಿಗೆ ತೆರಳಿ ಅನೇ ಕ ತಿಂಗಳ ಕಾಲ ಪ್ರತಿಭಟಿಸಿದ ಬಳಿಕವೇ ಕಾಯ್ದೆ ಹಿಂಪಡೆಯಿತು. ಆ ಧ್ಯೇಯದಡಿ ರಾಜ್ಯದಲ್ಲೂ ಕೂಡಾ ರೈತಾಪಿ ವರ್ಗವು ಕೃಷಿ ಜಮೀನನ್ನು ಶಾಶ್ವತವಾಗಿ ರೈತರಲ್ಲಿ ಉಳಿಸಲು ಸಂಘಟನೆಯೊಂದಿಗೆ ಕೈಜೋಡಿಸು ವ ಮೂಲಕ ಕಾರ್ಪೋರೇಟ್ ವಿರುದ್ಧ ಸಿಡಿದೇಳಬೇಕಿದೆ ಎಂದು ಹೇಳಿದರು.
ರೈತ ಸಂಘದ ಮುಖ್ಯಸ್ಥ ನಂಜುಂಡಸ್ವಾಮಿ ನೇತೃತ್ವದಲ್ಲಿ ರೈತ ಪರವಾದ ಹೋರಾಟವು ಇಡೀ ವಿಶ್ವದ ರೈತರನ್ನು ಪ್ರತಿನಿಧಿಸಿತ್ತು. ಬಹುರಾಷ್ಟ್ರೀಯ ಕಂಪನಿಗಳ ತುಳಿತಕ್ಕೊಳಗಾದ ರೈತರಿಗೆ ನ್ಯಾಯ ಕೊಡಿಸುವಲ್ಲಿ ಮೂರು ದಶಕದಿಂದ ಚಳುವಳಿ ರೂಪಿಸಿ ರೈತರಿಗೆ ನ್ಯಾಯದ ತೀರ್ಮಾನ ಕೈಗೊಳ್ಳುವಲ್ಲಿ ಹೋರಾಡಿದವರು ಎಂದು ತಿಳಿಸಿದರು.
ರೈತ ಸಂಘದ ಮಾಜಿ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ ಪಂಚ ನದಿಗಳ ಉಗಮ ಸ್ಥಾನವಾಗಿರುವ ಚಿಕ್ಕಮಗಳೂರು ಜಿಲ್ಲೆಯ ನೀರು ಬಹುತೇಕ ಹೊರಜಿಲ್ಲೆಗಳ ಉಪಯೋಗಕ್ಕೆ ಬಳಸಲಾಗುತ್ತಿದೆ. ಲಕ್ಯಾ ಹೋ ಬಳಿ ಸೇರಿದಂತೆ ಸುತ್ತಮುತ್ತಲಿನ ಹೋಬಳಿ, ಗ್ರಾಮಗಳಿಗೆ ನೀರಿಲ್ಲದೇ ಕೃಷಿ ಚಟುವಟಿಕೆಗಳು ಹಿನ್ನೆಡೆಯಾಗಿ ಬೆಳೆಗಳು ಕೈಗೆ ಸಿಗದಂತಾಗಿದೆ ಎಂದು ಹೇಳಿದರು.
ಭದ್ರ ಉಪಕಣಿವೆ ಯೋಜನೆ ನೀರು ಸಿಕ್ಕರೆ ಕೆರೆಕಟ್ಟೆಗಳು ತುಂಬಿ ಜಾನುವಾರು ಹಾಗೂ ಜನ ಸಾಮಾ ನ್ಯರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಸಾವಿರ ಟಿಎಂಸಿ ನೀರು ಸಂಗ್ರಹವಾದರೆ, ೨೦೦ ಟಿಎಂಸಿ ನೀರು ಜಿಲ್ಲೆಯಿಂದ ಹರಿಯುತ್ತಿದೆ. ಜೊತೆಗೆ ರೈತರು ನೀರಿಲ್ಲದ ಕಾರಣ ಬೆಳೆಗಳು ನಾಶವಾಗುತ್ತಿದ್ದು, ಇನ್ನೊಂದೆಡೆ ಬ್ಯಾಂಕ್‌ನವರು ಸಾಲವಸೂಲಾತಿ ಹೆಸರಿನಲ್ಲಿ ರೈತರನ್ನು ಕುಗ್ಗಿಸುವಂತೆ ಮಾಡುತ್ತಿದೆ ಎಂದರು.
ಇಂದಿಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ವೈಜ್ಞಾನಿಕ ಬೆಲೆಯಿಲ್ಲದಂತಾಗಿದೆ. ಪ್ರತಿ ತರಕಾ ರಿ ಬೆಳೆಯನ್ನು ಹರಾಜಿನ ಮೂಲಕ ಖರೀದಿಸುವ ಕಾನೂನು ಜಾರಿಯಾಗಬೇಕು. ಆ ನಿಟ್ಟಿನಲ್ಲಿ ಜನಪ್ರತಿ ನಿಧಿ ಗಳು, ಸಚಿವರು ದೇಶದ ಬೆನ್ನೆಲುಬಿಗೆ ಮೌಖಿಕವಾಗಿ ಭರವಸೆ ನೀಡದೇ ಇಚ್ಚಾಶಕ್ತಿಯಿಂದ ರೈತರ ಬಗ್ಗೆ ಕಾಳ ಜಿ ವಹಿಸಬೇಕು ಎಂದು ಹೇಳಿದರು.
ನಿವೃತ್ತ ಶಿಕ್ಷಕ ಪಾಂಡುರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಚಿಕ್ಕಮಗಳೂರು ಹಾಗೂ ಕಡೂರು ತಾ ಲ್ಲೂಕಿನ ಮಧ್ಯಭಾಗದಲ್ಲಿ ಬೀಕನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು ತೀವ್ರ ಸಂಕಷ್ಟದ ನರಳಾಡುತ್ತಿದೆ. ಪಕ್ಕ ದಲ್ಲೇ ಅಯ್ಯನಕೆರೆ ನದಿಯಿದ್ದರೂ ಸುತ್ತಮುತ್ತಲಿನ ರೈತರಿಗೆ ನೀರೋದಗಿಸುತ್ತಿಲ್ಲ. ಕನಿಷ್ಟ ಪಕ್ಷ ಕೋಡಿ ನೀರ ನ್ನು ಪೈಪ್‌ಲೈನ್ ಮೂಲಕ ಹರಿಸಿದರೆ ಬೇಸಿಗೆಯಲ್ಲಿ ರೈತರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾ ಗುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಉಪಾಧ್ಯಕ್ಷರಾದ ಡಿ.ಕುಮಾರಸ್ವಾಮಿ, ಛಾಯಾಪತಿ, ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜ್, ಖಜಾಂಚಿ ಲೋಕೇಶ್, ಸಂಘಟನಾ ಕಾರ್ಯದ ರ್ಶಿಗಳಾದ ಜಯರಾಮ್, ದೇವರಾಜ್ ಕಾರ್ಯದರ್ಶಿ ಉಮೇಶ್, ಕಡೂರು ತಾಲ್ಲೂಕು ಅಧ್ಯಕ್ಷ ಈಶ್ವರಪ್ಪ, ಯುವಘಟಕದ ಕಾರ್ಯದರ್ಶಿ ಯುವರಾಜ್, ಬಿಳೇಕಲ್ಲಹಳ್ಳಿ ಗ್ರಾ.ಪಂ. ಅಧ್ಯಕ್ಷ ತಿಮ್ಮೇಗೌಡ, ಕೊಪ್ಪ ಕಾರ್‍ಯ ದರ್ಶಿ ಕೃಷ್ಣೇಗೌಡ, ಮುಖಂಡರುಗಳಾದ ರವೀಶ್‌ಬಸಪ್ಪ, ಸೋಮಶೇಖರ್, ರವಿಕುಮಾರ್, ಬಸವರಾಜ್, ಎಸ್.ಕೆ.ರಾಜು ಮತ್ತಿತರರು ಉಪಸ್ಥಿತರಿದ್ದರು.
Farmers are victims of corporate greed
Leave a comment